Advertisement

ಮೂಡುಬಿದಿರೆ: ಕೋಟಿ ಚೆನ್ನಯ ಕಂಬಳಕ್ಕೆ ಚಾಲನೆ

12:51 AM Dec 12, 2021 | Team Udayavani |

ಮೂಡುಬಿದಿರೆ: ಒಂಟಿ ಕಟ್ಟೆಯ ಕಡಲಕೆರೆ ನಿಸರ್ಗಧಾಮದ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ನಿರ್ಮಾಣವಾಗಿರುವ ತುಳುನಾಡ ಗುತ್ತಿನ ಮನೆ ಚಾವಡಿ ಶೈಲಿಯ ಬೃಹತ್‌ ವೇದಿಕೆಯ ಎದುರು 19ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳ ಶನಿವಾರ ಬೆಳಗ್ಗೆ ಪ್ರಾರಂಭವಾಯಿತು.

Advertisement

ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಉಮಾನಾಥ ಕೋಟ್ಯಾನ್‌ ಉಪಸ್ಥಿತಿಯಲ್ಲಿ ಉದ್ಘಾಟನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚೌಟರ ಅರಮನೆಯ ಕುಲದೀಪ್‌ ಎಂ.ಜೋಡುಕರೆಯಲ್ಲಿ ಜ್ಯೋತಿ ಬೆಳಗಿದರು.

ಅಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಈಶ್ವರ ಭಟ್‌, ಚರ್ಚ್‌ನ ಧರ್ಮಗುರು ವಾಲ್ಟರ್‌ ಡಿ’ಸೋಜಾ ಮತ್ತು ಮಸೀದಿ ಧರ್ಮಗುರು ಮೌಲಾನಾ ಝಿಯಾವುಲ್ಲಾ, ಉದ್ಯಮಿ ಕುಂಟಾಡಿ ಸುಧೀರ್‌ ಹೆಗ್ಡೆ ಅವರು ಜೋಡುಕರೆಗೆ ಪೂಜೆ ಸಲ್ಲಿಸಿ, ಕಂಬಳಕ್ಕೆ ಚಾಲನೆ ನೀಡಿದರು.

ತುಳುನಾಡಗುತ್ತಿನ ಚಾವಡಿ ಶೈಲಿಯ ನೂತನ ವೇದಿಕೆಯನ್ನು ಎಂಆರ್‌ಪಿಎಲ್‌ ಆಡಳಿತ ನಿರ್ದೇಶಕ ಎಂ. ವೆಂಕಟೇಶ್‌ ಉದ್ಘಾಟಿಸಿದರು.

60 ಲಕ್ಷ ರೂ. ವೆಚ್ಚದ ಗುತ್ತಿನ ಚಾವಡಿ ವೇದಿಕೆ ನಿರ್ಮಾಣದಲ್ಲಿ ಎಂಆರ್‌ಪಿಎಲ್‌ 35 ಲಕ್ಷ ರೂ. ಕೊಡುಗೆ ನೀಡಿದೆ.

Advertisement

ಮಂಗಳೂರು ನಗರ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ಅವರು ವೇದಿಕೆಯ ಪಕ್ಕದಲ್ಲಿರುವ ಮೂಡುಬಿದಿರೆಯ ಮಣ್ಣಿನ ಮಗಳು ವೀರರಾಣಿ ಅಬ್ಬಕ್ಕನ ಪ್ರತಿಮೆಗೆ ಹಾರಾರ್ಪಣೆಗೈದರು.

ಇದನ್ನೂ ಓದಿ:ಯಾವುದೇ ಕ್ರೀಡೆಯಲ್ಲಿ ಆಡುವಾಗ ಗೆಲ್ಲಲೆಂದೇ ಆಡಬೇಕು : ಮುಖ್ಯಮಂತ್ರಿ ಬೊಮ್ಮಾಯಿ

ಸಮ್ಮಾನ
ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ, ಇಂಡಿಯನ್‌ ಐಡಲ್‌ ಫೈನ ಲಿಸ್ಟ್‌ ನಿಹಾಲ್‌ ತಾವ್ರೋ, ಎಂಆರ್‌ ಪಿಎಲ್‌ ಎಂ.ಡಿ. ಎಂ. ವೆಂಕಟೇಶ್‌ ಅವರನ್ನು ಸಮ್ಮಾನಿಸಲಾಯಿತು.

ಶ್ರದ್ಧಾಂಜಲಿ
ನಟ ಪುನೀತ್‌ ರಾಜ್‌ಕುಮಾರ್‌, ಜ| ಬಿಪಿನ್‌ ರಾವತ್‌ ಸಹಿತ ಹುತಾತ್ಮರಾದ 13 ಮಂದಿಗೆ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಕಂಬಳ ಸಮಿತಿ ಗೌ| ಅಧ್ಯಕ್ಷ, ಮಾಜಿ ಸಚಿವ ಅಭಯಚಂದ್ರ, ಕಂಬಳ ಸಿನೆಮಾ ನಿರ್ದೇಶಕ ರಾಜೇಂದ್ರ ಬಾಬು ಸಿಂಗ್‌, ಕಂಬಳ ಸಮಿತಿ ಕೋಶಾಧ್ಯಕ್ಷ ಭಾಸ್ಕರ್‌ ಎಸ್‌. ಕೋಟ್ಯಾನ್‌, ಪ್ರಧಾನ ತೀರ್ಪುಗಾರ, ಪ್ರ. ಕಾರ್ಯದರ್ಶಿ ಗುಣಪಾಲ ಕಡಂಬ, ಕಾರ್ಯದರ್ಶಿ ರಂಜಿತ್‌ ಪೂಜಾರಿ, ಸುರೇಶ್‌ ಪೂಜಾರಿ, ಕೆ.ಆರ್‌. ಪಂಡಿತ್‌, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ., ಕಂಬಳಗಳ ಯಜಮಾನರು, ನಟ ಗೋಪಿನಾಥ್‌, ಪುರಸಭೆ ಅಧ್ಯಕ್ಷ ಪ್ರಸಾದ್‌ ಕುಮಾರ್‌, ಮುಡಾ ಅಧ್ಯಕ್ಷ ಮೇಘನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ರೋಹನ್‌ ಕಾರ್ಯಕ್ರಮ ನಿರ್ವಹಿಸಿದರು.

ಎಸ್‌.ವಿ. ರಾಜೇಂದ್ರ ಸಿಂಗ್‌ ಬಾಬು ನಿರ್ದೇಶನದಲ್ಲಿ ಅರುಣ್‌ ರೈ ತೋಡಾರು ನಿರ್ಮಾಣದ “ಬಿರ್ದ್ ದ ಕಂಬುಲ’ (ತುಳು) ಮತ್ತು “ವೀರ ಕಂಬಳ'(ಕನ್ನಡ) ಸಿನೆಮಾ ಚಿತ್ರೀಕರಣಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next