Advertisement

ಮರೆಯಾದ “ಕೆರೆ’ಗಳಿಗೆ ಮುಡಾದಿಂದ ಮರುಜೀವ!

03:37 PM Mar 21, 2022 | Team Udayavani |

ಮಂಗಳೂರು : ಕೆರೆಗಳನ್ನು ಪುನರುಜ್ಜೀವನಗೊಳಿಸಿ ಸಂರಕ್ಷಣೆ, ಅಂತರ್ಜಲ ವೃದ್ಧಿಸುವ ನೆಲೆಯಲ್ಲಿ ಮಂಗಳೂರು ವ್ಯಾಪ್ತಿಯಲ್ಲಿ ಸದ್ದಿಲ್ಲದೆ ಕಾರ್ಯಯೋಜನೆಗಳು ಸಾಕಾರಗೊಳ್ಳು ತ್ತಿವೆ. ಪುರಾತನ ಗುಜ್ಜರಕೆರೆ ಅಭಿವೃದ್ಧಿಯಾದ ಸ್ವರೂಪದಲ್ಲಿಯೇ ನಗರದ ಸಣ್ಣ ಪುಟ್ಟ ಕೆರೆಗಳು ಕೂಡ ಇದೀಗ ಅಭಿವೃದ್ಧಿಗೆ ಮುನ್ನುಡಿ ಬರೆಯುತ್ತಿದೆ. ಮರೆಯಾಗಿದೆ ಎಂದೇ ಭಾವಿಸುತ್ತಿದ್ದ ಸಣ್ಣ ಪುಟ್ಟ ಕೆರೆಗಳಿಗೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮೂಲಕ ಮರುಜೀವ ನೀಡುವ ವಿಶೇಷ ಪ್ರಯತ್ನ ನಗರದಲ್ಲಿ ಸಾಕಾರವಾಗುತ್ತಿದೆ. ಶಾಸಕ ವೇದವ್ಯಾಸ ಕಾಮತ್‌, ಮುಡಾ ಅಧ್ಯಕ್ಷ ರವಿಶಂಕರ ಮಿಜಾರು ಅವರು ಈ ನೆಲೆಯಲ್ಲಿ ಮಹತ್ವದ ಕಾರ್ಯ ನಡೆಸಿದ್ದಾರೆ.

Advertisement

ಆಕರ್ಷಕ ದೇಖೀ!
ಜಪ್ಪುವಿನಲ್ಲಿ “ಮೊಲಿ ಕೆರೆ’ ಎಂದೇ ಗುರುತಿಸಿ ಕೊಂಡಿದ್ದ ಸಣ್ಣ ಕೆರೆ ಕಾಲ ಕಳೆದಂತೆ ಕಸದ ರಾಶಿಯಿಂದ ಕಣ್ಮರೆಯಾಗಿತ್ತು. ಹೀಗಾಗಿ ಕಡತದಲ್ಲಿ ಮಾತ್ರ ಈ ಕೆರೆಯ ಉಲ್ಲೇಖವಾಗುತ್ತಿತ್ತು. ಅಂತಹ ಕೆರೆಯನ್ನು ಇದೀಗ ಸುಂದರಗೊಳಿಸಲಾಗಿದೆ. ಒಂದೆಡೆ ಅಂತರ್ಜಲಕ್ಕೆ ಸೂಕ್ತವಾಗುವ ನೆಲೆಯಲ್ಲಿ ಮತ್ತೂಂದೆಡೆ ಪ್ರವಾಸಿಗರಿಗೆ ತಕ್ಕುದಾದ ರೀತಿಯಲ್ಲಿ ಕೆರೆ ಅಭಿವೃದ್ಧಿಪಡಿಸಲಾಗಿದೆ. ಕುಲಶೇಖರ, ಕದ್ರಿ ಕೆರೆಗಳು ಕೂಡ ಮರೆಯಾದ ಸ್ವರೂಪದಲ್ಲೇ ಇದ್ದವು. ಇದೀಗ ಅವು ಗ ಳನ್ನು ಅಭಿವೃದ್ಧಿಗೊಳಿಸಲಾಗಿದೆ.

ಇತ್ತೀಚೆಗೆ ಅಭಿವೃದ್ಧಿಗೊಂಡ ಕೆರೆ
ಜಪ್ಪಿನಮೊಗರು ಗ್ರಾಮದ ಕಂರ್ಬಿಸ್ಥಾನ ಕೆರೆ, ಕೊಣಾಜೆ ಸಮೀಪದ ದಡಸ ಕೆರೆ, ಬಜಾಲ್‌ ಗ್ರಾಮದ ಕುಂದೋಡಿ ಕೆರೆ, ಕಸ್ಬಾ ಬಜಾರ್‌ ಗ್ರಾಮದ ನಡುಪಳ್ಳಿ ಜುಮ್ಮಾ ಮಸೀದಿ ಕೆರೆ, ಪಡುಪಣಂಬೂರು ಗ್ರಾ.ಪಂ.ವ್ಯಾಪ್ತಿಯ ಜಳಕದ ಕೆರೆ, ಕಾಟಿಪಳ್ಳ ಕೆರೆ.

ಇದನ್ನೂ ಓದಿ :10 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವರ್ಣರಂಜಿತ ತೆರೆ : ಕಿಕ್ಕಿರಿದ ಪ್ರೇಕ್ಷಕರು

ಅಭಿವೃದ್ಧಿಯ ನಿರೀಕ್ಷೆಯಲ್ಲಿರುವ ಕೆರೆಗಳು
ಬೋಳೂರು ವಾರ್ಡ್‌ನ ಕುಟ್ಟಿನಾಡ್‌ ಕೆರೆ, ಅಳಪೆಯ ಕಂರ್ಭಿಮಾರ್‌ ಕೆರೆ, ಮಹಾಮ್ಮಾಯ ಕೆರೆ, ಟ್ಯಾಂಕ್‌ ಕಾಲನಿ ಕೆರೆ, ಹರೇಕಳ ಗ್ರಾಮದ ರಾಜಗುಡ್ಡೆಯ ತಾವರಕೆರೆ, ಕೊಣಾಜೆಯ ಪುಲಿಂಡಿ ಕೆರೆ, ಅಂಬ್ಲಿಮೊಗರು ವಾಡ ಕೆರೆ, ಉಳ್ಳಾಲ ನಗರಸಭೆಯ ಒಂಬತ್ತು ಕೆರೆ ಬಳಿಯ ಸಾರ್ವಜನಿಕ ಕೆರೆ, ಬೆಳ್ಮಗ್ರಾಮದ ಬೆಳ್ಮದೋಟ ಸಾರ್ವಜನಿಕ ಕೆರೆ ಮುಂತಾದ ಕೆರೆಗಳು ಅಭಿವೃದ್ಧಿಯ ನಿರೀಕ್ಷೆಯಲ್ಲಿವೆ. ಮುಡಾ ವ್ಯಾಪ್ತಿಯಲ್ಲಿ ಬರುವ ಮಂಗಳೂರು, ಮೂಲ್ಕಿ, ಉಳ್ಳಾಲ ಪ್ರದೇಶಗಳಲ್ಲಿ ಪ್ರಸ್ತುತ ಉಳಿದಿರುವ ಕೆರೆಗಳನ್ನು ಸಮೀಕ್ಷೆ ನಡೆಸಿ ಪ್ರಾಧಿಕಾರದಲ್ಲಿರುವ ಕೆರೆಗಳ ಅಭಿವೃದ್ಧಿ ಮೊತ್ತವನ್ನು ಬಳಸಿಕೊಂಡು ಪುನರುಜ್ಜೀವನಗೊಳಿಸಲು ನಿರ್ಧರಿಸಲಾಗಿದೆ.

Advertisement

ಗುಜ್ಜರಕೆರೆ ಹೊಸ ಸ್ವರೂಪ
ರಾಜ್ಯ ಸರಕಾರದ ವಿವಿಧ ಅನುದಾನಗಳಿಂದ ಗುಜ್ಜರಕೆರೆ ವಿಶೇಷ ಮಾದರಿಯಲ್ಲಿ ಅಭಿವೃದ್ಧಿ ಗೊಂಡಿದೆ. ಬೈರಾಡಿ ಕೆರೆ ಹಾಗೂ ಕಾವೂರು ಕೆರೆ ಮತ್ತಷ್ಟು ಅಭಿವೃದ್ಧಿಗೆ ತೆರೆದುಕೊಳ್ಳುತ್ತಿದೆ. ಇದರ ಜತೆಗೆ ನಗರದ ಸಣ್ಣ ಪುಟ್ಟ ಕೆರೆಗಳು ಕೂಡ ಇದೀಗ ಅಭಿವೃದ್ಧಿಯಾಗುತ್ತಿರುವುದು ಗಮನೀಯ ಅಂಶ.

Advertisement

Udayavani is now on Telegram. Click here to join our channel and stay updated with the latest news.

Next