Advertisement
ಆರಂಭಿಕ ಶಿಲ್ಕು 3.76 ಕೋಟಿ ರೂ. ಇದ್ದು 2022-23ರಲ್ಲಿ 26.99 ಕೋ. ರೂ ಜಮೆಯಾಗುವ ನಿರೀಕ್ಷೆ ಇದೆ. ಯಾವುದೇ ಹೊಸ ಯೋಜನೆಯನ್ನು ಘೋಷಿಸಿಲ್ಲ.
Related Articles
Advertisement
ರಸ್ತೆಗಳ ರಚನೆ, ಅಭಿವೃದ್ಧಿಗಾಗಿ 125 ಲಕ್ಷ, ಚರಂಡಿ ರಚನೆಗೆ 50 ಲಕ್ಷ, ಕೊಳವೆ ಬಾವಿ ಪಂಪ್, ನೀರಿನ ಪೈಪ್ ಸೋರಿಕೆ ದುರಸ್ತಿ ಬಗ್ಗೆ 50 ಲಕ್ಷ, ಹೊರಗುತ್ತಿಗೆಯಡಿ ತಾತ್ಕಾಲಿಕ ಪಂಪು ಚಾಲಕರ ವೇತನಕ್ಕಾಗಿ 20 ಲಕ್ಷ, 8 ಮಂದಿ ಪಂಪ್ ಚಾಲಕರ ವೇತನಕ್ಕಾಗಿ 20 ಲಕ್ಷ, ಹೊರಗುತ್ತಿಗೆಯಡಿ ದಾರಿದೀಪ ದುರಸ್ತಿ, ನಿರ್ವಹಣೆಗೆ 30 ಲಕ್ಷ, ದಾರಿದೀಪ ವಿಸ್ತರಣೆಗೆ 30 ಲಕ್ಷ, ಕೊಳವೆ ಬಾವಿ, ಪೈಪ್‌ಲೈನ್ ರಚನೆಗೆ 30 ಲಕ್ಷ, ಆಡಿಟ್, 3ನೇ ಪಾರ್ಟಿ ತಪಾಸಣೆ, ಕಾನೂನು ವೆಚ್ಚಗಳಿಗಾಗಿ 25 ಲಕ್ಷ, ಜಂಗಲ್ ಕಟ್ಟಿಂಗ್, ಚರಂಡಿ ಹೂಳು ತೆಗೆಯಲು 23 ಲಕ್ಷ, ಕಸ ಸಂಗ್ರಹದ ವಾಹನ, ಚಾಲಕರ ನಿರ್ವಹಣೆಗೆ 20 ಲಕ್ಷ, ದಾರಿ ದೀಪ ಸಾಮಗ್ರಿ ಬಗ್ಗೆ 10 ಲಕ್ಷ, ನೈರ್ಮಲ್ಯ ಘಟಕಕ್ಕೆ ಸಾಮಗ್ರಿ ಬಗ್ಗೆ 10 ಲಕ್ಷ, ಬ್ಲೀಚಿಂಗ್, ಕ್ಲೋರಿನೇಟರ್ ಗ್ಯಾಸ್‌ಗೆ 8 ಲಕ್ಷ, ಪಾರ್ಕ್ ನಿರ್ವಹಣೆಗೆ 2 ಲಕ್ಷ, ಮಳೆ ನೀರಿನ ಚರಂಡಿ ದುರಸ್ತಿಗೆ 5 ಲಕ್ಷ, ರೇಚಕ ಸ್ಥಾವರಗಳ ದುರಸ್ತಿ, ನಿರ್ವಹಣೆಗೆ 4.75 ಲಕ್ಷ, ಜೆಸಿಬಿ ಕಾರ್ಯಾಚರಣೆ, ಘನತ್ಯಾಜ್ಯ ಸಂಬಂಧಿತ ವೆಚ್ಚ 5 ಲಕ್ಷ, ಕಚೇರಿಯ ಲೇಖನ ಸಾಮಗ್ರಿಗೆ 5 ಲಕ್ಷ, ಕಂಪ್ಯೂಟರ್ ನಿರ್ವಹಣೆ, ಪೀಠೊಪಕರಣ ಬಗ್ಗೆ 15 ಲಕ್ಷ, ವಾಹನ ಇಂಧನದ ಬಗ್ಗೆ 20 ಲಕ್ಷ, ವಿಮೆ ಕಂತು 5 ಲಕ್ಷ, ದುರಸ್ತಿಗೆ 5 ಲಕ್ಷ ವೆಚ್ಚವಾಗಲಿದೆ ಎಂದು ಆಂದಾಜಿಸಲಾಗಿದೆ.
ಇದಲ್ಲದೆ, ಶೇ.24.10 ನಿಧಿಗೆ ಎಸ್‌ಎಫ್‌ಸಿ ನಿಧಿಯಿಂದ 25 ಲಕ್ಷ, ಪುರಸಭೆ ನಿಧಿಯಿಂದ 6 ಲಕ್ಷ, ಶೇ.7.25ರ ನಿಧಿಗೆ ಪುರಸಭೆ ನಿಧಿಯಿಂದ 2.35 ಲಕ್ಷ, ಶೇ. 5ರ ನಿಧಿಗೆ ಪುರಸಭೆ ನಿಧಿಯಿಂದ 2 ಲಕ್ಷ ಇವೆಲ್ಲ ವ್ಯಯದ ಪಟ್ಟಿಗೆ ಸೇರುತ್ತವೆ ಎಂದು ಅವರು ವಿವರಿಸಿದರು. ಪುರಸಭಾ ಉಪಾಧ್ಯಕ್ಷೆ ಸುಜಾತಾ ಶಶಿಧರ, ಸ್ಥಾಯೀ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಮುಖ್ಯಾಧಿಕಾರಿ ಇಂದು ಎಂ., ಎಂಜಿನಿಯರ್ ಪದ್ಮನಾಭ, ಆರೋಗ್ಯ ನಿರೀಕ್ಷಕ ರಾಜೇಶ್ ಕೆ., ಅಕೌಂಟೆಂಟ್ ಸೀಮಾ ಸಹಿತ ಅಧಿಕಾರಿಗಳಿದ್ದರು. ಪುರಸಭೆ ಸದಸ್ಯರು ಚರ್ಚೆಗಳಲ್ಲಿ ಪಾಲ್ಗೊಂಡಿದ್ದು ಬಜೆಟ್ ಸರ್ವಾನುಮತಿಯೊಂದಿಗೆ ಮಂಜೂರಾಯಿತು.
ಪ್ರಮುಖ ವೆಚ್ಚಗಳು
ಎಸ್‌ಎಫ್‌ಸಿ ಮುಕ್ತ ನಿಧಿ ಅನುದಾನದಲ್ಲಿ ಪೌರಕಾರ್ಮಿಕರ ವೇತನಕ್ಕೆ 64 ಲಕ್ಷ, ಶೇ.24.10ರನ್ವಯ ಪ.ಜಾ., ಪ.ಪಂ. ವರ್ಗಕ್ಕೆ 20 ಲಕ್ಷ, 15ನೇ ಹಣಕಾಸು ಸಾಮಾನ್ಯ ಮೂಲ ನಿರೀಕ್ಷಿತ ಅನುದಾನದಲ್ಲಿ ರಸ್ತೆಗೆ 53 ಲಕ್ಷ, ಚರಂಡಿಗೆ 25 ಲಕ್ಷ, ಕುಡಿಯುವ ನೀರು ಕಾಮಗಾರಿಗೆ 58.50 ಲಕ್ಷ , ಘನತ್ಯಾಜ್ಯ ಘಟಕಕ್ಕೆ 58.50 ಲಕ್ಷ ರೂ., ಖಾಯಂ ನೌಕರರ ವೇತನ, ಪಿಂಚಣಿಗಾಗಿ 75 ಲಕ್ಷ ರೂ. ಕಾದಿರಿಸಲಾಗಿದೆ