Advertisement
ಶುಕ್ರವಾರದ ಸಂತೆಯ ದಿನ ಹೊರ ಜಿಲ್ಲೆಗ ಳಿಂದಲೂ ವ್ಯಾಪಾರಿಗಳು ಬಂದು ಸ್ಪರ್ಧಾತ್ಮಕವಾಗಿ ವ್ಯಾಪಾರ ಮಾಡುತ್ತ ರಾತ್ರಿ ತಮ್ಮ ತಾತ್ಕಾಲಿಕ ಶಿಬಿರಗಳನ್ನು ಬಿಚ್ಚಿ ಹೊರಡುವಾಗ ಇಡೀ ದಿನ ಹೊರಚೆಲ್ಲಿದ ತ್ಯಾಜ್ಯ ವಸ್ತುಗಳನ್ನು ಹಾಗೆಯೇ ಬಿಟ್ಟು ಹೋಗುವುದನ್ನು, ತರಕಾರಿ ತ್ಯಾಜ್ಯವನ್ನು ಜಾನುವಾರುಗಳು ಮೆದ್ದು (ತಿನ್ನಲಾಗದ್ದನ್ನು ಹಾಗೆಯೇ ಬಿಟ್ಟು) ಸೆಗಣಿ ಹಾಕಿ, ಗಂಜಳ ಸುರಿಸಿ ಧನ್ಯವಾದ ಸೂಚಿಸುವುದನ್ನು, ಮರು ದಿನ ಪುರಸಭೆಯ ಕಾರ್ಮಿಕರು ಬರುವವರೆಗೆ ಇಡೀ ಮಾರುಕಟ್ಟೆ ಅಂಗಣದಲ್ಲಿ ಪ್ಲಾಸ್ಟಿಕ್ ಚೀಲಗಳು ರಾಶಿ ರಾಶಿಯಾಗಿ ಬಿದ್ದು ಕೊಂಡು ಗಾಳಿಗೆ ಹಾರಾಡುತ್ತಿರುವುದರ ಬಗ್ಗೆ ಉದಯವಾಣಿ ಸುದಿ ನ ದಲ್ಲಿ ಜ. 2ರಂದು ವರದಿ ಪ್ರಕಟವಾಗಿತ್ತು. ಈ ವರದಿಗೆ ಈಗ ಸ್ಪಂದನೆ ವ್ಯಕ್ತ ವಾ ಗಿದೆ. ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್, ಮುಖ್ಯಾಧಿಕಾರಿ ಇಂದು ಎಂ., ಪರಿಸರ ಎಂಜಿ ನಿ ಯರ್ ಶಿಲ್ಪಾ ಎಸ್., ಕಂದಾಯ ನಿರೀಕ್ಷಕ ಅಶೋಕ ಸಹಿತ ಸಿಬಂದಿ ಜ. 6ರಂದು ಸಂತೆ ವ್ಯಾಪಾರಿಗಳಿಗೆ ತ್ಯಾಜ್ಯ ವಿಲೇವಾರಿಯ ಬಗ್ಗೆ ಸೂಚನೆ, ಎಚ್ಚರಿಕೆ ನೀಡುವ ಕ್ರಮ ಕೈಗೊಂಡರು.
Related Articles
“ಜ. 6ರ ಶುಕ್ರವಾರ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದ್ದೇವೆ. ಪರಿಣಾಮವಾಗಿ ತ್ಯಾಜ್ಯ ಕಡಿಮೆಯಾಗಿದೆ. ಕೆಲವರು ಗೋಣಿ ಚೀಲದಲ್ಲಿ ಹಾಕಿಟ್ಟಿದ್ದಾರೆ. ತ್ಯಾಜ್ಯ ವಿಂಗಡಣೆಗೆ ಕ್ರಮವಹಿಸಲು ಸದ್ಯ ಆಗಿಲ್ಲ. ಮುಂದಿನ ವಾರ ಗುತ್ತಿಗೆದಾರರ ಮೂಲಕ ಸಮರ್ಪಕ ಕ್ರಮ ಕೈಗೊಳ್ಳಲಾಗುವುದು’
-ಪ್ರಸಾದ್ ಕುಮಾರ್, ಪುರಸಭೆ ಅಧ್ಯಕ್ಷರು
Advertisement