Advertisement
ತಾಯಿ ಮೇರಿ ಮಾತೆಯ ಜನ್ಮದಿನ, ತೆನೆ ಹಬ್ಬ ಹಾಗೂ ಹೆಣ್ಮಕ್ಕಳ ದಿನವನ್ನು ಸಂಯುಕ್ತವಾಗಿ “ಮೊಂತಿಫೆಸ್ತ್’ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತಿದೆ. ಚರ್ಚ್‌ಗಳಲ್ಲಿ ಬೆಳಗ್ಗೆ ಹಬ್ಬದ ಬಲಿಪೂಜೆ, ಹೊಸತೆನೆಯ ಆಶೀರ್ವಚನ, ವಿತರಣೆ, ಹೂವು ಅರ್ಪಿಸಿ ಮೇರಿ ಮಾತೆಗೆ ನಮನ, ಸಿಹಿ, ತಿಂಡಿ ಹಾಗೂ ಕಬ್ಬು ವಿತರಣೆ ಕಾರ್ಯಕ್ರಮಗಳು ಜರಗಿದವು. ಧರ್ಮಗುರುಗಳು ಹಬ್ಬದ ಸಂದೇಶ ನೀಡಿದರು. ಬಲಿಪೂಜೆಯ ಅನಂತರ ಪೂಜಿಸಿದ ತೆನೆಯನ್ನು ಭಕ್ತರಿಗೆ ವಿತರಿಸಲಾಯಿತು. ಕೊರೊನಾ ಹಿನ್ನಲೆಯಲ್ಲಿ ಸಾಮಾಜಿಕ ಅಂತರಕ್ಕೆ ಪ್ರಾಮುಖ್ಯತೆಯನ್ನು ನೀಡಲಾಗಿತ್ತು. ಸ್ಯಾನಿಟೈಸರ್ ಬಳಕೆ, ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯಗೊಳಿಸಲಾಗಿತ್ತು. ಕೊಡಿಯಾಲಬೈಲ್‌ನ ಬಿಷಪ್ ಹೌಸ್ ಚಾಪೆಲ್‌ನಲ್ಲಿ ಧರ್ಮಪ್ರಾಂತದ ಶ್ರೇಷ್ಠ ಗುರುಗಳಾದ ಮೊ| ಮ್ಯಾಕ್ಸಿಂ ನೊರೊನ್ಹಾ ಅವರು ಬಲಿಪೂಜೆ ನೆರವೇರಿಸಿದರು. ನಗರದ ಜಪ್ಪುವಿನಲ್ಲಿರುವ ಸಂತ ಅಂಥೋನಿ ಆಶ್ರಮದಲ್ಲಿ ಮೊಂತಿಹಬ್ಬ ಆಚರಿಸಲಾಯಿತು. ಆಶ್ರಮದ ನಿರ್ದೇಶಕ ವಂ| ಓನಿಲ್ ಡಿಸೋಜಾ, ಸಹಾಯಕ ನಿರ್ದೇಶಕರಾದ ವಂ| ಅಲ್ಬನ್ ರಾಡ್ರಿಗಸ್, ವಂ| ರೋಶನ್ ಡಿಸೋಜಾ ಉಪಸ್ಥಿತರಿದ್ದರು.
ನಗರದ ಪಾಲ್ದನೆ ಸಂತ ತೆರೇಸಾ ಚರ್ಚ್ ನಲ್ಲಿ ಮೊಂತಿಫೆಸ್ತ್ ಆಚರಣೆ ಜರಗಿತು. ಮಂಗಳೂರು ಧರ್ಮಪ್ರಾಂತ್ಯದ ಜ್ಯೂಡಿಷಿಯಲ್ ವಿಕಾರ್ ವಾಲ್ಟರ್ ಡಿ’ಮೆಲ್ಲೊ ಅವರು ದಿನದ ಬಲಿಪೂಜೆ ನೇತೃತ್ವ ವಹಿಸಿದರು. ಬಲಿಪೂಜೆಯ ಅನಂತರ ಶಿಕ್ಷಕರ ದಿನವನ್ನು ಆಚರಿಸಲಾಯಿತು. ಆ ಚರ್ಚಿನ ವ್ಯಾಪ್ತಿಯಲ್ಲಿ ಬರುವ ಶಿಕ್ಷಕ, ಶಿಕ್ಷಕಿಯನ್ನು ಹೂಗುಚ್ಚವನ್ನು ನೀಡಿ ಸಮ್ಮಾನಿಸಲಾಯಿತು. ವಂ| ಅಲ್ಬನ್ ಡಿ’ಸೋಜಾ, ಚರ್ಚ್‌ನ ಪಾಲನ ಸಮಿತಿಯ ಉಪಾಧ್ಯಕ್ಷ ವಿಲಿಯಂ ಲೋಬೋ ಹಾಗೂ ಕಾರ್ಯದರ್ಶಿ ಆಸ್ಟಿನ್ ಮೊಂತೆರೋ ಉಪಸ್ಥಿತರಿದ್ದರು. ಚರ್ಚ್‌ನ ವ್ಯಾಪ್ತಿಯ ಪ್ರಸ್ತುತ ವರ್ಷದಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು. ಬಜ್ಜೋಡಿಯ ಚರ್ಚ್
ಬಜ್ಜೋಡಿ ಇನೆಟ್ ಮೇರಿ ಚರ್ಚ್‌ನಲ್ಲಿ ಬೆಳಗ್ಗೆ ಬಲಿಪೂಜೆಯನ್ನು ವಂ|ಆರ್ಚಿಬಾಲ್ಡ್ ಗೊನ್ಸಾಲ್ವಿಸ್‌ರವರು ಅರ್ಪಿಸಿದರು. ವಂ| ಐವನ್ ಡಿಸೋಜಾ, ವಂ| ಪ್ಯಾಟ್ರಿಕ್ ಲೋಬೋ, ವಂ| ರಾಯನ್ ಪಿಂಟೊ, ವಂ| ಬಾರ್ನಬಾಸ್ ಮೊನಿಸ್ ಅವರು ಉಪಸ್ಥಿತರಿದ್ದರು. ಬಲಿಪೂಜೆಯ ಮುಂಚೆ ಪ್ರಧಾನ ಯಾಜಕರಾದ ವಂ| ಆರ್ಚಿಬಾಲ್ಡ್ ಗೊನ್ಸಾಲ್ವಿಸ್ ಅವರು ಹೊಸ ತೆನೆಯನ್ನು ಆಶೀರ್ವದಿಸಿದರು . ಬಲಿಪೂಜೆಯ ನಂತರ ಭತ್ತದ ಕದಿರನ್ನು ವಿತರಿಸಲಾಯಿತು.
Related Articles
ವಾಮಂಜೂರು ಶ್ರಮಿಕ ಸಂತ ಜೊಸೆಫ್ರ ಚರ್ಚ್‌ನಲ್ಲಿ ಮೊಂತಿ ಫೆಸ್ತ್ನ್ನು ಬೆಳಗ್ಗೆ 7.30ಕ್ಕೆ ಬಲಿಪೂಜೆಯೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು. ವಂ| ಜೇಮ್ಸ್ ಡಿ’ಸೋಜಾ, ವಂ| ರೋಹನ್ ಲೋಬೋ, ವಂ| ಜೋನ್ ಫೆರ್ನಾಂಡೀಸ್ ಬಲಿಪೂಜೆ ನೆರವೇರಿಸಿದರು. ಭಕ್ತರು ಮೇರಿಮಾತೆಗೆ ಹೂವುಗಳನ್ನು ಅರ್ಪಿಸಿ ನಮಿಸಿದರು. ಬಲಿಪೂಜೆಯ ಅನಂತರ ಭಕ್ತರಿಗೆ ಹೊಸ ಭತ್ತದ ತೆನೆಯನ್ನು ವಿತರಿಸಲಾಯಿತು.
Advertisement
ರೋಜಾರಿಯೋ ಕೆಥೆಡ್ರಲ್ಮಂಗಳೂರಿನ ರೊಜಾ ರಿಯೋ ಕೆಥೆಡ್ರಲ್‌ನಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ವಂ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಪ್ರಧಾನ ಬಲಿಪೂಜೆ ನೆರವೇರಿಸಿದರು. ರೊಸಾರಿಯೊ ಕೆಥಡ್ರಲ್‌ನ ಪ್ರಧಾನ ಧರ್ಮಗುರುಗಳಾದ ವಂ| ಅಲ್ಫೆ†ಡ್ ಪಿಂಟೋ, ಸಹಾಯಕ ಧರ್ಮಗುರುಗಳಾದ ವಂ| ವಿನೋದ್ ಲೋಬೋ, ವಂ| ವಿಕ್ಟರ್ ಡಿ’ಸೋಜಾ, ಗ್ಲ್ಯಾಡ್‌ಸಮ್ ಮೈನರ್ ಸೆಮಿನರಿಯ ರೆಕ್ಟರ್ ವಂ| ಅನಿಲ್ ಐವನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.