Advertisement

ಮಾಸ್ತಿ ಕೃತಿಗೆ ದೃಶ್ಯ ರೂಪ

04:17 PM Nov 13, 2020 | Suhan S |

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರ “ಮೂಕನ ಮಕ್ಕಳು’ ಕೃತಿಯನ್ನು ಅನೇಕರುಕೇಳಿರಬಹುದು. ಈಗ ಇದೇಕೃತಿ ಸಿನಿಮಾ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದೆ. ಹೌದು, ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರ ಪ್ರಸಿದ್ಧಕೃತಿಗಳಲ್ಲಿ ಒಂದಾಗಿರುವ “ಮೂಕನ ಮಕ್ಕಳು’ ಈಗ ಅದೇ ಹೆಸರಿನಲ್ಲಿ ತೆರೆಗೆ ಬರುತ್ತಿದೆ.

Advertisement

ಕಳೆದ ಹಲವು ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿರುವ, ಈ ಹಿಂದೆ “ಶಂಭೋ ಮಹದೇವ’ ಚಿತ್ರವನ್ನು ನಿರ್ದೇಶಿಸಿದ್ದ ಮೈಸೂರು ಮಂಜು “ಮೂಕನ ಮಕ್ಕಳು’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಭಾವನಾತ್ಮಕ ಪರಿಸರದ ಸುತ್ತ ನಡೆಯುವಕಥಾಹಂದರ ಹೊಂದಿರುವ “ಮೂಕನಮಕ್ಕಳು’ ಚಿತ್ರದಲ್ಲಿ ನವ ನಟ ಮಂಜುಕ್ರಿಷ್‌ ಮೊದಲ ಬಾರಿಗೆ ಮೂಕ ಮತ್ತುಕಿವುಡನ ಪಾತ್ರದಲ್ಲಿಕಾಣಿಸಿಕೊಂಡಿದ್ದಾರೆ. “ಕರಿಗಿರಿ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ಶ್ರೀಮತಿ ಪವಿತ್ರಕ್ರಿಷ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಈಗಾಗಲೇಕೋಲ್ಕತ್ತ ಇಂಟರ್‌ ನ್ಯಾಷನಲ್‌ ಫಿಲಂ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಂಡು ಉತ್ತಮ ಪರಿಸರ ಚಿತ್ರ ಮತ್ತು ಉತ್ತಮ ಸಹ ನಟ ಪ್ರಶಸ್ತಿ ಪಡೆದುಕೊಂಡಿರುವ “ಮೂಕನ ಮಕ್ಕಳು’ ಚಿತ್ರ, ಯು.ಕೆ.ಯ ಎರಡು ಇಂಟರ್‌ ನ್ಯಾಷನಲ್‌ ಫಿಲಂ ಫೆಸ್ಟಿವಲ್‌ಗೆ ಆಯ್ಕೆಯಾಗಿದೆ. ಜೊತೆಗೆ ಪನೋರಮಾ ಸೇರಿದಂತೆ ವಿವಿಧ ಚಿತ್ರೋತ್ಸವಗಳಲ್ಲೂ ಪ್ರದರ್ಶನಕ್ಕೆ ಸಜ್ಜಾಗಿದೆ.

ಚಿತ್ರರಂಗದ ಅನೇಕ ಹಿರಿಯರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿರುವ “ಮೂಕನ ಮಕ್ಕಳು’ ಚಿತ್ರ ಮುಂದಿನ ವರ್ಷದ ಆರಂಭದಲ್ಲಿ ತೆರೆಗೆ ಬರುವ ಸಿದ್ಧತೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next