ಮೊರ್ಬಿ: ಗುಜರಾತ್‌ನ ಮೊರ್ಬಿಯಲ್ಲಿ ಮಚ್ಚು ನದಿಯ ಮೇಲಿನ ಕೇಬಲ್ ತೂಗು ಸೇತುವೆ ಕುಸಿದು 134 ಜನರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಸೋಮವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ನಾವು ಇದುವರೆಗೆ ನಾಲ್ವರನ್ನು ಬಂಧಿಸಿದ್ದೇವೆ, ತನಿಖೆ ನಡೆಯುತ್ತಿದೆ” ಎಂದು ರಾಜ್‌ಕೋಟ್ ರೇಂಜ್ ಐಜಿ ಅಶೋಕ್ ಯಾದವ್ ಪಿಟಿಐಗೆ ತಿಳಿಸಿದ್ದಾರೆ. ಪೊಲೀಸರು ಶೀಘ್ರದಲ್ಲೇ ಮಾಧ್ಯಮಗಳಿಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ ಎಂದರು.
ಇದನ್ನೂ ಓದಿ : ಗುಜರಾತ್ ಸೇತುವೆ ಕುಸಿತ ಘಟನೆ: ಸಂತ್ರಸ್ತರ ಕುಟುಂಬಗಳಿಗೆ ರಷ್ಯಾ ಅಧ್ಯಕ್ಷ ಪುಟಿನ್ ಸಂತಾಪ
ಭಾನುವಾರ ಸಂಜೆ ಕುಸಿದು ಬಿದ್ದ ಮೋರ್ಬಿ ನಗರದ ಸೇತುವೆಯ ನಿರ್ವಹಣೆ ಮತ್ತು ಕಾರ್ಯಾಚರಣೆಯ ಕಾರ್ಯವನ್ನು ನೀಡಿದ ಏಜೆನ್ಸಿಗಳ ವಿರುದ್ಧ ಪೊಲೀಸರು ನರಹತ್ಯೆ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ.
‘ಬಿ’ ವಿಭಾಗದ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಕಾಶ್ ದೇಕಿವಾಡಿಯಾ ಅವರು ದಾಖಲಿಸಿರುವ ಎಫ್‌ಐಆರ್‌ನಲ್ಲಿ, ಸ್ಥಳೀಯ ಆಡಳಿತವು ಅದರ ನಿರ್ವಹಣೆಗಾಗಿ “ಖಾಸಗಿ ಏಜೆನ್ಸಿ” ಯನ್ನು ನಿಯೋಜಿಸಿದ್ದರಿಂದ ಮೋರ್ಬಿ ಪಟ್ಟಣದ ಮಚ್ಚು ನದಿಯ ಮೇಲಿನ ಸೇತುವೆಯು ಸುಮಾರು ಎಂಟು ತಿಂಗಳಿನಿಂದ ಬಳಕೆಯಾಗಿರಲಿಲ್ಲ ಎಂದು ಹೇಳಿದ್ದಾರೆ.