Advertisement

ಕಾಯಕ-ದಾಸೋಹ ಆದರ್ಶ ರೂಢಿಸಿಕೊಳ್ಳಿ

04:44 PM Sep 09, 2022 | Team Udayavani |

ಚಿಂಚೋಳಿ: ಮಾನವನ ಶರೀರಕ್ಕೆ ಧಾರ್ಮಿಕತೆ ವಿಚಾರಗಳು ಶರಣರ, ಸಂತರ ಆದರ್ಶಗಳ ಕಾಯಕ, ದಾಸೋಹ, ಗುರುಹಿರಿಯರ ಬಗ್ಗೆ ಗೌರವ ನೀಡುವ ಬಗ್ಗೆ ಒಳ್ಳೆಯ ಸಂಸ್ಕಾರ ನೀಡಿದರೆ ಮಾತ್ರ ಮುಕ್ತಿ ದೊರಕುತ್ತದೆ ಮತ್ತು ಪರಮಾತ್ಮ ಸಿಗುತ್ತಾನೆ ಎಂದು ಸೇಡಂ ಶಿವಶಂಕರ ಮಠದ ಪೀಠಾಧಿಪತಿ ಶ್ರೀ ಶಿವ ಶಂಕರ ಶಿವಾಚಾರ್ಯರು ನುಡಿದರು.

Advertisement

ತಾಲೂಕಿನ ಪೋಲಕಪಳ್ಳಿ ಗ್ರಾಮದ ಶಿವಶಂಕರಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡಿದ್ದ ಸಪ್ತಾಹ ಭಜನೆ ಮತ್ತು ಪ್ರವಚನ ಕಾರ್ಯಕ್ರಮದ ಮುಕ್ತಾಯ ಸಮಾರಂಭದ ಸಾನ್ನಿಧ್ಯ ವಹಿಸಿ ಭಕ್ತರನ್ನುದ್ದೇಶಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಭಕ್ತರು ಶರಣರ ಸಂದೇಶಗಳನ್ನು ತಪ್ಪದೇ ಪಾಲಿಸಬೇಕು. ಮನಸ್ಸಿಗೆ ನೆಮ್ಮದಿ ಶಾಂತಿ ಸಿಗಬೇಕಾದರೆ ಪ್ರತಿಯೊಬ್ಬರಿಗೆ ಸಂಸ್ಕಾರ ಅತಿ ಮುಖ್ಯವಾಗಿದೆ ಎಂದರು.

ಮುಖಂಡರಾದ ಸುರೇಶ ದೇಶಪಾಂಡೆ, ಬಾಬುರಾವ ದೇಶಮುಖ, ಜಗದೀಶ ಗೌನೂರ, ವೀರಭದ್ರಪ್ಪ ಪ್ಯಾರಾಸಾಬಾದಿ, ರಾಜಶೇಖರ ಹಿತ್ತಲ, ಪಿಡಿಒ ರಮೇಶ ತುಮಕುಂಟಾ, ಬಸವರಾಜ ಪಾಟೀಲ, ಸಿದ್ಧಣ್ಣಗೌಡ ದೇಗಲಮಡಿ,ನೀಲಕಂಠ ಕನ್ನಾ, ರಾಜಶೇಖರ ಹೂಡದಳ್ಳಿ, ಸೂಗುವೀರಪ್ಪ ಪ್ಯಾರಾಸಾಬಾದಿ ಭಾಗವಹಿಸಿದ್ದರು. ಆನಂತರ ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next