Advertisement

ಮೂನ್‌ಲೈಟಿಂಗ್‌ ಭಿನ್ನಮತ; ಇದರ ಬಗ್ಗೆ ಯಾರು, ಏನೆನ್ನುತ್ತಾರೆ?

06:03 PM Sep 23, 2022 | Team Udayavani |

ಒಂದು ಕಂಪನಿಯಲ್ಲಿ ಫ‌ುಲ್‌ಟೈಂ ಉದ್ಯೋಗಿಯಾಗಿದ್ದುಕೊಂಡೇ, ರಹಸ್ಯವಾಗಿ ಮತ್ತೊಂದು ಕಂಪನಿಯಲ್ಲೂ ಕೆಲಸ ಮಾಡುವಂಥ “ಮೂನ್‌ಲೈಟಿಂಗ್‌’ ವ್ಯವಸ್ಥೆ ಈಗ ಬಿಸಿಬಿಸಿ ಚರ್ಚೆಯ ವಿಷಯ. ಮೂನ್‌ಲೈಟಿಂಗ್‌ ಮಾಡುತ್ತಿದ್ದಾರೆಂದು ವಿಪ್ರೋ ಕಂಪನಿಯು 300 ಸಿಬ್ಬಂದಿಯನ್ನು ವಜಾ ಮಾಡಿರುವುದು ಈ ವಿವಾದವನ್ನು ಮತ್ತಷ್ಟು ತೀವ್ರಗೊಳಿಸಿದೆ. ಈಗ ಈ ವಿಚಾರವು ಐಟಿ ವಲಯದೊಳಗೇ ಭಿನ್ನಮತ ಸೃಷ್ಟಿಸಿದೆ. ಮೂನ್‌ಲೈಟಿಂಗ್‌ ಬಗ್ಗೆ ಯಾರು, ಏನೆನ್ನುತ್ತಾರೆ?

Advertisement

ರಿಶದ್‌ ಪ್ರೇಮ್‌ಜೀ, ವಿಪ್ರೋ
ಮೂನ್‌ಲೈಟಿಂಗ್‌ ಎನ್ನುವುದು ನೈತಿಕತೆಯ ಸಂಪೂರ್ಣ ಉಲ್ಲಂಘನೆ. ಟೆಕ್‌ ಕ್ಷೇತ್ರದಲ್ಲಿ ಉದ್ಯೋಗಿಗಳು ಮೂನ್‌ಲೈಟಿಂಗ್‌ ಮಾಡುತ್ತಿರುವುದು ಒಂದು ರೀತಿಯಲ್ಲಿ ವಂಚನೆ.

ಸಂದೀಪ್‌ ಪಟೇಲ್‌, ಐಬಿಎಂ
ಕಂಪನಿಗೆ ಸೇರುವಾಗಲೇ ಉದ್ಯೋಗಿಯು “ನಾನು ಐಬಿಎಂಗಷ್ಟೇ ಕೆಲಸ ಮಾಡುತ್ತೇನೆ’ ಎಂಬ ಒಪ್ಪಂದಕ್ಕೆ ಸಹಿ ಹಾಕಿರುತ್ತಾನೆ. ಹೀಗಾಗಿ, ಮೂನ್‌ಲೈಟಿಂಗ್‌ ಮಾಡುವುದು ನೈತಿಕವಾಗಿ ಸರಿಯಾದ ಕ್ರಮವಲ್ಲ.

ಇನ್ಫೋಸಿಸ್‌ ಅಧಿಕಾರಿಗಳು
ನಮ್ಮ ಕಂಪನಿಯಲ್ಲಿ ಉದ್ಯೋಗಿಯು ಎರಡು ಕೆಲಸದಲ್ಲಿ ತೊಡಗಿರುವುದು ಹಾಗೂ ಗುತ್ತಿಗೆ ಒಪ್ಪಂದವನ್ನು ಉಲ್ಲಂಘಿಸಿದ್ದು ಕಂಡುಬಂದರೆ, ಕೆಲಸದಿಂದ ವಜಾ ಮಾಡುವುದಾಗಿ ಈಗಾಗಲೇ ಘೋಷಿಸಿದ್ದೇವೆ. ನಮ್ಮಲ್ಲಿ ಮೂನ್‌ಲೈಟಿಂಗ್‌ಗೆ ಅವಕಾಶವಿಲ್ಲ.

ಸಿ.ಪಿ.ಗುರ್ನಾನಿ, ಟೆಕ್‌ ಮಹೀಂದ್ರಾ
ಸಮಯ ಬದಲಾದಂತೆ ನಾವೂ ಬದಲಾಗಬೇಕು. ಯಾವುದೇ ಉದ್ಯೋಗಿಯು ತನ್ನ ಕೆಲಸದಲ್ಲಿನ ಕಾರ್ಯಕ್ಷಮತೆ ಮತ್ತು ಉತ್ಪಾದಕತೆಯಲ್ಲಿ ರಾಜಿ ಮಾಡಿಕೊಳ್ಳದೇ, ಮೋಸ ಮಾಡದೇ, ಇನ್ನೊಂದು ಕೆಲಸದ ಮೂಲಕ ಹೆಚ್ಚುವರಿ ಆದಾಯ ಗಳಿಸುತ್ತಿದ್ದರೆ ಅದನ್ನು ನಾನು ವಿರೋಧಿಸುವುದಿಲ್ಲ. ಆತ ತನ್ನ ಕಂಪನಿಯ ಮೌಲ್ಯ ಅಥವಾ ನೈತಿಕತೆಯ ವಿರುದ್ಧ ಹೋಗುತ್ತಿದ್ದಾನೆ ಎಂದು ನಾನು ಹೇಳುವುದೂ ಇಲ್ಲ. ನಾನು ಇದನ್ನೇ ಒಂದು ನಿಯಮವನ್ನಾಗಿ ರೂಪಿಸಲು ಬಯಸುತ್ತೇನೆ. ಹೀಗಾಗಿ, ನೀವ್ಯಾರಾದರೂ ಮೂನ್‌ಲೈಟಿಂಗ್‌ ಮಾಡುವುದಿದ್ದರೆ, ಚಿಯರ್ಸ್‌… ಆದರೆ ಅದರ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳಿ.

Advertisement

ವಿಪ್ರೋ ಮುಖ್ಯಸ್ಥರಿಗೆ “ದ್ವೇಷಪೂರಿತ ಮೇಲ್‌’!
ಮೂನ್‌ಲೈಟಿಂಗ್‌ ಮಾಡುತ್ತಿದ್ದಾರೆ ಎಂದು ತನ್ನ 300 ಸಿಬ್ಬಂದಿಯನ್ನು ವಜಾಮಾಡಿದ ಬೆನ್ನಲ್ಲೇ ವಿಪ್ರೋ ಮುಖ್ಯಸ್ಥ ರಿಶದ್‌ ಪ್ರೇಮ್‌ಜೀ ಅವರಿಗೆ ಭಾರೀ ಸಂಖ್ಯೆಯಲ್ಲಿ ದ್ವೇಷಪೂರಿತ ಇಮೇಲ್‌ಗ‌ಳು ಬರಲಾರಂಭಿಸಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಇಂಥ ದ್ವೇಷದ ಸಂದೇಶಗಳಿಂದ ನಾನು ಕುಗ್ಗುವುದಿಲ್ಲ. ನನ್ನ ನಿಲುವು ಸ್ಪಷ್ಟವಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next