Advertisement

ಕೇರಳಕ್ಕೆ ಐದು ದಿನ ತಡವಾಗಿ ಜೂನ್‌ 6ರಂದು ಮುಂಗಾರು ಪ್ರವೇಶ: IMD

09:37 AM May 16, 2019 | Sathish malya |

ಹೊಸದಿಲ್ಲಿ : ಸಾಮಾನ್ಯವಾಗಿ ಜೂನ್‌ 1ರಂದು ಕೇರಳ ಪ್ರವೇಶಿಸುವ ಮುಂಗಾರು ಮಳೆ ಈ ಬಾರಿ ಐದು ದಿನ ತಡವಾಗಿ ಜೂನ್‌ 6ರಂದು ಆಗಮಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಇಂದು ಬುಧವಾರ ಹೇಳಿದೆ.

Advertisement

ನಿನ್ನೆ ಮಂಗಳವಾರವಷ್ಟೇ ಖಾಸಗಿ ಹವಾಮಾನ ಅಂದಾಜು ಸಂಸ್ಥೆ ಸ್ಕೈಮೆಟ್‌ “2019ರ ಮುಂಗಾರು ಮಳೆ ಜೂನ್‌ 4ರಂದು ಕೇರಳ ಪ್ರವೇಶಿಸಲಿದೆ” ಎಂದು ಹೇಳಿತ್ತು.

ಅಂಡಮಾನ್‌ ಸಮುದ್ರದ ದಕ್ಷಿಣ ಭಾಗ, ನಿಕೋಬಾರ್‌ ದ್ವೀಪಗಳು ಮತ್ತು ಆದಕ್ಕೆ ತಾಗಿಕೊಂಡಿರುವ ಆಗ್ನೇಯ ಬಂಗಾಲ ಕೊಲ್ಲಿಯ ಮೇಲೆ ಮುಂಗಾರು ಮಾರುತಗಳು ಸಾಗಿ ಬರುವುದಕ್ಕೆ ಮೇ 18 – 19ರ ಸುಮಾರಿಗೆ ಅನುಕೂಲಕರ ಸನ್ನಿವೇಶ ನಿರ್ಮಾಣವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next