Advertisement
ಐಎಂಡಿ ಮಾಹಿತಿಯಂತೆ ಮೇ 31ರಿಂದ ಜೂನ್ 3ರ ವರೆಗೆ “ಎಲ್ಲೋ ಅಲರ್ಟ್’ ಘೊಷಿಸಲಾಗಿದೆ. ಈ ವೇಳೆ ಗುಡುಗು ಸಹಿತ ಉತ್ತಮ ಮಳೆಯಾಗಲಿದೆ.ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗುರುವಾರ ಬಿಟ್ಟು ಬಿಟ್ಟು ಮಳೆಯಾಗಿದೆ. ಸುಬ್ರಹ್ಮಣ್ಯ, ಬಂಟ್ವಾಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿರುಸಿನ ಮಳೆಯಾಗಿತ್ತು. ಉಳಿದಂತೆ ಜಿಲ್ಲೆಯಾದ್ಯಂತ ಸೆಕೆ ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು.
Related Articles
ಉಳ್ಳಾಲ: ಉಚ್ಚಿಲ ಬಟ್ಟಪ್ಪಾಡಿಯಲ್ಲಿ ಸಮುದ್ರದ ಅಲೆಗಳು ಮನೆಗಪ್ಪಳಿಸುತ್ತಿದ್ದು 2 ಮನೆಗಳು ಅಪಾಯದಲ್ಲಿವೆ. ಸೋಮೇಶ್ವರ ದೇವಸ್ಥಾನದಿಂದ ಬೀಚ್‌ಗೆ ಇಳಿದು ಹೋಗುವ ಮೆಟ್ಟಿಲಿಗೆ ಕಡಲ್ಕೊರೆತದಿಂದ ಅಲ್ಪ ಪ್ರಮಾಣದ ಹಾನಿಯಾಗಿದೆ.
Advertisement
ಮರವಂತೆಯಲ್ಲಿ ಕಡಲ್ಕೊರೆತಕುಂದಾಪುರ: ಮುಂಗಾರು ಪೂರ್ವ ಮಳೆಯಿಂದಾಗಿ ಕಡಲು ಪ್ರಕ್ಷುಬ್ಧಗೊಂಡಿದ್ದು, ಮರವಂತೆಯಲ್ಲಿ ಗುರುವಾರ ಕಡಲಬ್ಬರ ಬಿರುಸಾಗಿತ್ತು. ಗಾಳಿಯ ತೀವ್ರತೆಯೂ ಜೋರಾಗಿತ್ತು. ಇಲ್ಲಿನ ಮೀನುಗಾರಿಕೆ ಹೊರಬಂದರಿನ ತಡೆಗೋಡೆಗೆ ಭಾರೀ ಗಾತ್ರದ ಅಲೆಗಳು ಬಂದು ಅಪ್ಪಳಿಸುತ್ತಿರುವುದು ಕಂಡುಬಂತು.