Advertisement

Moodabidri ಕಂಬಳದಲ್ಲಿ ಸಮಯದ ಶಿಸ್ತು ಪಾಲನೆಗೆ ಸೈರನ್‌

11:51 PM Nov 04, 2023 | Team Udayavani |

ಮೂಡುಬಿದಿರೆ: ಕಂಬಳದಲ್ಲಿ ಕೋಣಗಳನ್ನು ಕರೆಗೆ ಇಳಿಸು ವಾಗ ಸಮಯದ ಶಿಸ್ತು ಕಾಪಾಡಲು ಈ ಸಲದಿಂದ ಸೈರನ್‌ ಮೊಳಗಿಸಿ ಎಚ್ಚರಿಸುವ ಕ್ರಮವನ್ನು ಜಾರಿಗೆ ತರಲಾಗುವುದು ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಡಾ| ದೇವಿಪ್ರಸಾದ್‌ ಶೆಟ್ಟಿ ಬೆಳಪು ಹೇಳಿದರು.

Advertisement

ಜಿಲ್ಲಾ ಕಂಬಳ ಸಮಿತಿ ಮೂಡು ಬಿದಿರೆಯಲ್ಲಿ ಏರ್ಪಡಿಸಿದ್ದ ತೀರ್ಪು ಗಾರರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರಕಾರದ ಮಾರ್ಗಸೂಚಿಯಂತೆ ಕಂಬಳ ವನ್ನು ಶಿಸ್ತುಬದ್ಧವಾಗಿ ನಡೆಸಿ 24 ಗಂಟೆಯೊಳಗೆ ಮುಗಿಸಲು ಕೆಲವು ನಿರ್ದೇಶನಗಳನ್ನು ರೂಪಿಸಲಾಗಿದೆ. ಸೈರನ್‌ ಮೊಳಗಿದ ಬಳಿಕವೂ ಕೋಣಗಳನ್ನು ಕರೆಗಿಳಿಸದಿದ್ದಲ್ಲಿ ಮುಂದಿನ
ಕೋಣಗಳಿಗೆ ಅವಕಾಶ ಕಲ್ಪಿಸಲಾಗು ವುದು. ಟಿವಿ ತೀರ್ಪುಗಾರರು, ಸ್ಕೈ ವ್ಯೂವ್‌ ವ್ಯವಸ್ಥೆಯಲ್ಲೂ ಹೊಸತನದ ಬದಲಾವಣೆಗಳಾಗಲಿವೆ ಎಂದರು.

ತೀರ್ಪುಗಾರರು ಯಾರದೇ ಒತ್ತಡಕ್ಕೆ ಒಳಗಾಗದೆ, ನಿರ್ಭೀತಿಯಿಂದ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಸೂಕ್ತ ಮಾರ್ಗಸೂಚಿ ರೂಪಿಸಲಾಗಿದೆ. ತೀರ್ಪುಗಾರರು ಸಮಯಕ್ಕೆ ಸರಿಯಾಗಿ ಕಂಬಳಕ್ಕೆ ಬಂದು ಕೊನೆಯವರೆಗೂ ಹಾಜರಿರಬೇಕು. ಕಂಬಳದಲ್ಲಿ ಯಾವುದೇ ಸಮಸ್ಯೆಗಳು ಬಂದಲ್ಲಿ ಗೌರವಾಧ್ಯಕ್ಷ ಎರ್ಮಾಳು ರೋಹಿತ್‌ ಹೆಗ್ಡೆ ನೇತೃತ್ವದ ಶಿಸ್ತು ಸಮಿತಿ ಪರಿಶೀಲನೆ ನಡೆಸಿ ಬಗೆಹರಿಸಲಿದೆ. ನ. 11ರಂದು ಕಾರ್ಕಳದ ಮಿಯ್ನಾರಿನಲ್ಲಿ ನಡೆಯುವ ಪ್ರಾಯೋಗಿಕ ಕಂಬಳದಲ್ಲಿ ಹೊಸ ಮಾರ್ಗಸೂಚಿಗಳ ಪಾಲನೆ ಮಾಡಲಾಗುವುದು ಎಂದು ಹೇಳಿದರು.

ಬೆಂಗಳೂರು ಕಂಬಳ
ಜಿಲ್ಲಾ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಗುಣಪಾಲ ಕಡಂಬ ಮಾತನಾಡಿ, ಕಂಬಳದ ಇತಿಹಾಸದಲ್ಲೇ ಮೊತ್ತ ಮೊದಲ ಸಾಹಸವಾಗಿ ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳದ ಸಕಲ ಸಿದ್ಧತೆಗಳು ಸಮರ್ಪಕವಾಗಿ ನಡೆಯುತ್ತಿದ್ದು ಅಲ್ಲಿ ಕರೆ, ನೀರು, ನೆರಳು ಇವುಗಳ ಸುವ್ಯವಸ್ಥೆಗೆ, ಸಮಯದ ಶಿಸ್ತಿಗೆ ಆದ್ಯತೆ ನೀಡಲಾಗುತ್ತಿದೆ; ಅಲ್ಲಿ ಕನ್ನಡ ಮತ್ತು ತುಳು ಭಾಷೆಯಲ್ಲಿ ವೀಕ್ಷಕ ವಿವರಣೆ ನೀಡಲಾಗುವುದು ಎಂದು ತಿಳಿಸಿದರು.

Advertisement

ಕಂಬಳ ಸಮಿತಿ ಮಾಜಿ ಅಧ್ಯಕ್ಷರಾದ ಎರ್ಮಾಳು ರೋಹಿತ್‌ ಹೆಗ್ಡೆ, ಪಿ.ಆರ್‌. ಶೆಟ್ಟಿ, ಹಾಲಿ ಕೋಶಾಧಿಕಾರಿ ಚಂದ್ರಹಾಸ ಸನಿಲ್‌, ಪ್ರಧಾನ ಕಾರ್ಯದರ್ಶಿ ಮುಚ್ಚಾರು ಕಲ್ಕುಡೆ ಲೋಕೇಶ್‌ ಶೆಟ್ಟಿ, ತೀರ್ಪುಗಾರ‌ರ ಸಂಚಾಲಕ ವಿಜಯಕುಮಾರ್‌ ಕಂಗಿನ ಮನೆ, ಪ್ರಮುಖರಾದ ಶ್ರೀಕಾಂತ ಭಟ್‌, ಗಿರೀಶ್‌ ಆಳ್ವ, ಅರುಣ್‌ ಭಟ್‌ ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next