Advertisement

ಮೂಗರ್ಜಿಗೆ ಇನ್ನು ಮುಂದೆ ಅವಕಾಶವಿಲ್ಲ

11:42 PM Nov 15, 2019 | Lakshmi GovindaRaju |

ಬೆಂಗಳೂರು: ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರ ವಿರುದ್ಧ ಇನ್ನು ಮುಂದೆ “ಅನಾಮಧೇಯ ದೂರುಗಳು’, “ಮೂಗರ್ಜಿ’ಗಳಿಗೆ ಅವಕಾಶವಿಲ್ಲ. ಹೆಸರು, ವಿಳಾಸ ಇಲ್ಲದ ದೂರು ಮತ್ತು ಅರ್ಜಿಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ, ಯಾವುದೇ ಸರ್ಕಾರಿ ಅಧಿಕಾರಿ ಅಥವಾ ನೌಕರರ ವಿರುದ್ಧ ಸ್ವೀಕೃತವಾಗುವ ಅನಾಮಧೇಯ ಅರ್ಜಿಗಳ ಆಧಾರದಲ್ಲಿ ತನಿಖೆ ಅಥವಾ ವಿಚಾರಣೆಗೊಳಪಡಿಸುವಂತಿಲ್ಲ ಎಂದು “ಫ‌ರ್ಮಾನು’ ಹೊರಡಿಸಿದೆ.

Advertisement

ಕೇಂದ್ರ ಸರ್ಕಾರ 2013ರಲ್ಲಿ ಹೊರಡಿಸಿದ ಸುತ್ತೋಲೆ ಆಧರಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಸಚಿವಾಲಯದ ಎಲ್ಲಾ ಕಾರ್ಯದರ್ಶಿಗಳು ಮತ್ತು ಇಲಾಖಾ ಮುಖ್ಯಸ್ಥರಿಗೆ ಸುತ್ತೋಲೆ ಹೊರಡಿಸಿದ್ದಾರೆ. ಈ ಸುತ್ತೋಲೆಯನ್ನು ಉಲ್ಲೇಖೀಸಿ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನಾ ಪತ್ರ ರವಾನಿಸಿದ್ದಾರೆ.

“ಸರ್ಕಾರಿ ಅಧಿಕಾರಿಗಳು ಅಥವಾ ನೌಕರರ ವಿರುದ್ಧ ಬರುವ ಅನಾಮಧೇಯ ದೂರುಗಳು ಕೆಲವು ಸಂದರ್ಭಗಳಲ್ಲಿ ವೈಯುಕ್ತಿಕ ದ್ವೇಷ, ಅಸೂಯೆ ಅಥವಾ ಪೂರ್ವಾಗ್ರಹಪೀಡಿತವಾಗಿರು ತ್ತವೆ. ಅಲ್ಲದೇ ದೂರುಗಳಿಗೆ ಪೂರಕವಾದ ಮಾಹಿತಿ ಅಥವಾ ದಾಖಲೆಗಳನ್ನು ಸಲ್ಲಿಸಲಾಗಿರು ವುದಿಲ್ಲ. ಇಂತಹ ದೂರುಗಳಿಂದಾಗಿ ಸರ್ಕಾರಿ ಅಧಿಕಾರಿ/ನೌಕರರ ದೈನಂದಿನ ಕೆಲಸದಲ್ಲಿ ಹಸ್ತಕ್ಷೇಪ ಉಂಟಾಗುವುದಲ್ಲದೇ ದಕ್ಷ ಹಾಗೂ ಪ್ರಾಮಾಣಿಕ ನೌಕರರ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗುತ್ತದೆ. ಅಲ್ಲದೇ ಅವರು ಮುಕ್ತ ಹಾಗೂ ನಿರ್ಭೀತರಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗು ತ್ತಿಲ್ಲ’ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

ಆದ್ದರಿಂದ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮನವಿ ಪರಿಗಣಿಸಿ, ಕೇಂದ್ರ ಸರ್ಕಾರದ ಮಾದರಿಯಂತೆಯೇ ರಾಜ್ಯದಲ್ಲಿ ಸರ್ಕಾರಿ ನೌಕರರ ವಿರುದ್ಧ ಅನಾಮಧೇಯ ದೂರು ಅಥವಾ ಪತ್ರಗಳ ಆಧಾರದ ಮೇಲೆ ತನಿಖೆಗೆ ಒಳಪಡಿಸದೇ, ಪೂರ್ಣ ವಿಳಾಸವಿರುವ ದೂರುಗಳನ್ನು ಮಾತ್ರ ಪರಿಗಣಿಸಲು ಸೂಕ್ತ ಆದೇಶ ಹೊರಡಿಸುವಂತೆ ಮುಖ್ಯಮಂತ್ರಿಯವರು 2019ರ ಆ.4ರ ಟಿಪ್ಪಣಿಯಲ್ಲಿ ಸೂಚಿಸಿರುತ್ತಾರೆ. ಅದರಂತೆ, ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ 2019ರ ಅಕ್ಟೋಬರ್‌ 3ರಂದು ಹೊರಡಿಸಿದ ಸುತ್ತೋಲೆಯಲ್ಲಿ ಹೇಳಿದ್ದಾರೆ.

ನೌಕರರ ಸಂಘದ ಮನವಿ: ಸರ್ಕಾರಿ ಅಧಿಕಾರಿಗಳು ಅಥವಾ ನೌಕರರ ವಿರುದ್ಧ ದೂರು ಕೊಡಲಿಕ್ಕೆ ನಿರ್ದಿಷ್ಟ ನಿಯಮಗಳಿವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಅನಾಮಧೇಯ ದೂರುಗಳು ಹೆಚ್ಚಾಗಿವೆ. ಅಧಿಕಾರಿಗಳು ತಪ್ಪು ಮಾಡಿದ್ದರೆ ದೂರು ನೀಡುವುದು ಸರಿ. ಆದರೆ, ಅನಾವಶ್ಯಕವಾಗಿ ವೈಯುಕ್ತಿಕ ದ್ವೇಷ ಅಥವಾ ಇನ್ನಾéವುದೂ ಕಾರಣಕ್ಕೆ ದೂರು ಕೊಡುವುದರಿಂದ ಅಧಿಕಾರಿಗಳು ಮತ್ತು ನೌಕರರಿಗೆ ಸಾಕಷ್ಟು ಕಿರಿಕಿರಿ, ಮಾನಸಿಕ ಹಿಂಸೆ ಉಂಟಾಗುತ್ತಿತ್ತು.

Advertisement

ಇದರಿಂದಾಗಿ, ಅನೇಕ ಅಧಿಕಾರಿಗಳು ಮತ್ತವರ ಕುಟುಂಬದ ವರು ಮುಜುಗರ ಅನುಭವಿಸಬೇಕಾಗುತ್ತದೆ. ಮುಖ್ಯ ಕಾರ್ಯವೈಖರಿ, ಸೇವಾ ಹಿರಿತನ, ಮುಂಬಡ್ತಿ, ನಿವೃತ್ತಿ ನಂತರ ಪಿಂಚಣಿ, ಉಪದಾನ ಇನ್ನಿತರ ಸೌಲಭ್ಯಗಳೂ ಸಹ ಸಕಾಲದಲ್ಲಿ ಲಭ್ಯವಾ ಗುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು ಎಂಬುದು ನೌಕರರ ಸಂಘದ ಬೇಡಿಕೆಯಾಗಿತ್ತು.

ಪೊಲೀಸ್‌ ಇಲಾಖೆಯಿಂದಲೂ ಸುತ್ತೋಲೆ: ಸರ್ಕಾರಿ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಬರುವ ಅನಾಮಧೇಯ ದೂರುಗಳ ಕುರಿತಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಸಹ ಸುತ್ತೋಲೆ ಹೊರಡಿಸಿದೆ. ಈ ವಿಚಾರವಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಉಲ್ಲೇಖೀಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹೊರಡಿಸಿರುವ ಸುತ್ತೋಲೆಯಂತೆ ಕ್ರಮ ವಹಿಸುವಂತೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶಿಸಿ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕಿ (ಜಿ ಆ್ಯಂಡ್‌ ಎಚ್‌ಆರ್‌) ಮಾಲಿನಿ ಕೃಷ್ಣಮೂರ್ತಿ ಅವರು ನ.6ರಂದು ಸೂಚನಾಪತ್ರ ರವಾನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next