Advertisement

ರೈತರ ಬಳಿಗೆ ಕೃಷಿ ಇಲಾಖೆ: ಮೂಡುಬೆಳ್ಳೆ ಸಮಗ್ರ ಕೃಷಿ ಅಭಿಯಾನ

11:33 PM Jun 13, 2019 | sudhir |

ಶಿರ್ವ: ಕೃಷಿ ಇಲಾಖೆಯು ಬಹುಪಯೋಗಿ ಕಾರ್ಯಕ್ರಮಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರ ಗದ್ದೆಗೆ ಬಂದು ಜಾರಿಗೊಳಿಸುತ್ತಿದೆ ಎಂದು ಕಾಪು ಸಹಾಯಕ ಕೃಷಿ ಅಧಿಕಾರಿ ವಾದಿರಾಜ್‌ ಹೇಳಿದರು.

Advertisement

ಅವರು ಗುರುವಾರ ಮೂಡುಬೆಳ್ಳೆಗೆ ಆಗಮಿಸಿದ ಸಮಗ್ರ ಕೃಷಿ ಅಭಿಯಾನ 2019ರ -ಕೃಷಿ ಮಾಹಿತಿ ವಾಹನದ ಮುಂಭಾಗದಲ್ಲಿ ರೈತರಿಗೆ ಮಾಹಿತಿ ನೀಡಿ ಕೃಷಿ ಇಲಾಖೆಯ ಯೋಜನೆಗಳ ಕರಪತ್ರ ವಿತರಿಸಿ ಮಾತನಾಡಿದರು.

ನೇರ ನಗದು ವರ್ಗಾವಣೆ ಯೋಜನೆಯಡಿ ಭತ್ತದಲ್ಲಿ ನೂತನ ತಾಂತ್ರಿಕತೆಗಳ ಪ್ರಾತ್ಯಕ್ಷಿಕೆಯನ್ನು ಕೈಗೊಳ್ಳುವ ರೈತರ ಖಾತೆಗೆ ಪ್ರೋತ್ಸಾಹಧನ ನೇರ ಜಮೆ, ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ, ಕೃಷಿ ಭಾಗ್ಯ, ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ, ಮಣ್ಣು ಆರೋಗ್ಯ ಅಭಿಯಾನ, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ, ಸಾವಯವ ಕೃಷಿ, ಸಾವಯವ ಸಂತೆ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ, ಕೃಷಿ ಯಾಂತ್ರೀಕರಣ, ಕೃಷಿ ಯಂತ್ರಧಾರೆ, ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಮತ್ತಿತರ ಯೋಜನೆಗಳ ಬಗ್ಗೆ ಅವರು ಮಾಹಿತಿ ನೀಡಿದರು.

ಬೆಳ್ಳೆ ಗ್ರಾ.ಪಂ. ಅಧ್ಯಕ್ಷೆ ರಂಜನಿ ಹೆಗ್ಡೆ, ಸದಸ್ಯ ರಾಜೇಂದ್ರ ಶೆಟ್ಟಿ, ಪಿಡಿಒ ವಸಂತಿ ಬಾಯಿ, ಸಿಬಂದಿ ರೇಷ್ಮಾ, ರಕ್ಷಿತ್‌, ಕೃಷಿ ಅಧಿಕಾರಿ ಪುಷ್ಪಲತಾ, ಸಹಾಯಕ ಕೃಷಿ ಅಧಿಕಾರಿ ಶೇಖರ್‌, ತೋಟಗಾರಿಕೆ ಇಲಾಖೆಯ ಶ್ವೇತಾ,ಕೃಷಿ ಅನುವುಗಾರ ರಾಘವೇಂದ್ರ ನಾಯಕ್‌ ಕಲ್ಲೊಟ್ಟು, ರೈತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next