ಧನಂಜಯ್ ನಾಯಕರಾಗಿರುವ “ಮಾನ್ಸೂನ್ ರಾಗ’ ಚಿತ್ರ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಚಿತ್ರ ಆ.19ಕ್ಕೆ ತೆರೆಕಾಣಬೇಕಿತ್ತು. ಆದರೆ, ಅದರಲ್ಲೊಂದು ಸಣ್ಣ ಬದಲಾವಣೆಯಾಗಿದೆ. ಚಿತ್ರ ಆ.19ಕ್ಕೆ ಬಿಡುಗಡೆಯಾಗುತ್ತಿಲ್ಲ. ಕಾರಣಾಂತರಗಳಿಂದ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ. ಈ ಮೂಲಕ ತೆರೆಮೇಲೆ ಡಾಲಿ-ರಚಿತಾರನ್ನು ಕಣ್ತುಂಬಿಕೊಳ್ಳಬಹುದೆಂಬ ನಿರೀಕ್ಷೆಯಲ್ಲಿದ್ದ ಅವರ ಅಭಿಮಾನಿಗಳಿಗೆ ನಿರಾಸೆಯಾಗಿದೆ.
ಎಲ್ಲಾ ಓಕೆ, ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಲು ಕಾರಣವೇನೆಂದು ನೀವು ಕೇಳಬಹುದು. ಇದಕ್ಕೆ ಉತ್ತರಿಸುವ ನಿರ್ಮಾಪಕ ವಿಖ್ಯಾತ್, “ಚಿತ್ರದ ತಾಂತ್ರಿಕ ಕೆಲಸ ಸ್ವಲ್ಪ ಬಾಕಿ ಇದೆ. ಆ ಕಾರಣ ದಿಂದಾಗಿ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ’ ಎನ್ನುತ್ತಾರೆ.
ಈಗಾಗಲೇ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿ ಹಿಟ್ ಆಗಿದೆ. “ರಾಗ ಸುಧಾ’ ಹಾಗೂ ಮುದ್ದಾದ ಮೂತಿ ಎಂಬ ಹಾಡುಗಳನ್ನು ಬಿಡುಗಡೆ ಮಾಡಿದ್ದು, ಅದು ಹಿಟ್‌ಲಿಸ್ಟ್ ಸೇರಿದೆ. ಇತ್ತೀಚೆಗೆ “ಮುದ್ದಾದ ಮೂತಿ’ ಎಂಬ ವಿಡಿಯೋ ಸಾಂಗ್ ಇತ್ತೀಚೆಗೆ ರಿಲೀಸ್ ಆಗಿದ್ದು, ಈ ಹಾಡನ್ನು ಅಚ್ಯುತ್ ಕುಮಾರ್ ಮೇಲೆ ಮಾಡಲಾಗಿದ್ದು, ಸಖತ್ ಕಲರ್‌ಫುಲ್ ಆಗಿ ಚಿತ್ರೀಕರಿಸಲಾಗಿದೆ. ಪ್ರಮೋದ್ ಮರವಂತೆ ಬರೆದಿರುವ ಈ ಹಾಡಿಗೆ ವಾಸುಕಿ ವೈಭವ್ ಅವರ ಧ್ವನಿ ಇದೆ.
ಇದನ್ನೂ ಓದಿ:“ಕಿಂಗ್ ಆಫ್ ಬುಲ್ ಮಾರ್ಕೆಟ್” ಶೇರು ಮಾರುಕಟ್ಟೆ ದಿಗ್ಗಜ ರಾಕೇಶ್ ಜುಂಜುನ್‌ವಾಲಾ ಇನ್ನಿಲ್ಲ
ಈಗಾಗಲೇ ಬಿಡುಗಡೆಯಾಗಿರುವ “ರಾಗ ಸುಧಾ’ ಹಾಡಿನಲಿ ಯಶಾ ಶಿವಕುಮಾರ್ ಈ ಹಾಡಿಗೆ ಹೆಜ್ಜೆ ಹಾಕಿದ್ದು, ದಕ್ಷಿಣ್ ಕುಮಾರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಇದು ಯಶಾ ಇಂಟ್ರೊಡಕ್ಷನ್‌ಗಾಗಿಯೇ ಮಾಡಿದ ಹಾಡು ಎಂಬುದು ವಿಶೇಷವಾದರೆ, ಇದನ್ನು ಸಾಹಿತಿ ಜಯಂತ್ ಕಾಯ್ಕಿಣಿ ಓದಿದ ಕುಮಟಾ ಬಳಿಯ ಶಾಲೆಯೊಂದರಲ್ಲಿ ಚಿತ್ರೀಕರಣ ನಡೆಸಿರುವುದು ಮತ್ತೂಂದು ವಿಶೇಷ. ಮಳೆಯ ಭೋರ್ಗರೆತದ ನಡುವೆ ಕುಣಿವ ಯಶಾ, ರೆಟ್ರೋ ಸ್ಟೆçಲ್‌ನಲ್ಲಿ ಕಂಗೊಳಿಸಿದ್ದಾರೆ.
ಪುಷ್ಪಕ ವಿಮಾನ, ಇನ್ಸ್‌ಪೆಕ್ಟರ್ ವಿಕ್ರಂ, ರಂಗನಾಯಕ ಸಿನಿಮಾಗಳನ್ನು ನಿರ್ಮಿಸಿರುವ ಎ.ಆರ್.ವಿಖ್ಯಾತ್ “ಮಾನ್ಸೂನ್ ರಾಗ’ ಬಂಡವಾಳ ಹೂಡಿದ್ದಾರೆ. ವಿಖ್ಯಾತ್ ಸ್ಟುಡಿಯೋಸ್ ಯೂಟ್ಯೂಬ್ ಚಾನಲ್‌ನಲ್ಲಿ ಹಾಡು ಬಿಡುಗಡೆಯಾಗಿ ಲಕ್ಷಾಂತರ ಹಿಟ್ಸ್ ದಾಖಲಾಗಿದೆ.
ಚಿತ್ರಕ್ಕೆ ಎಸ್. ರವೀಂದ್ರನಾಥ್ ನಿರ್ದೇಶನವಿದೆ. ಚಿತ್ರಕ್ಕೆ ಎಸ್. ಕೆ ರಾವ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಜೆ. ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದು, ಗುರು ಕಶ್ಯಪ್ ಸಿನಿಮಾದ ದೃಶ್ಯಗಳಿಗೆ ಸಂಭಾಷಣೆ ಬರೆದಿದ್ದಾರೆ