Advertisement

ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಅನುದಾನ: ಪೂಜಾರಿ

02:46 PM Apr 09, 2022 | Shwetha M |

ಬಸವನಬಾಗೇವಾಡಿ: ಪಟ್ಟಣದ ಮೂಲಭೂತ ಸೌಲಭ್ಯಗಳಿಗಾಗಿ ಈ ಬಾರಿ ಹೆಚ್ಚಿನ ಅನುದಾನವನ್ನು ಮೀಸಲಿಡಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಪೂಜಾರಿ ಹೇಳಿದರು.

Advertisement

ಶುಕ್ರವಾರ ಪಟ್ಟಣದ ಪುರಸಭೆ ಸಭಾ ಭವನದಲ್ಲಿ ನಡೆದ ತುರ್ತು ಸಭೆ ಹಾಗೂ 2022-23ನೇ ಸಾಲಿನ ಪುರಸಭೆಯ ಆಯವ್ಯಯ ಬಜೆಟ್‌ ಮಂಡಿಸುವ ಸಭೆಯಲ್ಲಿ ಅವರು ಮಾತನಾಡಿದರು. ಕುಡಿಯುವ ನೀರು, ರಸ್ತೆ, ಹೊರ ಚರಂಡಿ, ಅಂಗನವಾಡಿ, ಉದ್ಯಾನವನ, ಒಳ ಕ್ರೀಡಾಂಗಣ, ಹಿರಿಯ ನಾಗರಿಕರಿಗೆ ವಿಶ್ರಾಂತಿಧಾಮ, ಪೌರ ಕಾರ್ಮಿಕರಿಗೆ ವಸತಿ ಹಾಗೂ ಅವರ ಮಕ್ಕಳ ಶಿಕ್ಷಣ, ಸ್ಮಶಾನ ಅಭಿವೃದ್ಧಿ ಸೇರಿದಂತೆ ಅನೇಕ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದರು.

ಲೇಖಪಾಲಕ ಗುರುರಾಜ ಮಾಗಾವಿ 2022-23ನೇ ಸಾಲಿನ ಆಯವ್ಯಯ (ಬಜೆಟ್‌) ಸಾರಾಂಶ ಮಂಡಿಸಿ ಈ ವರ್ಷ ಅಂದಾಜು 25.60 ಕೋಟಿ ರೂ. ಆದಾಯದ ನಿರೀಕ್ಷೆಯಲ್ಲಿದೆ. ಇದರಲ್ಲಿ 25 ಕೋಟಿ 84 ಲಕ್ಷ 70 ಸಾವಿರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ವೆಚ್ಚ ಮಾಡಲಾಗುವುದು. ಈ ವರ್ಷದ ಉಳಿತಾಯದ ಮೊತ್ತ 12 ಲಕ್ಷ ಉಳಿಸುವ ನೀರಿಕ್ಷೆಯಲ್ಲಿದೆ ಎಂದು ಹೇಳಿದರು.

ಪುರಸಭೆ ವ್ಯಾಪ್ತಿಯ ನಿವೇಶನ, ವಸತಿ, ವಾಣಿಜ್ಯಗಳ ಆಸ್ತಿ, ಕರವನ್ನು ಪ್ರಸಕ್ತ ಸಾಲಿನಿಂದ ಪರೀಕರಿಸುತ್ತಿದ್ದು. ಪ್ರತಿ ಶತ ಶೇ. 3ರಷ್ಟು ಕರ ಹೆಚ್ಚಿಸಲಾಗುವುದು ಎಂದು ಸಭೆಗೆ ವಿವರಿಸಿದರು. 2022-23ನೇ ಸಾಲಿನ ಸಂತೆಕರ ಲೀಲಾವು ಮತ್ತು ವಿವಿಧ ಅನುದಾನದಡಿ ಕರೆಯಲಾದ ಟೆಂಟರ್‌ ಕಾಮಗಾರಿಗಳಿಗೆ ಅನುಮೋದನೆ ನೀಡುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ವಾರ್ಡ್‌ ನಂ. 1ರ ಸದಸ್ಯ ರಜಾಕಬಿ ಬಮ್ಮನಹಳ್ಳಿ ಅವರು ಅಧ್ಯಕ್ಷರೆ ಕರೆದ ತುರ್ತು ಸಭೆ ಸೂಚನಾ ಪತ್ರದ ವಿಷಯದ ಬಗ್ಗೆ ನನಗೆ ತಿಳಿಸಿ ಎಂದು ಸಭೆಯಲ್ಲಿ ಎದ್ದು ನಿಂತು ಹಂಗಾಮಿ ಅಧ್ಯಕ್ಷೆ ಲಕ್ಷ್ಮೀಬಾಯಿ ಬೆಲ್ಲದವರನ್ನು ಪ್ರಶ್ನಿಸಿದರು. ಆಗ ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ ಹಾರಿವಾಳ ಮಧ್ಯಪ್ರವೇಶಿಸಿ ಅಧ್ಯಕ್ಷರಿಗೆ ಓದಲು ಬರೆಯಲು ಬರಲ್ಲ. ಅವರ ಪತಿರಾಯರ ಕಾರುಬಾರು ಎಂದು ಹೇಳಿದರು. ಹೀಗಾಗಿ ಸಭೆಯ ವಿಷಯ ಎಲ್ಲ ಸದಸ್ಯರಿಗೆ ಸರಿಯಾದ ಮಾಹಿತಿಯಿಲ್ಲ. ಮುಖ್ಯಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕೆಂದು ಹೇಳಿದರು.

Advertisement

ಆಗ ಸದಸ್ಯ ಪ್ರವೀಣ ಪವಾರ ಮಾತನಾಡಿ, ಕಚೇರಿಯಲ್ಲಿ ದಿನನಿತ್ಯ ಮಹಿಳಾ ಸದಸ್ಯರ ಪತಿರಾಯರ ಕಾರುಬಾರು ಹೆಚ್ಚಾಗಿದೆ. ಇದೆ ಕಾಯಕ ಮುಂದುವರಿದರೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಬೇಕಾಗುತ್ತದೆ ಎಂದು ಸಭೆಯಲ್ಲಿ ಎಚ್ಚರಿಕೆಯ ಮಾತನ್ನಾಡಿದರು.

ಆಗ ಸದಸ್ಯ ರವಿ ಪಟ್ಟಣಶೆಟ್ಟಿ ಮಾತನಾಡಿ, ಇದು ಕೇವಲ ಆಡಳಿತ ಪಕ್ಷದ ಸದಸ್ಯರ ಪತಿರಾಯರಿಗೆ ಅಷ್ಟೆನೊ ಅಥವಾ ಎಲ್ಲ ಸದಸ್ಯರ ಪತಿರಾಯರಿಗೆ ಅನುವಹಿಸುತ್ತದೆ ಎಂದು ಪ್ರಶ್ನೆ ಮಾಡಿದರು. ಇಂದು ಜರುಗಿದ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರು ಆಡಳಿತದ ವಿರುದ್ಧ ಮಾತನಾಡಿದರೆ ವಿರೋಧ ಪಕ್ಷದ ಸದಸ್ಯರು ಆಡಳಿತ ಪಕ್ಷದ ಪರವಾಗಿ ಮಾತನಾಡುತ್ತಿರುವುದು ವಿಶೇಷವಾಗಿತ್ತು. ಸಭೆಯಲ್ಲಿ ನೀಲು ನಾಯಕ, ಜಗದೇವಿ ಗುಂಡಳ್ಳಿ, ನಜೀರ್‌ ಗಣಿ, ಅಶೋಕ ಸಂಪನ್ನವರ, ರಾಜು ಲಮಾಣಿ, ಪರೀಜಾನ್‌ ಚೌಧರಿ, ಅನ್ನಪೂರ್ಣಾ ಕಲ್ಯಾಣಿ, ನಿಂಗಪ್ಪ ಗುಂಡಳ್ಳಿ, ರಾಜು ಮುಳವಾಡ, ಗೀತಾ ಬಾಗೇವಾಡಿ, ರೇಖಾ ಬೆಕೀನಾಳ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next