ಉಡುಪಿ: ಸಂಸ್ಕೃತ ಭಾಷೆಯನ್ನು ಮರೆತಂತೆ ಸಂಸ್ಕಾರವೂ ದೂರವಾಗುತ್ತಿದೆ. ಇದರ ಪರಿಣಾಮವಾಗಿ ನೈತಿಕ ಶಿಕ್ಷಣವನ್ನು ಶಾಲೆಯಲ್ಲಿ ಕಲಿಯ ಬೇಕಾದ ವಿಪರ್ಯಾಸ ಎದುರಾಗಿದೆ ಎಂದು ತಿರುಪತಿಯ ಆರ್. ಎಸ್. ವಿದ್ಯಾಪೀಠಮ್‌ನ ದ್ವೆ„ತವೇದಾಂತ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ನಾರಾಯಣ ಹೇಳಿದರು.
ಅವರು ಆ. 7ರಂದು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಸಂಸ್ಕೃತ ವಿಭಾಗದಿಂದ ಜರಗಿದ ಸಂಸ್ಕೃತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಗೌರವ ಸ್ವೀಕಾರಕ್ಕೆ ತ್ರಿಮಾರ್ಗ ಸೂತ್ರ
ಮಾನವನಲ್ಲಿ ಗೌರವ ಸೀÌಕಾರ ಸಹಜವಾದ ಪ್ರಕ್ರಿಯೆ. ಕೆಲವರು ತಾವು ಧರಿಸುವ ವಸ್ತ್ರದಿಂದ, ಇನ್ನು ಕೆಲವರು ವಪುಷ (ದೇಹ)ದಿಂದ ಗಳಿಸಿದರೆ “ವಾಚಾ’ದಿಂದ ಗೌರವ ಸ್ವೀಕಾರಮಾಡುವುದು ಅತ್ಯಂತ ಶ್ರೇಯಸ್ಕರವೆಂದು ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಅನುಗ್ರಹಿಸಿದರು.
ಪಿಪಿಸಿಯ ಪ್ರಾಂಶುಪಾಲ ಡಾ| ಜಗದೀಶ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ| ಟಿ.ಎಸ್. ರಮೇಶ್ ಸ್ವಾಗತಿಸಿ, ವಿದ್ಯಾರ್ಥಿನಿ ಶ್ರೀದೇವಿ ವಂದಿಸಿದರು. ಪ್ರಾಧ್ಯಾಪಕ ಆನಂದ ಆಚಾರ್ಯ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.