Advertisement

ಕಾವೇರಿ ನದಿಗೆ ಹೆಚ್ಚಿದ ನೀರು : ಗೌತಮ ಕ್ಷೇತ್ರ ಸ್ವಾಮೀಜಿ ಸ್ಥಳಾಂತರ

08:28 AM Aug 12, 2019 | keerthan |

ಶ್ರೀರಂಗಪಟ್ಟಣ: ಕೆ.ಆರ್.ಎಸ್. ಜಲಾಶಯಕ್ಕೆ ಒಳಹರಿವು ಹೆಚ್ಚಾದ ಕಾರಣ ಡ್ಯಾಂನಿಂದ ಕಾವೇರಿ ನದಿಗೆ ಹೆಚ್ಚಿನ ನೀರು ಬಿಡಲಾಗಿದೆ. ಕಾವೇರಿ ನಡುಗಡ್ಡೆಯಲ್ಲಿದ್ದ ಗೌತಮ ಕ್ಷೇತ್ರದ ಶ್ರೀ ಗಜಾನನ ಸ್ವಾಮೀಜಿಯವರನ್ನು ಸ್ಥಳಾಂತರಿಸಲಾಗಿದೆ.

Advertisement

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಗೌತಮ ಕ್ಷೇತ್ರದ ಶ್ರೀ ಗಜಾನನ ಸ್ವಾಮೀಜಿಯವರ ಮನವೊಲಿಸಿ ತಾಲೂಕು ಆಡಳಿತದ ಅಧಿಕಾರಿಗಳು ಸ್ವಾಮೀಜಿವರೊಂದಿಗೆ 7 ಜನರನ್ನು ಸಮೀಪದ ಗ್ರಾಮವಾದ ದೊಡ್ಡೇಗೌಡನಕೊಪ್ಪಲು ಗ್ರಾಮದ ಮನೆಯೊಂದಕ್ಕೆ ಸ್ಥಳಾಂತರ ಮಾಡಲಾಯಿತು.

ಕಳೆದ ವರ್ಷ ಪ್ರವಾಹ ಬಂದರೂ ಸ್ವಾಮೀಜಿಗಳು ಆಶ್ರಮದಿಂದ ಹೊರಬಂದಿರಲಿಲ್ಲ. ಎನ್‌ ಡಿಆರ್‌ ಎಫ್‌ ಸಿಬ್ಬಂಧಿಗಳು ಸ್ವಾಮೀಜಿಗಳ ರಕ್ಷಣೆಗೆ ತೆರಳಿದಾಗಲೂ ಸ್ವಾಮೀಜಿಗಳು ನಡುಗಡ್ಡೆಯಲ್ಲಿ ಉಳಿದಿದ್ದರು.
ಆದರೆ ಈ ಬಾರಿ ಪ್ರವಾಹ ಹೆಚ್ಚಿನ ಮಟ್ಟದಲ್ಲಿರುವ ಕಾರಣದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸ್ವಾಮೀಜಿ ಸ್ಥಳಾಂತರ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next