Advertisement

Moon; ಚಂದ್ರನಲ್ಲಿನ ಜ್ವಾಲಾಮುಖಿ ಸ್ಫೋಟ ನಿಂತಿಲ್ಲ: ವರದಿ

01:05 AM Sep 09, 2024 | Team Udayavani |

ಬೀಜಿಂಗ್‌: ಚಂದಿರನಲ್ಲಿನ ಜ್ವಾಲಾಮುಖಿ ಚಟುವಟಿಕೆಗಳು ಸುಮಾರು 2 ಶತಕೋಟಿ ವರ್ಷಗಳ ಹಿಂದೆಯೇ ಸ್ಥಗಿತಗೊಂಡಿದೆ ಎಂದೇ ವಿಜ್ಞಾನಿಗಳು ಭಾವಿಸಿದ್ದರು. ಆದರೆ, ಇತ್ತೀಚಿನವರೆಗೂ ಅಂದರೆ 12 ಕೋಟಿ ವರ್ಷಗಳ ಹಿಂದೆಯೂ ಚಂದ್ರನಲ್ಲಿ ಜ್ವಾಲಾಮುಖಿಗಳು ಸ್ಫೋಟಗೊಂಡಿವೆ ಎಂಬ ಹೊಸ ವಿಚಾರ ಬಹಿರಂಗವಾಗಿದೆ.

Advertisement

2020ರಿಂದಲೂ ಚಂದಿರನ ಮೇಲ್ಮೆ„ಯನ್ನು ಅಧ್ಯಯನ ನಡೆಸುತ್ತಿರುವ ಚೀನದ ಚಾಂಗ್‌-ಇ 5 ಬಾಹ್ಯಾಕಾಶ ನೌಕೆ ಭೂಮಿಗೆ ಕಳುಹಿಸಿರುವ ಚಂದಿರನ ಕಲ್ಲು ಮತ್ತು ಮಣ್ಣಿನ ವಿಶ್ಲೇಷಣೆಯಿಂದ ಈ ವಿಷಯ ಗೊತ್ತಾಗಿದೆ. ಚಂದ್ರನ ಇತಿಹಾಸದ ಆರಂಭಿಕ ದಿನಗಳಲ್ಲಿ ಕ್ಷುದ್ರಗ್ರಹಗಳ ಅಪ್ಪಳಿಸುವಿಕೆಯಿಂದ ಬೃಹದಾಕಾರದ ಕುಳಿಗಳು ಸೃಷ್ಟಿಯಾಗಿ, ಅದರ ಅಂಚಿನಲ್ಲೇ ಅತೀ ಹೆಚ್ಚು ಜ್ವಾಲಾಮುಖಿಗಳು ಸ್ಫೋಟಗೊಂಡಿರಬಹು ದು. ಚಂದಿರನ ಒಳಭಾಗದ ಕೆಲವು ಪ್ರದೇಶಗಳು ಜ್ವಾಲಾಮುಖಿ ಚಟುವಟಿಕೆಯನ್ನು ಪ್ರೇರೇಪಿಸುವಂಥ ಶಾಖ ಉತ್ಪತ್ತಿ ಮಾಡುವ ವಿಕಿರಣಶೀಲ ಅಂಶಗಳಿಂದ ಹೆಚ್ಚು ಸಮೃದ್ಧವಾಗಿರುವ ಸಾಧ್ಯತೆಯಿದೆ. ಚಾಂಗ್‌ ನೌಕೆ ಇಳಿದಿರುವ ಪ್ರದೇಶವನ್ನು ಓಷಿಯನಸ್‌ ಪ್ರೊಸೆಲ್ಲಾರಮ್‌ ಎಂದು ಕರೆಯುತ್ತಾರೆ. ಇಲ್ಲಿ ಶಾಖ ಉತ್ಪತ್ತಿ ಅಂಶಗಳು ಹೆಚ್ಚಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next