Advertisement
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಹಂಗಾಮಿನಲ್ಲಿ 9,435 ಹೆಕ್ಟೇರ್ ಭತ್ತದ ಬೆಳೆ ಗುರಿ ಇರಿಸಿಕೊಳ್ಳಲಾಗಿದ್ದು ಈಗಾಗಲೇ 845 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬಿತ್ತನೆ ಹಾಗೂ ನಾಟಿ ಕಾರ್ಯ ಆಗಿದೆ. ಉಡುಪಿ ಜಿಲ್ಲೆಯಲ್ಲಿ 38,000 ಹೆ.ಗುರಿಯಲ್ಲಿ 557 ಹೆ.ಪ್ರದೇಶದಲ್ಲಿ ನಾಟಿಯಾಗಿದ್ದು ಉಳಿದಂತೆ ನೇಜಿ ಸಿದ್ಧಗೊಳ್ಳುತ್ತಿದೆ.
Related Articles
Advertisement
ತಾಲೂಕುವಾರು ಗುರಿದ.ಕ. ಜಿಲ್ಲೆಯಲ್ಲಿ ಈ ಬಾರಿ ಮಂಗಳೂರು ತಾಲೂಕಿನಲ್ಲಿ 1,500, ಮೂಡುಬಿದಿರೆಯಲ್ಲಿ 1,650, ಮೂಲ್ಕಿಯಲ್ಲಿ 1,700, ಉಳ್ಳಾಲದಲ್ಲಿ 850, ಬಂಟ್ವಾಳದಲ್ಲಿ 1,550, ಬೆಳ್ತಂಗಡಿಯಲ್ಲಿ 1,600, ಪುತ್ತೂರಿನಲ್ಲಿ 191, ಕಡಬದಲ್ಲಿ 159, ಸುಳ್ಯದಲ್ಲಿ 235 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ಇರಿಸಿಕೊಳ್ಳಲಾಗಿದೆ. ಉಡುಪಿ ಜಿಲ್ಲೆಯಲ್ಲಿ (ಹಿಂದಿನ ತಾಲೂಕು) ಉಡುಪಿ ತಾಲೂಕಿನಲ್ಲಿ 16,500, ಕುಂದಾಪುರ 14,500 ಹಾಗೂ ಕಾರ್ಕಳದಲ್ಲಿ 7,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆ ಗುರಿ ನಿಗದಿಪಡಿಸಲಾಗಿದೆ. ಪ್ರಗತಿಯಲ್ಲಿದೆ
ಮುಂಗಾರು ಹಂಗಾಮಿನ ಭತ್ತ ಕೃಷಿ ಚುಟುವಟಿಕೆಗಳು ಚುರುಕುಗೊಂಡಿದ್ದು ಸಸಿ ಸಿದ್ಧಗೊಳ್ಳುತ್ತಿದೆ. ಸಸಿ ಸಿದ್ಧಗೊಂಡಿರುವ ಕಡೆಗಳಲ್ಲಿ ನಾಟಿ ಕಾರ್ಯ ನಡೆಯುತ್ತಿದೆ. ರೈತರ ಬೇಡಿಕೆಯಂತೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆಯಾಗುತ್ತಿದೆೆ.
-ಡಾ| ಸೀತಾ, ಕೃಷಿ ಜಂಟಿ ನಿರ್ದೆಶಕರು ದ.ಕ.ಜಿಲ್ಲೆ
ಡಾ| ಎಚ್. ಕೆಂಪೇಗೌಡ, ಜಂಟಿ ಕೃಷಿ ನಿರ್ದೇಶಕರು ಉಡುಪಿ ಜಿಲ್ಲೆ