Advertisement
ಹೌದು ಇದು ಇರುವ ಪ್ರದೇಶ ಕುಂದಾಪುರ ತಾಲೂಕಿನ ಕೆರಾಡಿ ಗ್ರಾಮದ ಮೂಡುಗಲ್ಲು ಎಂಬ ಪ್ರದೇಶದಲ್ಲಿದೆ . ಎತ್ತ ನೋಡಿದರು ಕಾನನದ ಸೊಬಗಿನ ನಡುವೆ ಡಾಂಬರು ಮಾಸಿರುವ ರಸ್ತೆ ಜನರ ಸಂಚಾರವಿಲ್ಲದ ಕೇವಲ ಬೆರಳೆಣಿಕೆಯಷ್ಟು ಮನೆಗಳು ಇರುವಂಥಹ ಕುಗ್ರಾಮದ ನಡುವೆ ವಿರಾಜಮಾನನಾಗಿರುವ ಲಯಕರ್ತ ಕೇಶವನಾಥೇಶ್ವರ.
Related Articles
ಈ ಗುಹಾಂತರ ದೇವಾಲಯವು ಆತ್ಯಂತ ಪ್ರಾಚೀನವಾದ ದೇವಾಲಯವಾಗಿದ್ದು ಶಿವನು ಈ ಗುಹೆಯೊಳಗಿಂದ ಕಾಶಿ ತಲುಪಿದ್ದಾನೆ ಎಂಬ ಪ್ರತೀತಿ ಇದೆ. ಅಂತೆಯೇ ಇಲ್ಲಿ ಹಲವಾರು ಋಷಿ ಮುನಿಗಳು ತಪಸ್ಸನ್ನಾಚರಿಸಿದ ನಿದರ್ಶನಗಳು ಇವೆ ಎಂದು ಹೇಳಲಾಗಿದೆ. ಬ್ರಿಟಿಷ್ ಅಧಿಕಾರಿಯಾದ ಕರ್ನಲ್ ಲಾರ್ಡ್ ಮೆಕ್ಕಿಂಗ್ ಹಲವು ವರ್ಷಗಳ ಹಿಂದೆ ಇಲ್ಲಿಗೆ ಭೇಟಿ ನೀಡಿದ್ದರಂತೆ.
Advertisement
ಗತಪೂವ ಕಾಲದಲ್ಲಿ ಓರ್ವ ಭೂಮಾಲಿಕರ ಗದ್ದೆಗೆ ನಿಗೂಢ ಪ್ರಾಣಿಯಿಂದ ಹಾನಿಯಾಗುತ್ತಿತ್ತು ಆ ಪ್ರಾಣಿಯನ್ನು ಹಿಡಿಯಬೇಕೆಂದು ಭೂಮಾಲಿಕನು ರಾತ್ರಿ ಹೊತ್ತು ಕಾದು ಕುಳಿತ ಸಂದರ್ಭ ಒಂದು ಗೋವು ಗದ್ದೆಗೆ ಬರುವುದನ್ನು ಅರಿತ ಭೂಮಾಲಿಕ ಗೋವನ್ನು ಬೆನ್ನತ್ತಿ ಬರುತ್ತಾನೆ ಆಗ ಗೋವು ಅಲ್ಲಿರುವ ಗುಹೆಯ ಒಳಗೆ ಪ್ರವೇಶಿಸುತ್ತದೆ. ಭೂಮಾಲಿಕನು ಗುಹೆಯ ಒಳಗೆ ಹೊಕ್ಕು ಸಾಕಷ್ಟು ದೂರ ಗೋವನ್ನು ಬೆನ್ನಟ್ಟುತ್ತಾನೆ ಸ್ವಲ್ಪ ದೂರ ಕ್ರಮಿಸಿದಾಗ ಗೋವು ಕಣ್ಮರೆಯಾಗುತ್ತದೆ. ಕತ್ತಲೆ ಗುಹೆಯೊಳಗೆ ಬಂಧಿಯಾಗಿರುವ ಭೂಮಾಲಿಕನು ಅನ್ಯ ಮಾರ್ಗ ಕಾಣದೆ ಭಗವಂತನ ಸ್ಮರಣೆ ಮಾಡುತ್ತಾನೆ ,ಈ ಸಂದರ್ಭ ಗುಹೆಯ ಹೊರ ಭಾಗದಿಂದ ಸಣ್ಣ ಜ್ಯೋತಿಯೊಂದು ಪ್ರಕಾಶಿಸಲು ಆರಂಭಿಸುತ್ತಿದೆ ಅದನ್ನು ಅನುಸರಿಸುತ್ತಾ ಭೂಮಾಲಿಕನು ಗುಹೆಯಿಂದ ಹೊರಬರುತ್ತಾನೆ. ದೇವರ ಚೈತನ್ಯದಿಂದ ಗುಹೆಯಿಂದ ಹೊರಬಂದ ಭೂಮಾಲಿಕನು ವಿಸ್ಮಿತನಾಗಿ ಗೋವು ದಾಳಿಮಾಡಿದ ಗದ್ದೆಯನ್ನು ದೇವರಿಗಾಗಿ ಉಂಬಳಿ ಬಿಟ್ಟಿದ್ದಾನೆ ಎನ್ನುವುದು ಪ್ರತೀತಿ.
ಎಳ್ಳಮಾವಾಸ್ಯೆ ವಿಶೇಷ:ಎಳ್ಳಮಾವಾಸ್ಯೆ ಇಲ್ಲಿನ ವಿಶೇಷತೆಗಳಲ್ಲಿ ಒಂದು ಕೇಶವನಾಥೇಶ್ವರ ದೇವಾಲಯಕ್ಕೂ ಇಲ್ಲೆ ಪಕ್ಕದಲ್ಲಿರುವ ಮೇಳ್ಯ ಕೆರೆಗೂ ಸಂಪರ್ಕವಿದ್ದು ಈ ಕೆರೆಯಲ್ಲಿ ಎಳ್ಳಮವಾಸ್ಯೆ ಸ್ನಾನ ಮಾಡಲು ಸಹಸ್ರಾರು ಮಂದಿ ಭಕ್ತರು ವರ್ಷಂಪ್ರತಿ ಬರುತ್ತಾರೆ. ಪ್ರತೀ ವರ್ಷ ಎಳ್ಳಮವಾಸ್ಯೆ ದಿನದಂದು ಮೇಳ್ಯ ಕೆರೆಯಲ್ಲಿ ಹೂವಿನ ಎಸಳುಗಳು ತೇಲುತ್ತಿರುವುದನ್ನು ಕಾಣಬಹುದಂತೆ. ಸುತ್ತಲೂ ಕಲ್ಲು ಬಂಡೆಗಳಿಂದ ಕೂಡಿರುವ ಪ್ರದೇಶವಾಗಿರುವ ದೇವಾಲಯದಲ್ಲಿ ನೀರಿನ ಪ್ರಮಾಣ ವರ್ಷವಿಡೀ ಒಂದೇ ಪ್ರಮಾಣದಲ್ಲಿರುತ್ತದೆ. ಮಳೆಗಾಲದ ಸಂದರ್ಭದಲ್ಲಿ ಸ್ವಲ್ಪ ಮಟ್ಟಿನಲ್ಲಿ ನೀರಿನ ಪ್ರಮಾಣ ಏರಿಕೆಯಾದರೂ ಬೇಸಗೆ ಸಮಯದಲ್ಲಿ ಒಂದು ಅಡಿಯಷ್ಟು ನೀರು ತುಂಬಿರುವುದು ಇಲ್ಲಿನ ವಿಶೇಷತೆಯನ್ನು ಎತ್ತಿ ತೋರಿಸುತ್ತದೆ. ಗುಹೆ ಪ್ರವೇಶಿಸಲು ದೇವಸ್ಥಾನದ ಒಳಪ್ರವೇಶಿಸಿ ಹಿಂದಿನ ಬಾಗಿಲಿನಂದ ಹೊರಬರುವ ಬಾಗಿಲು ತೆರುದುಕೊಂಡಾಗ ಈ ಗುಹಾಂತರ ದೇವಾಲಯದ ದರುಷನವಾಗುತ್ತದೆ. ಅರ್ಚಕರು ಈ ದೇವಾಲಯದ ಇತಿಹಾಸವನ್ನು ಬಿಡಿಬಿಡಿಯಾಗಿ ವಿವರಿಸುತ್ತಾರೆ. ತಲುಪುವ ದಾರಿ:
– ಕುಂದಾಪುರದಿಂದ ಕೊಲ್ಲೂರು ಮಾರ್ಗವಾಗಿ ಕೆರಾಡಿ ತಲುಪಿ ಅಲ್ಲಿಂದ ಮೂಡಗಲ್ಲಿಗೆ ತೆರಳಬಹುದು. – ಉಡುಪಿಯಿಂದ ಹಾಲಾಡಿ ಮಾರ್ಗವಾಗಿ ಕೆರಾಡಿ ತಲುಪಿ ಅಲ್ಲಿಂದ ಮೂಡಗಲ್ಲಿಗೆ ತೆರಳಬಹುದು.