Advertisement

ಮೂಡುಬೆಳ್ಳೆ : ಮೊಬೈಲ್‌ ಅಂಗಡಿ ಕಳವು ತಂಡದ ಬಂಧನ

03:45 AM Jul 02, 2017 | Team Udayavani |

ಶಿರ್ವ: ಮೂಡುಬೆಳ್ಳೆಯ ಮೊಬೈಲ್‌ ಅಂಗಡಿಯಿಂದ ಜೂ.14 ರ ರಾತ್ರಿ ಮೊಬೈಲ್‌ಗ‌‌ಳನ್ನು ಕಳವುಗೈದ ಕಳ್ಳರ ತಂಡವನ್ನು ಬಂಧಿಸುವಲ್ಲಿ ಶಿರ್ವ ಪೋಲೀಸರು ಯಶಸ್ವಿಯಾಗಿದ್ದಾರೆ.

Advertisement

ಮೂಡುಬೆಳ್ಳೆಯ ಅನನ್ಯ ಸೇಲ್ಸ್‌ ಕೇರ್‌ ಶಾಪ್‌ನ ಕಿಟಿಕಿಯ ಬಾಗಿಲಿಗೆ ಅಳವಡಿಸಿದ ಗ್ಲಾಸ್‌ನ್ನು ಒಡೆದು ಕಿಟಿಕಿಯ ಒಳಗಿನಿಂದ  ಕೈ ಹಾಕಿ ಅಂಗಡಿಯ ಸೆಲ್ಪ್ನಲ್ಲಿ ದ್ದ ವಿವಿಧ ಕಂಪೆನಿಯ 6 ಮೊಬೈಲ್‌ಗ‌ಳನ್ನು ಕಳವು ಮಾಡಿದ್ದರು. ಆರೋಪಿಗಳಲ್ಲಿ  ಸ್ವರೂಪ್‌ ಮತ್ರು¤ ರಮೇಶ್‌ ಕುಲಾಲ್‌ ಎಂಬವರನ್ನು ಮೂಡುಬೆಳ್ಳೆಯ ನೆಲ್ಲಿಕಟ್ಟೆಯಿಂದ ಬಂಧಿಸಲಾಗಿದ್ದು ಅವರು ನೀಡಿದ ಮಾಹಿತಿಯಂತೆ ಐದು ಮಂದಿ ಅಪ್ರಾಪ್ತ ಆರೋಪಿಗಳನ್ನು ಕಪ್ಪಂದಕರಿಯದ ಕುಕ್ಕುದಕಟ್ಟೆಯಿಂದ ಬಂಧಿಸಲಾಗಿದೆ. ಬಂಧಿತರಿಂದ 3 ಬೈಕ್‌ ಮತ್ತು ಕಳವುಗೈದ ಮೊಬೈಲ್‌, ಚಾರ್ಜರ್‌ ಮತ್ತು ಪವರ್‌ ಬ್ಯಾಂಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಓರ್ವನಿಗೆ ಜಾಮೀನು ದೊರೆತಿದೆ,ಇನೋ°ರ್ವನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅಪ್ರಾಪ್ತರನ್ನು ಬಾಲನ್ಯಾಯ ಮಂಡಳಿಗೆ ಒಪ್ಪಿಸಿದ್ದು ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next