Advertisement

Moodubelle: ಕೋಳಿ ಅಂಕಕ್ಕೆ ದಾಳಿ; 7 ಮಂದಿ ವಶಕ್ಕೆ

08:22 PM Oct 23, 2024 | Team Udayavani |

ಶಿರ್ವ: ಇಲ್ಲಿನ ಪೊಲೀಸ್‌ ಠಾಣಾ ವ್ಯಾಪ್ತಿಯ ಮೂಡುಬೆಳ್ಳೆ ಗೂಡುದೊಟ್ಟು ಬಳಿ ಕೋಳಿ ಅಂಕದಲ್ಲಿ ನಿರತರಾಗಿದ್ದ 7 ಮಂದಿಯನ್ನು ಅ. 22ರಂದು ಬೆಳಗ್ಗೆ ಶಿರ್ವ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ಕೋಳಿ ಅಂಕದಲ್ಲಿ ನಿರತರಾಗಿದ್ದ ವಿಜಯ್‌ ಪ್ರಕಾಶ್‌ ಕ್ವಾಡ್ರಸ್‌, ಸುರೇಶ್‌, ಫ್ರಾನ್ಸಿಸ್‌ ದೀಪಕ್‌ ಮೆಂಡೋನ್ಸಾ, ಪ್ರಜ್ವಲ್‌ ಜೋಸೆಫ್‌ ಮಾರ್ಟಿಸ್‌, ಪ್ರದೀಪ್‌, ಸಂತೋಷ್‌ ಮತ್ತು ಸುಜಿತ್ಯ ಅವರನ್ನು ಶಿರ್ವ ಠಾಣಾಧಿಕಾರಿ ಸಕ್ತಿವೇಲು ಇ. ನೇತೃತ್ವದ ಪೊಲೀಸರ ತಂಡ ವಶಕ್ಕೆ ಪಡೆದಿದೆ. ಜೂಜಾಟಕ್ಕೆ ಬಳಸಿದ್ದ ನಗದು 7850 ರೂ., 4 ಹುಂಜ, ರಿಕ್ಷಾ ಮತ್ತು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next