Advertisement

ಮಳೆಗಾಲ: ಪಾದಗಳ ಕೇರ್‌ ಹೀಗಿರಲಿ…

10:09 PM Aug 12, 2019 | mahesh |

ಮಳೆಗಾಲದ ಮಳೆಯಲ್ಲಿ ನಮ್ಮ ಪಾದಗಳು ನೆನೆಯುತ್ತಿರುತ್ತವೆ. ಒದ್ದೆಯಾದ ಕಾಲುಗಳನ್ನು ಶುಚಿಯಾದ ನೀರಿನಲ್ಲಿ ಸ್ವತ್ಛಗೊಳಿಸಿ ಬೆಚ್ಚಗಿನ ಬಟ್ಟೆಯಲ್ಲಿ ಒರೆಸಿಬಿಟ್ಟರೇ ನಮ್ಮ ಪಾದಗಳ ಕಾಳಜಿ ಮುಗಿಯುತ್ತದೆ. ಆದರೆ ಮಳೆಗಾಲದಲ್ಲಿ ಪಾದಗಳಿಗೆ ಫ‌ಂಗಲ್‌ ಸೋಂಕುಗಳು ಆಗುವುದು ಹೆಚ್ಚು. ಮಳೆಗಾಲದಲ್ಲಿ ಪಾದಗಳಿಗೆ ಸುಲಭವಾದ ಪ್ಯಾಕ್‌ಗಳನ್ನು ತಯಾರಿಸಿಕೊಂಡು ಉತ್ತಮ ಮಸಾಜ್‌ ಮಾಡಿಕೊಂಡರೆ ಪಾದಗಳು ಶುಚಿಯಾಗಿರುತ್ತದೆ. ಪ್ರತಿದಿನ ನಿತ್ಯಕಾರ್ಯಗಳಲ್ಲಿ ಪಾದಗಳ ಆರೈಕೆಗೂ ಸಮಯ ಹೊಂದಿಸಿಕೊಳ್ಳಬೇಕು.

Advertisement

ಮನೆಯಲ್ಲೇ ಫೀಟ್‌ ಪ್ಯಾಕ್‌
ಮೆಹೆಂದಿ ಪೇಸ್ಟ್‌
ಮೆಹೆಂದಿ (ಹೆನ್ನಾ) ಹುಡಿ ಹಾಗೂ ರೋಸ್‌ ವಾಟರ್‌ ಸೇರಿಸಿಕೊಂಡು ಪೇಸ್ಟ್‌ ತಯಾರಿಸಿಕೊಳ್ಳಿ. ಇದನ್ನು ಕಾಲೆºರಳುಗಳಿಗೆ ಲೇಪಿಸಿ ಒಣಗುವವರಗೆ ಹಾಗೇ ಬಿಡಿ. ಮೆಹೆಂದಿಯೂ ನೈಸರ್ಗಿಕ ಮದ್ದಾಗಿದ್ದು, ನಂಜುನಿರೋಧಕ ಗುಣಗಳನ್ನು ಹೊಂದಿದೆ. ಇದು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ ಹಾಗೂ ಸಣ್ಣ ಗಾಯಗಳು ಮತ್ತು ಬಿರುಕುಗಳನ್ನು ಗುಣಪಡಿಸುತ್ತದೆ.

ಪುದೀನ ಸ್ಕರ್ಬ್
ಮಳೆಗಾಲದಲ್ಲಿ ಪುದೀನದ ಸ್ಕರ್ಬ್ ಉತ್ತಮ ಆಯ್ಕೆ. ಪಾದಗಳು ವಾಸನೆ ತಡೆ ಯಲು ಪುದೀನ ಹಾಕಿದ ನೀರನ್ನು ಬಳಸುವುದು ಒಳ್ಳೆಯದು. ನೀರಿಗೆ ಪುದೀನ ಎಲೆಗಳನ್ನು ಸೇರಿಸಿ ಕುದಿಸಿ. ನೀರು ತಣ್ಣಗಾದ ಅನಂತರ ಅದನ್ನು ಪಾದಗಳಿಗೆ ಸ್ಕರ್ಬ್ ಮಾಡಬಹುದು. ಪುದೀನಾ ಎಣ್ಣೆಯನ್ನು ಬಳಸಿಯೂ ಸ್ಕರ್ಬ್ ತಯಾರಿಸಿಕೊಳ್ಳಬಹುದು.

ಅರಿಶಿನ, ಬೆಸಿಲ್‌ ಪೇಸ್ಟ್‌
ಅರಿಶಿನ ಹುಡಿ, ಬೆಸಿಲ್‌ ನ್ನು ರೋಸ್‌ ವಾಟರ್‌ನಲ್ಲಿ ಮಿಶ್ರಣ ಮಾಡಿ ಪೇಸ್ಟ್‌ ತಯಾರಿಸಿಕೊಂಡು ಪಾದಗಳಿಗೆ ಹಚ್ಚಿ 15 ನಿಮಿಷಗಳ ಕಾಲ ಬಿಟ್ಟು ಒಣಗಿದ ಬಳಿಕ ತೊಳೆಯಿರಿ. ಕಾಲೆºರಳುಗಳ ಸುತ್ತ ಅರಿಶಿನ ಪೇಸ್ಟ್‌ ಹಚ್ಚುವುದರಿಂದ ಶಿಲೀಂಧ್ರಗಳ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಬೆಸಿಲ್‌ನಿಂದ ತಯಾರಿಸಿದ ಪ್ಯಾಕ್‌ಗಳು ಕೂಡ ಕಾಲುಗಳಿಗೆ ಉತ್ತಮ ಆಯ್ಕೆ.

ಲೋಷನ್‌
ನಿಂಬೆ ನೈಸರ್ಗಿಕ ಸಂಕೋಚಕ ಮತ್ತು ಸೋಂಕು ನಿವಾರಕ. ಮಳೆಯಿಂದಾಗಿ ಪಾದಗಳಲ್ಲಿ ತುರಿಕೆಯಾಗಿದ್ದರೆ, ನಿಂಬೆ ರಸ, ವಿನೆಗರ್‌ ಮತ್ತು ಗ್ಲಿಸರಿನ್‌ ಮಿಶ್ರಣ ಮಾಡಿ ಪಾದಗಳಿಗೆ ಹಚ್ಚಿ. ಪರ್ಯಾಯವಾಗಿ ಈರುಳ್ಳಿ ರಸ ತೆಗೆದು ಕಾಲ್ಬೆರುಗಳಿಗೆ ಹಚ್ಚಿ ಮಸಾಜ್‌ ಮಾಡಬಹುದು.

Advertisement

-  ಆರ್‌.ಕೆ

Advertisement

Udayavani is now on Telegram. Click here to join our channel and stay updated with the latest news.

Next