ಶಿರ್ವ: ಉಡುಪಿ – ಕಾರ್ಕಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮೂಡುಬೆಳ್ಳೆ ನೆಲ್ಲಿಕಟ್ಟೆಯ ರಸ್ತೆ ಬದಿ ಕಸದಿಂದ ಸಿಂಗರಿಸಿಕೊಂಡು ಬೆಳ್ಳೆ ನಾಗರಿಕರ ಮತ್ತು ಸ್ಥಳೀಯಾಡಳಿತದ ಪ್ರಜ್ಞಾವಂತಿಕೆಯನ್ನು ಅಣಕಿಸುವಂತಿದೆ.
ಪ್ಲಾಸ್ಟಿಕ್ ಲಕೋಟೆಯಲ್ಲಿ ಕಸವನ್ನು ಕಟ್ಟಿ ರಸ್ತೆಗೆಸೆಯುವ ಪ್ರವೃತ್ತಿ ಹೆಚ್ಚಾಗುತ್ತಿದ್ದು ಪರಿಣಾಮವಾಗಿ ಹೆದ್ದಾರಿ ಸಹಿತ ರಸ್ತೆಗಳ ಇಕ್ಕೆಲಗಳು ಕಸದಿಂದ ತುಂಬಿರುತ್ತವೆ. ಬೆಳ್ಳೆ ಗ್ರಾ.ಪಂ. ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಯಾವುದೇ ವ್ಯವಸ್ಥೆ ಇಲ್ಲದಿರುವುದು ಈ ರೀತಿ ತ್ಯಾಜ್ಯ ರಸ್ತೆ ಬದಿಯಲ್ಲಿ ಎಸೆಯಲು ಪ್ರಮುಖ ಕಾರಣವಾಗಿದೆ.
ಎಸ್‌ಎಲ್‌ಆರ್‌ಎಂ ಘಟಕಕ್ಕೆ ಎರಡು ವರ್ಷಗಳ ಹಿಂದೆಯೇ 22 ಲ.ರೂ. ಮಂಜೂರಾಗಿದ್ದು ಗಾ.ಪಂ. ನಿರಾಸಕ್ತಿಯಿಂದ ಅನುದಾನ ಬಳಕೆಯಾಗಿರುವುದಿಲ್ಲ. ಪಡು ಬೆಳ್ಳೆ ಡಂಪಿಂಗ್ ಯಾರ್ಡ್ ಕಾನೂನುಬದ್ಧವಾಗಿದ್ದರೂ ಬಳಕೆ ಯಾಗುತ್ತಿಲ್ಲ. ಮಂಗಳವಾರದ ಸಂತೆಯ ಕಸವನ್ನು ಬೆಳ್ಳೆ ಗ್ರಾ. ಪಂ. ವ್ಯಾಪ್ತಿಯಲ್ಲಿ ವಿಲೇವಾರಿ ಮಾಡದೆ ಟ್ರ್ಯಾಕ್ಟರ್ ಮೂಲಕ ಉಡುಪಿ ನಗರಸಭೆಯ ಡಂಪಿಂಗ್ ಯಾರ್ಡ್‌ಗೆ ಸಾಗಿಸಲಾಗುತ್ತಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಕಸ ತ್ಯಾಜ್ಯದ ಸಮಸ್ಯೆ ಉಲ್ಪಣಿಸಿದ್ದು ಶೀಘ್ರ ಪರಿಹಾರ ದೊರೆಯಬೇಕಾಗಿದೆ.
– ವಿನೋದ್ ಕ್ಯಾಸ್ತಲಿನೋ, ನೆಲ್ಲಿಕಟ್ಟೆ, ಮೂಡುಬೆಳ್ಳೆ