Advertisement

‘ಮೂಟ್‌ಕೋರ್ಟ್‌ ಜ್ಞಾನ, ಕೌಶಲ ಉನ್ನತೀಕರಣಕ್ಕೆ ಪೂರಕ’

11:09 AM Mar 10, 2018 | |

ಮಹಾನಗರ: ಕಾನೂನು ವಿದ್ಯಾರ್ಥಿಗಳಿಗೆ ವೃತ್ತಿ ಕ್ಷೇತ್ರದ ಬಗ್ಗೆ ಅರಿವು ಮಾಡಿಕೊಡುವ ಮೂಟ್‌ ಕೋರ್ಟ್‌ ಪರಿಕಲ್ಪನೆ ಜ್ಞಾನ ಮತ್ತು ಕೌಶಲ ಉನ್ನತೀಕರಣಕ್ಕೆ ಪೂರಕವಾಗಿದೆ ಎಂದು ಉದ್ಯಮಿ ಜೋಶ್ವಾ ಎಚ್‌. ಸಾಮ್ಯುವೆಲ್‌ ಅವರು ಹೇಳಿದರು.

Advertisement

ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿರುವ ‘ಜ್ಯೂರಿಸ್‌ ಇಂಜಿನಿಯೋ-2018’ ರಾಷ್ಟ್ರಮಟ್ಟದ ಮೂಟ್‌ಕೋರ್ಟ್‌ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವೃತ್ತಿ ಕ್ಷೇತ್ರಕ್ಕೆ ಅವಶ್ಯಕ
ಮೂಟ್‌ ಕೋರ್ಟ್‌ ಕಾನೂನು ವಿದ್ಯಾರ್ಥಿಗಳಿಗೆ ಮುಂದೆ ವೃತ್ತಿ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದಾಗ ಅವಶ್ಯಕವಾಗಿರುವ ಕೌಶಲಗಳ ಬಗ್ಗೆ ಮಾಹಿತಿ ನೀಡುತ್ತದೆ. ಜ್ಞಾನದ ಜತೆಗೆ ಅದನ್ನು ಸಮರ್ಥವಾಗಿ ಪ್ರಸ್ತುತ ಪಡಿಸುವ ಕೌಶಲವೂ ಅಗತ್ಯವಿರುತ್ತದೆ ಎಂದರು. ಕಾನೂನು ವಿದ್ಯಾರ್ಥಿಗಳು ಮೂಟ್‌ ಕೋರ್ಟ್‌ ಸ್ಪರ್ಧೆಗಳ ಅವಕಾಶಗಳನ್ನು ಬಳಸಿಕೊಂಡು ಜ್ಞಾನ ಹಾಗೂ ಕೌಶಲಗಳನ್ನು ವೃದ್ಧಿಸಿಕೊಳ್ಳಬೇಕು ಎಂದು ಹೇಳಿ ಸ್ಪರ್ಧಿಗಳಿಗೆ ಅವರು ಶುಭ ಹಾರೈಸಿದರು.

ಉತ್ತಮ ವೇದಿಕೆ
ಮೂರ್ಟ್‌ ಕೋರ್ಟ್‌ ಉದಯೋನ್ಮುಖ ಕಾನೂನು ಪದವೀಧರರಿಗೆ ಜ್ಞಾನ ಮತ್ತು ಕೌಶಲ ಉನ್ನತೀಕರಣಕ್ಕೆ ಉತ್ತಮ ವೇದಿಕೆಯಾಗಿದೆ ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೆಂದ್ರ ಹೆಗ್ಗಡೆ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಎಸ್‌ಡಿಎಂ ಕಾನೂನು ಮಹಾವಿದ್ಯಾಲಯ ಅನೇಕ ವಿನೂತನ ಪರಿಕಲ್ಪನೆಗಳೊಂದಿಗೆ ಮುನ್ನಡೆಯುತ್ತಿದೆ ಎಂದು ಅವರು ವಿವರಿಸಿದರು.

ಸಂಯೋಜಕಿ ಸುಶ್ಮಿತಾ ಸುರೇಶ್‌ ಸ್ವಾಗತಿಸಿದರು. ಜ್ಯೂರಿಸ್‌ ಇಂಜಿನಿಯೋ- 2018 ಬಗ್ಗೆ ಕಾರ್ಯದರ್ಶಿ ಲೆನಿಟಾ ಮಥಾಯಸ್‌ ವಿವರಿಸಿದರು. ದೀಕ್ಷಾ ಶೆಟ್ಟಿ ವಂದಿಸಿದರು. ಮೂಟ್‌ ಕೋರ್ಟ್‌ ಸೊಸೈಟಿ ಸಂಚಾಲಕಿ ಅನ್ನಪೂರ್ಣಾ ಶೇಟ್‌, ಸಹ ಸಂಚಾಲಕರಾದ ಚಂದ್ರಲೇಖಾ, ಗಗನ್‌ ಕೆ., ಸಂಯೋಜಕಿ ಮೀನಾಕ್ಷಿ ಕೆ.ಕೆ. ಉಪಸ್ಥಿತರಿದ್ದರು. ಮೆಲ್ಟಿಟಾ ನೊರೊನ್ನಾ ನಿರೂಪಿಸಿದರು.

Advertisement

ವಿಪುಲ ಅವಕಾಶ
ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಕಾನೂನು ವಿದ್ಯಾಲಯದ ಪ್ರಾಂಶುಪಾಲ ಡಾ| ತಾರಾನಾಥ್‌ ಅವರು ಇಂದು ಕಾನೂನು ಪದವೀಧರರಿಗೆ ಕಾನೂನು ಕ್ಷೇತ್ರದಲ್ಲಿ ವಿಪುಲ ಅವಕಾಶಗಳು ತೆರೆದುಕೊಂಡಿವೆ. ಇದಕ್ಕೆ ಪೂರಕವಾಗಿ ಕಾನೂನು ಶಿಕ್ಷಣವೂ ಸ್ಪಂದಿಸಬೇಕಾಗುತ್ತದೆ ಮತ್ತು ಕಾನೂನು ಪದವೀಧರರು
ಸಿದ್ಧಗೊಳ್ಳಬೇಕಾಗುತ್ತದೆ ಎಂದರು.  

Advertisement

Udayavani is now on Telegram. Click here to join our channel and stay updated with the latest news.

Next