Advertisement

ಮೊರ್ಬಿ ಸೇತುವೆ ಕುಸಿತ ಪ್ರಕರಣದಲ್ಲಿ ಬಿಜೆಪಿ ಸಂಸದನ ಕುಟುಂಬದ 12 ಮಂದಿ ನೀರುಪಾಲು!

10:07 AM Oct 31, 2022 | Team Udayavani |

ಮೊರ್ಬಿ: ಗುಜರಾತ್ ನ ಮೊರ್ಬಿ ನಗರದಲ್ಲಿ ಸುಮಾರು 140 ವರ್ಷಗಳಷ್ಟು ಹಳೆಯ, ಕೆಲ ದಿನಗಳ ಹಿಂದಷ್ಟೇ ನವೀಕರಣಗೊಂಡ ತೂಗು ಸೇತುವೆಯೊಂದು ಕುಸಿದು 130 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ರವಿವಾರ ಸಂಜೆ ನಡೆದ ಘಟನೆಯಲ್ಲಿ ಬಿಜೆಪಿ ಸಂಸದರೊಬ್ಬರ ಕುಟುಂಬದ 12 ಮಂದಿ ಅಸುನೀಗಿದ್ದಾರೆ.

Advertisement

ರಾಜ್‌ಕೋಟ್‌ ನ ಬಿಜೆಪಿ ಸಂಸದ ಮೋಹನ್‌ ಭಾಯ್ ಕಲ್ಯಾಣ್‌ ಜಿ ಕುಂದರಿಯಾ ಅವರ ಹನ್ನೆರಡು ಕುಟುಂಬ ಸದಸ್ಯರು ಪ್ರಾಣ ಕಳೆದುಕೊಂಡಿದ್ದಾರೆ.

“ನಾನು ಐದು ಮಕ್ಕಳು ಸೇರಿದಂತೆ ನನ್ನ ಕುಟುಂಬದ 12 ಸದಸ್ಯರನ್ನು ಕಳೆದುಕೊಂಡಿದ್ದೇನೆ. ನನ್ನ ಸಹೋದರಿಯ ಕುಟುಂಬದಿಂದ ಬಂದ ಸದಸ್ಯರನ್ನು ಕಳೆದುಕೊಂಡಿದ್ದೇನೆ” ಎಂದು ಮೋಹನ್‌ಭಾಯ್ ಕಲ್ಯಾಣ್‌ಜಿ ಕುಂದರಿಯಾ ಹೇಳಿದರು.

ಇದನ್ನೂ ಓದಿ:ಬಾಗಿಲು ಹಾಕಿದ್ದ ಮನೆಯೊಳಗೆ ಒಂದೇ ಕುಟುಂಬದ ನಾಲ್ವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

“ಎನ್‌ ಡಿಆರ್‌ ಎಫ್, ಎಸ್‌ ಡಿಆರ್‌ ಎಫ್ ಮತ್ತು ಸ್ಥಳೀಯ ಆಡಳಿತವು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಅಪಘಾತದಿಂದ ಬದುಕುಳಿದ ಎಲ್ಲರನ್ನು ರಕ್ಷಿಸಲಾಗಿದೆ. ಮಚ್ಚು ನದಿಯಲ್ಲಿದ್ದವರ ಮೃತದೇಹಗಳನ್ನು ಹೊರತೆಗೆಯಲು ಪ್ರಯತ್ನಗಳು ನಡೆಯುತ್ತಿವೆ. ರಕ್ಷಣಾ ದೋಣಿಗಳು ಸಹ ಸ್ಥಳದಲ್ಲಿವೆ” ಎಂದು ಬಿಜೆಪಿ ಸಂಸದರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next