ಕುಣಿಗಲ್: ದಶಕದ ಬಳಿಕ ಮೂಡಲ್ ಕುಣಿಗಲ್ ಕೆರೆ ತುಂಬಿ ಕೊಡಿ ಬಿದ್ದಿದ್ದು, ರಮ್ಯವಾದ ದುಮಕುವ ಕೋಡಿಯ ನೀರು ನೋಡಲು ಜನ ಸಾಗರವೇ ಕೋಡಿ ಬಳಿ ಹರಿದ್ದು ಬರುತ್ತಿದೆ.
ಕುಣಿಗಲ್ ಪಟ್ಟಣ ಸೇರಿದಂತೆ ತಾಲೂಕಿನ ಜೀವನಾಡಿಯಾದ ಐತಿಹಾಸಿಕ ಪುರಾತನವಾದ ಹೆಸರಾಂತ ಕುಣಿಗಲ್ ದೊಡ್ಡಕೆರೆ 12 ವರ್ಷದ ಬಳಿಕ ಶುಕ್ರವಾರ ಸಂಪ್ರದಾಯದಂತೆ ಕೋಡಿ ಬಿದ್ದದ್ದು, ಪಟ್ಟಣದ ಜನತೆ, ಹಾಗೂ ಸುತ್ತಾ ಮುತ್ತಲಿನ ಗ್ರಾಮಸ್ಥರಿಗೆ ಜೀವ ಕಳೆ ಬಂದಿದೆ, ಜತೆಗೆ ಸುತ್ತಲಿನ ಪ್ರದೇಶದಲ್ಲಿ ಅಂತರ್ಜಲ, ಕೃಷಿ ಚಟುವಟಿಕೆಗಳಿಗೆ ಮುರು ಜೀವ ಬಂದಂತಾಗಿದ್ದು, ಪಟ್ಟಣದ ಜನತೆ ಹಾಗೂ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ,
ಮುಗಿಬಿದ್ದ ಜನ : ಮೂಡಲ್ ಕುಣಿಗಲ್ ಕೆರೆ ನೋಡೋರ್‌ಗೊಂದ ಐಭೋಗ, ಮೂಡಿ ಬರುತ್ತಾನೆ ಚಂದಿರಾಮ ಎಂಬ ಜಾನಪದ ಹಾಡಿನಂತೆ ಅಕ್ಷರ ಸಹ ಮೂಡಲ್ ಕುಣಿಗಲ್ ಕೆರೆ ಐಭೋಗವನ್ನ ಕಣ್ಣತುಂಬಿಕೊಳ್ಳಲು ಪಟ್ಟಣದಾಧ್ಯಂತ ಜಾತಿ, ಮತ, ಧರ್ಮ ಎನ್ನದೇ ಹೆಂಗಸರು ಮಕ್ಕಳು, ವೃದ್ದರು ಹಾದಿಯಾಗಿ ಸಾವಿರಾರು ಜನರು ಕೆರೆಯ ಕೋಡಿ ನೋಡಲು ಮುಗಿ ಬಿದ್ದಿದ್ದಾರೆ,
ಪಟ್ಟಣದ ಜನರಿಗೆ ಅನುಕೂಲ : ದೊಡ್ಡಕೆರೆಯ ಸೋಮೇಶ್ವರ ದೇವಾಲಯ ಸಮೀಪ ಜಾಕ್‌ವೆಲ್ ನಿರ್ಮಾಣ ಮಾಡಿ, ನೀರನ್ನು ಶುದ್ದೀಕರಣ ಘಟಕದಲ್ಲಿ ಸಂಸ್ಕರಿಸಿ ಪಟ್ಟಣದ 23 ವಾರ್ಡ್ ಗಳ 45 ಸಾವಿರಕ್ಕೂ ಅಧಿಕ ಜನರಿಗೆ ಕೆರೆ ನೀರು ಪೂರೈಕೆ ಮಾಡಲಾಗುತ್ತಿದೆ, ಕೆರೆ ಕೋಡಿಯಿಂದ ಪಟ್ಟಣದ ಜನತೆಗೆ ಅನುಕೂಲವಾಗಿದೆ.
ವಿದ್ಯುತ್ ದೀಪಾಲಾಕಾರಕ್ಕೆ ಒತ್ತಾಯ : ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ ಅವರ ಶಾಸಕರಾಗಿದ್ದಾಗ ಮೂಡಲ್ ಕುಣಿಗಲ್ ಕೆರೆ ಕೋಡಿಯಾಗಿತ್ತು ಈ ವೇಳೆ ಸ್ನೇಹ ಮಿತ್ರ ಮಂಡಲಿ ಬಳಗದಿಂದ ಕೆರೆಯ ಕೋಡಿಗೆ ಬಣ್ಣ ಬಣ್ಣದ ವಿದ್ಯುತ್ ದೀಪಾಲಾಕಾರ ಮಾಡಿ ಕೆರೆಯ ಸ್ವಭಗನ್ನ ಇಮ್ಮಡಿಗೊಳಿಸಿತ್ತು, ಈ ಸೋಭಗನ್ನ ನೋಡಲು ಪ್ರತಿ ದಿನ ಸಂಜೆ ಆರು ಗಂಟೆಯಿಂದ ರಾತ್ರಿ ಹತ್ತರ ವರೆಗೆ ಜನ ಸಾಗರೇ ಹರಿದು ಬಂದು ಕಣ್ಣತ್ತುಂಬಿಕೊಂಡಿದ್ದರು ಈ ಭಾರಿಯೂ ಒಂದು ವಾರಗಳ ಕಾಲವಾರದರೂ ಕೆರೆ ಕೋಡಿಗೆ ವಿದ್ಯುತ್ ದೀಪಾಲಕಾರ ಮಾಡಿ ಜನತೆಗೆ ಕೋಡಿಯ ಸೌದರ್ಯ ಸವಿಯುವ ಅವಕಾಶವನ್ನು ಶಾಸಕ ಡಾ.ಹೆಚ್.ಡಿ.ರಂಗನಾಥ್ ಮಾಡಿಸಬೇಕೆಂದು ಸಾರ್ವಜನಿಕರ ಒತ್ತಾಸೆಯಾಗಿದೆ,
ಅಚ್ಚಕಟ್ಟಿಗೆ ನೀರು ಹರಿಸಲು ಒತ್ತಾಯ : ಕಳೆದ ಒಂದು ದಶಕದಿಂದ ಕೆರೆಗೆ ಹೇಮಾವತಿ ನೀರು ಸಮರ್ಪಕವಾಗಿ ಹರಿಯದೇ ಹಾಗೂ ಮಳೆಯಾಗದ ಕಾರಣ ಮತ್ತು ಪಟ್ಟಣ ಜನತೆಗೆ ಕುಡಿಯುವ ನೀರು ಮೀಸಲಿಡುವ ಉದ್ದೇಶದಿಂದ ಕೆರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಿರಲಿಲ್ಲ, ಇದರಿಂದ ರೈತರು ಸಮರ್ಪಕವಾಗಿ ಕೃಷಿ ಮಾಡದೇ ಸಂಕಷ್ಟಕ್ಕೆ ಸಿಲುಕಿದ್ದಾರೆ, ಈ ಭಾರಿ ಕೆರೆ ಭರ್ತಿಯಾಗಿ ಕೋಡಿಯಾಗಿರುವ ಕಾರಣ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.