Advertisement
ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಶಾರದಾ ಹಾಗೂ ಸೀಗಲ್ ಹೆಸರಿನ ಖಾಸಗಿ ಬಸ್‌ಗಳು ದಾಟಿದೊಡನೆ ಸೇತುವೆ ಒಮ್ಮೆಲೇ ಕುಸಿಯಿತು. ಬೇರೆ ವಾಹನಗಳು ಇರದ ಕಾರಣ ಅಪಾಯ ಸಂಭವಿಸಿಲ್ಲ. ಅಕ್ರಮ ಮರಳುಗಾರಿಕೆಯೇ ಇದಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
Related Articles
Advertisement
ಸೊರ್ನಾಡಿನಿಂದ ಕುಪ್ಪೆಪದವಿಗೆ ಸಾಗು ವವರು ಬದಲಿ ದಾರಿ ಬಳಸ ಬೇಕಾಗಿದೆ. ಬಂಟ್ವಾಳ ತಾಲೂಕಿನ ಸೊರ್ನಾಡಿನಿಂದ ಮಂಗಳೂರಿನ ಕುಪ್ಪೆಪದವು, ಕಟೀಲು, ಇರುವೈಲು, ಎಡಪದವು, ಗಂಜಿಮಠ ಕಡೆಗಳಿಗೆ ಸಾಗಲು ಈ ರಸ್ತೆ ಸಹಕಾರಿಯಾಗಿತ್ತು. ಸಿದ್ಧಕಟ್ಟೆ, ಬಂಟ್ವಾಳ, ವೇಣೂರು, ಬೆಳ್ತಂಗಡಿಯಿಂದ ಬಜಪೆ ವಿಮಾನ ನಿಲ್ದಾಣಕ್ಕೆ ತೆರಳುವವರಿಗೂ ಇದು ಹತ್ತಿರದ ದಾರಿಯಾಗಿತ್ತು.
ಬದಲಿ ಮಾರ್ಗ ಬಲು ದೂರಪ್ರತಿನಿತ್ಯ ಇಲ್ಲಿ ಸುಮಾರು 15 ಬಸ್ ಗಳು ಹಾಗೂ ನೂರಾರು ಖಾಸಗಿ ವಾಹನಗಳು ಸಂಚರಿಸುತ್ತವೆ. ಬಂಟ್ವಾಳ ಭಾಗ ದಿಂದ ಪೊಳಲಿ ಕಡೆಗೆ ತೆರಳು ವವರಿಗೆ, ಗುರುಪುರ ಕಡೆ ಯಿಂದ ಬಂಟ್ವಾಳಕ್ಕೆ ಬರಲೂ ಈ ರಸ್ತೆ ಅನುಕೂಲ ವಾಗುತ್ತಿತ್ತು. ಸೇತುವೆ ಕುಸಿತದಿಂದಾಗಿ ಬಂಟ್ವಾಳ, ಗಂಜಿಮಠದಿಂದ ಕುಪ್ಪೆ ಪದವು- ನೋಣಲ್ ಮುಖಾಂತರ ಬಂಟ್ವಾಳ, ಬಿ.ಸಿ. ರೋಡ್‌ಗೆ ಸಂಚಾರ ಸ್ಥಗಿತ ವಾಗಿರುವ ಕಾರಣ ಪ್ರಯಾಣಿಕರು ಪೊಳಲಿ ಮಾರ್ಗವಾಗಿ ಹೋಗ ಬೇಕಾಗುತ್ತದೆ. ಇದರಿಂದಾಗಿ ಇಲ್ಲಿಯ ಜನತೆ ಬಿ.ಸಿ. ರೋಡ್‌ಗೆ ಹೋಗ ಬೇಕಾದರೆ ಮೊದಲಿಗಿಂತ ಸುಮಾರು 20 ಕಿ.ಮೀ.ಗೂ ಅಧಿಕ ದೂರ ಕ್ರಮಿಸ ಬೇಕಾಗುತ್ತದೆ. ತೂಗುಸೇತುವೆಯೇ ಆಧಾರ
ಕುಸಿದ ಸೇತುವೆಯ ಸಮೀಪದಲ್ಲೇ ತೂಗುಸೇತುವೆಯಿದ್ದು, ಸ್ಥಳೀಯರು ಅತ್ತಿತ್ತ ಸಾಗಲು ಅದನ್ನು ಬಳಸಬ ಹುದು.
ಆದರೆ ವಾಹನಗಳು ಮಾತ್ರ ಸುತ್ತು ಬಳಸಿ ಹೋಗುವುದು ಅನಿವಾರ್ಯ. ಶಾಸಕರ ಭೇಟಿ: ಸ್ಥಳಕ್ಕೆ ಬಂಟ್ವಾಳ ತಹಶೀಲ್ದಾರ್, ತಾ.ಪಂ. ಇಒ, ಅಗ್ನಿಶಾಮಕ ದಳದ ಅಧಿ ಕಾರಿ ಗಳು, ಗ್ರಾಮಾಂತರ ಠಾಣೆ ಎಸ್‌ಐ ಪ್ರಸನ್ನ, ಟ್ರಾಫಿಕ್ ಎಸ್.ಐ. ಯಲ್ಲಪ್ಪ, ಮುಖಂಡರಾದ ಗೋವಿಂದ ಪ್ರಭು, ದೇವದಾಸ ಶೆಟ್ಟಿ, ಪ್ರಭಾಕರ ಪ್ರಭು, ದೇವಪ್ಪ ಪೂಜಾರಿ, ಉಮೇಶ ಅರಳ, ಉದಯ ಕುಮಾರ್ ರಾವ್, ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ
ಭೇಟಿ ನೀಡಿದರು.
ಈ ಸೇತುವೆಯ ಮೇಲ್ಭಾಗ ದಲ್ಲಿ ಎರಡು ಕಡೆಗಳಲ್ಲಿ ಬಿರುಕು ಮೂಡಿರುವುದು ಕಳೆದ ಮೇ ತಿಂಗಳಲ್ಲೇ ಸ್ಪಷ್ಟ ವಾಗಿ ಗೋಚರಿಸುತ್ತಿತ್ತು. ಈ ಬಗ್ಗೆ ಉದಯವಾಣಿ ಪತ್ರಿಕೆ ಜೂನ್ 6ರಂದು “ಸೇತುವೆಯಲ್ಲಿ ಬಿರುಕು; ಕುಸಿಯುವ ಭೀತಿ’ ಎಂಬ ವರದಿ ಪ್ರಕಟಿಸಿ ಹೆದ್ದಾರಿ ಇಲಾಖೆಯನ್ನು ಎಚ್ಚರಿಸಿತ್ತು. ಆದರೆ ಇಲಾಖೆಯ ಅಧಿಕಾರಿಗಳು ಬಿರುಕು ಅಷ್ಟೊಂದು ಅಪಾಯಕಾರಿಯಾಗಿಲ್ಲ ಎಂದು ಸಬೂಬು ಹೇಳಿದ್ದರು. ಆದರೆ ಸೇತುವೆಯ ಅಡಿಭಾಗ ದಲ್ಲಿ ಕಬ್ಬಿಣದ ಸರಳುಗಳು ತುಕ್ಕು ಹಿಡಿದಿರುವುದು ಸ್ಪಷ್ಟವಾಗಿ ಗೋಚರಿಸು ತ್ತಿತ್ತು. ನೂರು ವರ್ಷ ಬಾಳಿಕೆ ಬರಬೇಕಾಗಿದ್ದ ಸೇತುವೆ ಕಳಪೆ ಕಾಮಗಾರಿಯಿಂದಾಗಿ ಮೂವತ್ತು ವರ್ಷ ಪೂರ್ತಿಯಾಗುತ್ತಿದ್ದಂತೆ ಕುಸಿದು ಬಿದ್ದಿದೆ. ನಾವು ಮೂಡಬಿದಿರೆಯಿಂದ ಮೂಲರಪಟ್ಣಕ್ಕೆ ಬೈಕ್‌ನಲ್ಲಿ ಅದೇ ಸೇತುವೆ ಮೂಲಕ ಹೋಗಬೇಕಿತ್ತು. ತೆರಳುವುದು 5 ನಿಮಿಷ ಬೇಗ ಆಗುತ್ತಿದ್ದರೆ ಅನಾಹುತ ಸಂಭವಿಸುತ್ತಿತ್ತು. ಅದೃಷ್ಟವಶಾತ್ ಪಾರಾದೆವು. ಸೇತುವೆ ಹತ್ತಿರ ಬಂದಾಗ ಪಕ್ಕದ ಮನೆಯವರು ಸೇತುವೆ ಬಿದ್ದ ಬಗ್ಗೆ ಎಚ್ಚರಿಕೆ ನೀಡಿದರು. ಸುಮಾರು 30 ವರ್ಷ ಹಳೆಯ ಈ ಸೇತುವೆಯ ಕಾಮಗಾರಿಗೆ ನಾವೂ ಹೋಗಿದ್ದೆವು.
– ಮಹಮ್ಮದ್, ಸ್ಥಳೀಯರು ಸೇತುವೆ ಮತ್ತೆ ನಿರ್ಮಿಸಲು ಮಳೆಗಾಲ ಮುಗಿದ ಬಳಿಕವಷ್ಟೇ ಸಾಧ್ಯ. ಹೀಗಾಗಿ ಬದಲಿ ವ್ಯವಸ್ಥೆಯ ಕುರಿತು ತಾನು ಮತ್ತು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಚರ್ಚಿಸಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಅಲ್ಲಿಯವರೆಗೆ ಸಹಕರಿಸಿ.
– ರಾಜೇಶ್ ನಾೖಕ್ ಉಳಿಪ್ಪಾಡಿ, ಶಾಸಕ ಮಂಗಳೂರು ತಾಲೂಕಿನ ಗುರುಪುರ ಮತ್ತು ಪುಚ್ಚಮೊಗರು ಹಳೆ ಸೇತುವೆಗಳು ಕೂಡ ಶಿಥಿಲಾವಸ್ಥೆಯಲ್ಲಿದ್ದು, ಅಧಿಕಾರಿಗಳು ಈ ಬಗ್ಗೆ ಎಚ್ಚತ್ತುಕೊಳ್ಳಬೇಕು. ಇಲ್ಲದಿದ್ದರೆ ಫಲ್ಗುಣಿ ಸೇತುವೆಯ ಸ್ಥಿತಿ ಎದುರಾಗಬಹುದು. ಕುಸಿತಕ್ಕೆ ಅವೈಜ್ಞಾನಿಕ ಮರಳುಗಾರಿಕೆ ಮತ್ತು ಇಲಾಖಾ ಅಧಿಕಾರಿಗಳ ನಿರ್ಲಕ್ಷéವೇ ಕಾರಣ.
-ಪ್ರಭಾಕರ ಪ್ರಭು, ತಾ.ಪಂ. ಸದಸ್ಯ