Advertisement

ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲು ಮಾಳೆ ಸಲಹೆ

08:44 AM Jan 19, 2019 | Team Udayavani |

ಕಮಲನಗರ: ತಾಲೂಕಿನ ಪ್ರತಿಯೊಂದು ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮಸ್ಥರು, ಚುನಾಯಿತ ಪ್ರತಿನಿಧಿಗಳು ಮತ್ತು ಗ್ರಾಮದ ಮುಖಂಡರು ಗ್ರಾಮದಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಸಂಪನ್ಮೂಲ ಅಧಿಕಾರಿ ರಾಜೇಂದ್ರ ಮಾಳೆ ಕಿವಿ ಮಾತು ಹೇಳಿದರು.

Advertisement

ತಾಲೂಕಿನ ಸೋನಾಳ ಗ್ರಾಮದಲ್ಲಿ ಜಿಲ್ಲಾ ಮತ್ತು ಗ್ರಾಪಂ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಮತ್ತು ಸ್ವಚ್ಛತಾ ನೈರ್ಮಲ್ಯ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಡೆಂಘೀ, ಮಲೇರಿಯಾ, ಹಂದಿ ಜ್ವರ ಸೇರಿದಂತೆ ವಿವಿಧ ರೋಗ ಹರಡುತ್ತಿವೆ. ಇದರಿಂದ ಗ್ರಾಮದ ಜನರು ತಮ್ಮ ಮನೆ ಸುತ್ತ-ಮುತ್ತಲಿನ ಪರಿಸರ ಮತ್ತು ಚರಂಡಿ ಸ್ವಚ್ಛತೆ ಕಾಪಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಗ್ರಾಪಂ ವತಿಯಿಂದ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ತಾವು ಶುದ್ಧ ನೀರು ಉಪಯೋಗಿಸಿ ರೋಗ ಮುಕ್ತವಾಗಲು ಸಾಧ್ಯವಾಗುತ್ತದೆ. ಹಲವು ರೋಗಗಳು ಕಲುಷಿತ ನೀರು ಸೇವನೆಯಿಂದ ಕಾಯಿಲೆ ಹರಡುತ್ತಿವೆ. ಇದರಿಂದ ಗ್ರಾಮಸ್ಥರು ಸ್ವಚ್ಛತೆಗೆ ಎಲ್ಲರೂ ಕೈಜೊಡಿಸಬೇಕು ಎಂದು ಹೇಳಿದರು. ಗ್ರಾಪಂ ಉಪಾಧ್ಯಕ್ಷ ಮಹಾದೇವ ಪಾಟೀಲ ಮಾತನಾಡಿ, ಸೋನಾಳ ಗ್ರಾಪಂ ವ್ಯಾಪ್ತಿಯ ಸೋನಾಳ ವಾಡಿ, ಕಾಳಗಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಚರಂಡಿ ಸ್ವಚ್ಛ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಗ್ರಾಪಂ ವತಿಯಿಂದ ಗ್ರಾಮದಲ್ಲಿ ಚುನಾಯಿತ ಪ್ರತಿನಿಧಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳು ಸೇರಿ ಸಂಪೂರ್ಣ ಸ್ವಚ್ಛತಾ ಆಂದೋಲನ ಮಾಡಲಾಗುವುದು ಎಂದು ಭರವಸೆ ನೀಡಿದರು. ಹಂಗಾಮಿ ಮುಖ್ಯಶಿಕ್ಷಕ ಚಂದ್ರಮಣಿ ಗೋಖಲೆ ಅಧ್ಯಕ್ಷತೆ ವಹಿಸಿದ್ದರು. ಜಗನ್ನಾಥ ಮುದ್ದಾ, ರಾಜಕುಮಾರ ಕೌಡಗೆ, ಆನಂದ ಗೌಡ, ಬಸವರಾಜ ಪಾಟೀಲ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next