ನವದೆಹಲಿ: ಕೋವಿಡ್‌ದಿಂದ ಕುಸಿದಿದ್ದ ಭಾರತದ ಆರ್ಥಿಕತೆ ನಿಧಾನವಾಗಿ ಸಹಜತೆಯತ್ತ ಹೊರಳುತ್ತಿದೆ.
ನಕಾರಾತ್ಮಕವಾಗಿದ್ದ ಭಾರತದ ಆರ್ಥಿಕತೆ ಈಗ ಸ್ಥಿರತೆ ಕಂಡುಕೊಂಡಿದ್ದು ಮುಂದಿನ ದಿನಗಳಲ್ಲಿ ಇದು ಸಕಾರಾತ್ಮಕ ಅಂಶವಾಗಿ ಬೆಳವಣಿಗೆ ಕಾಣುವ ವಿಶ್ವಾಸವಿದೆ ಎಂದು ವಿವಿಧ ದೇಶಗಳ ಆರ್ಥಿಕತೆಯ ಸ್ಥಿತಿಗತಿಗಳ ಬಗ್ಗೆ ರೇಟಿಂಗ್ ಕೊಡುವ ಸಂಸ್ಥೆ “ಮೂಡೀಸ್ ಇನ್ವೆಸ್ಟರ್ ಸರ್ವೀಸಸ್’ ಸಂಸ್ಥೆ ತಿಳಿಸಿದೆ.
2019ರ ನವೆಂಬರ್‌ನಿಂದ ಇಲ್ಲಿಯವರೆಗೆ ಭಾರತದ ಆರ್ಥಿಕ ಸ್ಥಿತಿಗತಿಯನ್ನು ಅಧ್ಯಯನ ಮಾಡಿದಾಗ ಈ ವಿಚಾರ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಕೋವಿಡ್‌ದಿಂದಾಗಿ, 2020ರ ಮಾರ್ಚ್‌ನಲ್ಲಿ ಭಾರತದ ಹಣಕಾಸು ಬೆಳವಣಿಗೆ ಶೇ. 7.3ಕ್ಕೆ ಇಳಿದಿತ್ತು. 2021-22ರ ಆರ್ಥಿಕ ವರ್ಷದಲ್ಲಿ ಭಾರತದ ಒಟ್ಟಾರೆ ದೇಶೀಯ ಉತ್ಪನ್ನ (ಜಿಡಿಪಿ) 2019ರಲ್ಲಿನ ಜಿಡಿಪಿಯನ್ನು ಮೀರಿಸಿ ಮುನ್ನುಗ್ಗಿ, ಶೇ.9.3ರ ಹಂತಕ್ಕೆ ಮುಟ್ಟಲಿದೆ ಎಂದು ಮೂಡಿ ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ:ಕೃಷ್ಣೆಗಾಗಿ ಪಾದಯಾತ್ರೆ: ರಾಜಕೀಯ ಗಿಮಿಕ್ : ಸಚಿವ ಮುರಗೇಶ ನಿರಾಣಿ