Advertisement

ಹೆಚ್ಚು ಶುಲ್ಕ: ಖಾಸಗಿ ಅಸ್ಪತ್ರೆಗಳ ವಿರುದ್ಧ ಕ್ರಮ ಎಚ್ಚರಿಕೆ

05:53 PM May 22, 2021 | Team Udayavani |

ಹಾಸನ: ನಗರದ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿಸರ್ಕಾರದ ಮಾರ್ಗಸೂಚಿಯನ್ನು ಉಲ್ಲಂಘಿಸಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಹೆಚ್ಚಿನ ‌ ಹಣಪಡೆಯುತ್ತಿರುವ ದೂರುಗಳು ಬಂದಿವೆ. ಅಂತಹ ಆಸ್ಪತ್ರೆಗಳ ‌ ವಿರುದ್ದ ಕೆಪಿಎಂಇ ಕಾಯ್ದೆಯಡಿ ಕಠಿಣಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಅವರು ಎಚ್ಚರಿಕೆ ನೀಡಿದ್ದಾರೆ.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ‌ ನಡೆದ ಕೊರೊನಾ ನಿಯಂತ್ರಣ ಸಂಬಂಧ ವೈದ್ಯರು ಮತ್ತು ತಜ್ಞರ ಸಮಿತಿ ಸಭೆನಡೆಸಿದ ಅವರು, ಕೋವಿಡ್ ಗೆ  ಬಲಿಯಾದವರ ‌ಮೃತದೇಹ ಸಾಗಿಸುವಲ್ಲಿ ಖಾಸಗಿ ಆಸ್ಪತ್ರೆಗಳು ಹೆಚ್ಚು ಹಣ ಪಡೆಯುತ್ತಿರುವುದು  ಗಮನಕ್ಕೆ ಬಂದಿದ್ದು ಅಂಥವರ ವಿರುದ್ಧ  ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಆರೋಗ್ಯ ಇಲಾಖೆಯು ತಾತ್ಕಾಲಿಕವಾಗಿ ಹೆಚ್ಚುವರಿ ಆ್ಯಂಬುಲೆನ್ಸ್‌ಗಳನ್ನು ಬಾಡಿಗೆಗೆತೆಗೆದು ಕೊಳ್ಳ ಬೇಕು ಎಂದು ಸೂಚಿಸಿದರು.ಸರ್ಕಾರದ ಮಾರ್ಗಸೂಚಿಯಂತೆ ಆಕ್ಸಿಜನಕ ನಿರ್ವಹಣೆಯಲ್ಲಿ ಗಮನ ಹರಿಸಬೇಕು.ಆಸ್ಪತ್ರೆಗಳು ಪ್ರತಿ ವಾರ್ಡ್‌ಗಳಲ್ಲಿ ತಂv ‌ Ã ‌ಚಿಸಿಆಮ್ಲಜನಕವನ್ನು ಬಳಕೆ ಮಾಡಬೇಕು .ಆಮ್ಲಜನಕ ಕೊರತೆ ತಡೆಗಟ್ಟಲು ಸಾಧ್ಯವಾದಷ್ಟು ಖಾಸಗಿ ಆಸ್ಪತ್ರೆಗಳು ಆಮ್ಲಜನಕದ ಉತ್ಪಾದ ‌ನಾ ಘಟಕಗಳನ್ನು (ಆಮ್ಲಜನಕ ಜನರೇಟರ್‌ಗಳು)ಸ್ಥಾಪಿಸಿಕೊಳ್ಳುವುದು ಉತ್ತಮ  ಎಂದು ಹೇಳಿದರು.

ಹಿಮ್ಸ್ ಆಸ್ಪತ್ರೆಯ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಸುರೇಶ್‌  ಮಾತನಾಡಿ, ಖಾಸಗಿ ಆಸ ³ತ್ರೆಗಳುಸೋಂಕಿತರ ಚಿಕಿತ್ಸೆ ಯಲ್ಲಿ  ಉತ್ತಮ ಸಹಕಾರ ನೀಡುತ್ತಿವೆ. ರೋಗಿಗಳಿಗೆ ನೀಡಿರುವ ‌ ಚಿಕಿತ್ಸೆಯವಿವರಗಳು ಹಾಗೂ ದಾಖಲೆಗಳ ಬಗ್ಗೆ ಕ್ರಮಕೈಗೊಳ್ಳಬೇಕು ಎಂದರು .

Advertisement

Udayavani is now on Telegram. Click here to join our channel and stay updated with the latest news.

Next