Advertisement
ವಿದ್ಯಾಗಿರಿ ಪರಿಸರದಲ್ಲಿ ಡಿ. 21ರಿಂದ 27ರ ವರೆಗೆ ನಡೆಯಲಿರುವ 25ನೇ ಅಂತಾರಾಷ್ಟ್ರೀಯ ಸ್ಕೌಟ್ಸ್ ಗೈಡ್ಸ್ ಸಾಂಸ್ಕೃತಿಕ ಜಾಂಬೂರಿಯ ಭಾಗವಾಗಿದೆ ಈ ಸಾಹಸ ಕ್ರೀಡೆಗಳು.
ದೇಶವಿದೇಶಗಳಿಂದ ಆಗಮಿಸಲಿರುವ 50,000 ವಿದ್ಯಾರ್ಥಿಗಳು ಐದು ದಿನಗಳ ಪರ್ಯಂತ ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಳ್ಳುವರು. ಪ್ರತೀ ದಿನ 10,000 ವಿದ್ಯಾರ್ಥಿಗಳಿಗೆ ಆಡಲು ಅವಕಾಶ ಕಲ್ಪಿಸಲಾಗಿದೆ. ಫನ್ ಬೇಸ್, ಚಾಲೆಂಜ್ ವ್ಯಾಲಿ, ಪ್ರದರ್ಶನ ವಲಯ ಎಂಬ ಮೂರು ವಿಭಾಗಗಳಿವೆ. ಒಟ್ಟು 35 ವಿಧದ ಆಟಗಳು ವಿದ್ಯಾರ್ಥಿಗಳ ಕುತೂಹಲ ಕೆರಳಿಸುತ್ತ, ಅವರಲ್ಲಿ ಧೈರ್ಯ, ಸ್ಥೈರ್ಯ ಬೆಳೆಸುತ್ತ ಅವರ ಮನಸ್ಸನ್ನು ಅರಳಿಸಲಿವೆ.
Related Articles
100ಕ್ಕೂ ಅಧಿಕ ತರಬೇತಿ ಪಡೆದ ಮಾರ್ಗದರ್ಶಕರು ನಿರಂತರ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದು ತಿಂಗಳಿಂದ ಈ ಕ್ರೀಡೆಗಳಿಗೆ ತಯಾರಿ ನಡೆಯುತ್ತಿದೆ. ಜಾಂಬೂರಿಯ ಪ್ರಧಾನ
ಕಾರ್ಯದರ್ಶಿ, ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಆವರ ಮೇಲುಸ್ತುವಾರಿಯಲ್ಲಿ ಅಂತಾರಾಷ್ಟ್ರೀಯ ಸ್ಕೌಟ್ಸ್ ಸಹಾಯಕ ಆಯುಕ್ತ ಮಧುಸೂದನ, ರಾಷ್ಟ್ರೀಯ ನಿರ್ದೇಶಕ ಕೃಷ್ಣಸ್ವಾಮಿ, ಜಿಮ್ಮಿ ಸಿಕ್ವೇರ, ಜಾಂಬೂರಿ ಸಂಯೋಜಕ ನವೀನ್‌ಚಂದ್ರ ಅಂಬೂರಿ ಮೊದಲಾದವರು ಈ ಸಾಹಸ ಕ್ರೀಡೆಗಳ ಸಿದ್ಧತೆಯಲ್ಲಿ ನಿರತರಾಗಿದ್ದಾರೆ.
Advertisement
ಸೌಟ್ಸ್, ಗೈಡ್ಸ್, ರೇಂಜರ್ಸ್, ರೋವರ್ಸ್ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಆಟಗಳನ್ನು ಸಂಯೋಜಿಸಲಾಗಿದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವ್ಯವಸ್ಥೆ ಇದೆ. ತಂಡಗಳನ್ನಾಗಿಸಿ ಆಟಗಳಲ್ಲಿ ತೊಡಗಿಸುವ ಮೂಲಕ ಎಲ್ಲೂ ಒತ್ತಡದ ಸನ್ನಿವೇಶ ನಿರ್ಮಾಣವಾಗದಂತೆ ನೋಡಿಕೊಳ್ಳಲಾಗುತ್ತಿದೆ.
ಯಾವೆಲ್ಲ ಕ್ರಿಡೆಗಳಿವೆ?ಬೀಮ್ ಬ್ಯಾಲೆನ್ಸ್, ಒಬ್ಸ್ಟೆಕಲ್ ಪ್ಲಾಂಕ್ ಬ್ಯಾಲೆನ್ಸ್ ವಾಕ್, ಲೋಗ್‌ಬ್ಯಾಲೆನ್ಸ್ ವಾಕ್, ನೆಟ್ ಕ್ರಾಲಿಂಗ್, ಮಂಕಿ ಬ್ರಿàಚ್, ಒಬ್ಸ್ಟೆಕಲ್ ಕ್ಲೈಂಬಿಂಗ್, ಟೈರ್ ಬ್ಯಾಲೆನ್ಸ್, ಪ್ಲಾಂಕ್ ಬ್ಯಾಲೆನ್ಸ್ ವಾಕ್, ಲ್ಯಾಡರ್ ಸ್ವಿಂಗ್, ಟೈರ್ ಕ್ರಾಲಿಂಗ್, ಟೈರ್ ಪಾಸಿಂಗ್, ನೆಟ್ ವಾಲ್ ಕ್ಲೈಂಬಿಂಗ್, ಫೋರ್ ಲೆಗ್ ಟವರ್, ರ್ಯಾಪ್ಲಿಂಗ್ ಆ್ಯಂಡ್ ವಾಲ್ ಕ್ಲೈಂಬಿಂಗ್, ಟೈರ್ ವಾಲ್ ಕ್ಲೈಂಬಿಂಗ್, ರಷ್ಯನ್ ವಾಲ್, ಏರಿಯಲ್ ರನ್ ವೇ, ಒಕ್ಟೋಗೊನಲ್ ಟವರ್, ಚಿಮ್ನಿ, ಸಸ್ಪೆನ್ಸ್ ಬ್ರಿಜ್, ಬೀಮ್ ಬ್ರಿಜ್, ಬ್ಯಾಲೆನ್ಸ್ ಬ್ರಿಜ್, ಡೆರಿಕ್ ಬ್ರಿಜ್, ಟ್ರೀ ಹಟ್, ಟ್ರಸ್ಟ್ ಫಾಲ್, ವಾಟರ್ ಫಾಲ್, ಸೀ ಸಾ, ರ್ಯಾಪ್ಟಿಂಗ್, ಫ್ಲೋಟರ್ ವಾಕ್, ಜಿಪ್ ಲೈನ್, ಟಾರ್ಜಾನ್ ಸ್ವಿಂಗ್, ರೋಪ್ ಕ್ಲೈಂಬಿಂಗ್, ಆರ್ಚರಿ, ರ್ಯಾಪ್ಲಿಂಗ್ ಇವೆಲ್ಲವೂ ವಿದ್ಯಾರ್ಥಿಗಳಿಗೆ ಆಸಕ್ತಿದಾಯಕ ಆಟಗಳಾಗಿವೆ. ಎಲ್ಲ ಆಟಗಳಿಗೂ ತಲಾ ಇಬ್ಬರು ತರಬೇತಿ ಪಡೆದ ಮಾರ್ಗದಶರ್ಕರು ಪ್ರಾಥಮಿಕ ಚಿಕಿತ್ಸೆಗೆ ವೈದ್ಯರು ಹಾಗೂ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.