ಕುಂದಾಪುರ: ಮೂಡ್ಲಕಟ್ಟೆ ಆನಗಳ್ಳಿ ಸೇತುವೆ ಬಳಿಯ ರೈಲ್ವೆ ಹಳಿಯಲ್ಲಿ ಅಪರಿಚಿತ ಪುರುಷನ ಮೃತದೇಹ ಪತ್ತೆಯಾಗಿದೆ.
Advertisement
ವೀಕ್ಲಿ ಸ್ಪೆಷಲ್ ರೈಲು ಚಾಲಕ ತಿಳಿಸಿದಂತೆ, ರೈಲ್ವೇ ಟ್ರ್ಯಾಕ್ ಮೆಂಟೈನರ್ ರೈಲ್ವೇ ಟ್ರ್ಯಾಕ್ ಪರಿಶೀಲಿಸಿದಾಗ ಮೃತದೇಹ ಬಿದ್ದುಕೊಂಡಿತ್ತು. ಬಲಕಾಲು ಬಲಗೈ ಮುರಿದಿದ್ದು, ದೇಹದ ಮೇಲೆ ಅಲ್ಲಲ್ಲಿ ಗಾಯಗಳಾಗಿದ್ದು ಹಳದಿ ಬಣ್ಣದ ಟಿ ಶರ್ಟ್ ಹಾಗೂ ಸಿಮೆಂಟ್ ಕಲರ್ ಪ್ಯಾಂಟ್ ಧರಿಸಿದ್ದು ಕಂಡು ಬಂದಿದೆ.
ವ್ಯಕ್ತಿಯು ರೈಲ್ವೆ ಟ್ರ್ಯಾಕ್‌ನಲ್ಲಿ ಹಾದು ಹೋದ ಯಾವುದೋ ರೈಲಿನಿಂದ ಅಕಸ್ಮಾತ್ ಆಗಿ ಬಿದ್ದು ಅಥವಾ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.