Advertisement
ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್‌ಡಿಎಂ) ಆಯುರ್ವೇದ ಕಾಲೇಜಿನ 22ನೇ ಪದವಿ ಪ್ರದಾನ ಸಮಾರಂಭವಾದ ಶಿಖಾನುಪ್ರವೇಶ ದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿದರು.
Related Articles
Advertisement
ಯುವ ವೈದ್ಯರಿಗೆ ವೃತ್ತಿ ಪರತೆ ಅಗತ್ಯ: ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾನಿಲಯದ ಕುಲಪತಿ ಡಾ.ಎಸ್.ಸಚ್ಚಿದಾನಂದ ಅವರು ಮಾತ ನಾಡಿ, ಯುವ ವೈದ್ಯರು ಮಾದರಿ ಜೀವನ ನಡೆಸ ಬೇಕು. ತಮ್ಮ ಜ್ಞಾನವನ್ನು ಮೊನಚುಗೊಳಿಸುತ್ತಾ, ಇತರೆ ತಜ್ಞ ವೈದ್ಯರೊಡನೆ ಚರ್ಚಿಸುತ್ತಾ, ರೋಗಿ ಗಳೊಡನೆ ಉತ್ತಮ ಬಾಂಧವ್ಯ ಇರಿಸಿಕೊಂಡು ವೃತ್ತಿ ಪರತೆ ಹೊಂದಬೇಕು. ನೀವು ಹಣದ ಹಿಂದೆ ಹೋಗದೇ ಅದೇ ನಿಮ್ಮನ್ನು ಹಿಂಬಾಲಿಸುವಂತೆ ಸಾರ್ಥಕ ಕಾಯಕ ಮಾಡಿ. ನಿಮ್ಮ ಮಾತೃ ವಿದ್ಯಾ ಸಂಸ್ಥೆಯೊಡನೆ ನಿರಂತರ ಸಂಪರ್ಕದಲ್ಲಿರುವುದು ಒಳಿತು ಎಂದು ಕಿವಿಮಾತು ಹೇಳಿದರು.
ದೇಶ, ವಿದೇಶಗಳಲ್ಲಿ ಪ್ರಖ್ಯಾತಿ: ಕಾಲೇಜಿನ ಪ್ರಾಂಶು ಪಾಲ ಡಾ. ಪ್ರಸನ್ನ ನರಸಿಂಹರಾವ್ ಮಾತನಾಡಿ, ಹಾಸನದ ಎಸ್‌ಡಿಎಂ ಆಯುರ್ವೇದ ಕಾಲೇಜು ದೇಶದ ಹಲವು ರಾಜ್ಯಗಳ ಮತ್ತು ವಿದೇಶಗಳ ವಿದ್ಯಾರ್ಥಿಗಳನ್ನು ಹೊಂದಿದೆ. ಆ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆದು ಹೋದ ನಂತರ ತಮ್ಮ ತಮ್ಮ ರಾಜ್ಯಗಳಲ್ಲಿ ತಮ್ಮ ವೈಶಿಷ್ಟ್ಯತೆಯ ಮೂಲಕ ಪ್ರಸಿದ್ಧಿ ಪಡೆದು ನಮ್ಮ ಸಂಸ್ಥೆಯ ಹೆಸರನ್ನು ವಿಶ್ವದೆಲ್ಲೆಡೆ ಹರಡುವುದು ಸಂತಸದ ವಿಷಯ ಎಂದರು.
ಈ ಪದವಿ ಪ್ರದಾನ ಸಮಾರಂಭದಲ್ಲಿ 68 ಬಿಎಎಂಎಸ್ ಪದವೀಧರರು, 93 ವಿವಿಧ ಸ್ನಾತಕೋತ್ತರ ವಿಭಾಗಗಳ ಪದವೀಧರರು, ಒಬ್ಬ ಪಿಎಚ್‌ಡಿ ಪದವೀಧರ ಗಣ್ಯರಿಂದ ಪದಪ್ರಮಾಣ ಪತ್ರ ಸ್ವೀಕರಿಸಿದರು.
ಈ ಸಮಾರಂಭದಲ್ಲಿ ಕಾಲೇಜಿನ ಸ್ನಾತಕೋತ್ತರ ವಿಭಾಗದ ನಿರ್ದೇಶಕ ಡಾ.ಗುರುದೀಪ್‌ಸಿಂಗ್, ಉಡುಪಿಯ ಸಂಶೋಧನಾ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಡಾ.ಬಿ.ರವಿಶಂಕರ್, ಬೆಂಗಳೂರಿನ ಎಸ್.ಡಿ.ಎಂ. ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಜಗದೀಶ್ ಕುಂಜಾಲ್, ಉಜಿರೆಯ ಎಸ್.ಡಿ.ಎಂ. ಯೋಗ ಪ್ರಕೃತಿ ಚಿಕಿತ್ಸಾ ವಿಜ್ಞಾನಗಳ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಶಾಂತ್ ಶೆಟ್ಟಿ, ಉಡುಪಿಯ ಎಸ್.ಡಿ.ಎಂ. ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಶ್ರೀನಿವಾಸ್ ಆಚಾರ್ಯ, ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ಡೀನ್ ಡಾ.ಯು. ಶೈಲಜಾ, ಶೈಕ್ಷಣಿಕ ವಿಭಾಗದ ಡೀನ್ ಡಾ.ಕೆ.ಜೆ.ಗಿರೀಶ್, ಹೆಚ್ಚುವರಿ ಡೀನ್ ಡಾ.ಪ್ರಕಾಶ್ ಹೆಗಡೆ ಹಾಗೂ ವೈದ್ಯಕೀಯ ಅಧೀಕ್ಷಕ ಡಾ.ಮುರಳೀಧರ್ ಪಿ.ಪ್ರಜಾರ್ ಉಪಸ್ಥಿತರಿದ್ದರು. ಡಾ.ಹರಿಣಿ ಡಾ.ಗುರುಬಸವರಾಜ್ ಯಲಗಚ್ಚಿನ ನಿರೂಪಿಸಿದರು.