Advertisement

ಮುಂದಿನ 48 ಗಂಟೆಗಳಲ್ಲಿ ಮುಂಬೈಗೆ ಮುಂಗಾರು ಪ್ರವೇಶ

06:55 PM Jun 24, 2023 | Team Udayavani |

ಮುಂಬೈ: ಮಹಾರಾಷ್ಟ್ರಕ್ಕೆ ಮುಂಗಾರು ಮಳೆಯ ಆಗಮನವಾಗಿದ್ದು, ಈಗಾಗಲೇ ಅಲಿಬಾಗ್‌ವರೆಗೆ ಮುಂಗಾರು ಚುರುಕಾಗಿದೆ, ಮುಂದಿನ 48 ಗಂಟೆಗಳಲ್ಲಿ ಮುಂಬೈಗೆ ಮುಂಗಾರು ಪ್ರವೇಶ ಪಡೆದುಕೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶನಿವಾರ ತಿಳಿಸಿದೆ.

Advertisement

ಸಾಮಾನ್ಯವಾಗಿ ಜೂ.11ರ ವೇಳೆಗೆಲ್ಲ ಮುಂಗಾರು ಮುಂಬೈ ಪ್ರವೇಶಿಸಬೇಕಿತ್ತು. ಆದರೆ ಈ ಬಾರಿ ತಡವಾಗಿದೆ. ಪ್ರಸಕ್ತ ಅಲಿಬಾಗ್‌, ಸೋಲಾಪುರ, ಉದ್ಗಿರ್‌, ನಾಗ್ಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆಯಾಗಿದೆ. ನೈಋತ್ಯ ಭಾಗಗಳಿಗೆ ಮುಂಗಾರು ಚಲಿಸಲು ಪರಿಸ್ಥಿತಿಯೂ ಅನುಕೂಲಕರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ, ಮುಂದಿನ 2 ದಿನಗಳಲ್ಲಿ ರಾಷ್ಟ್ರರಾಜಧಾನಿ ದೆಹಲಿಗೆ ಮುಂಗಾರು ಪ್ರವೇಶವಾಗಲಿದೆ. ಸಾಮಾನ್ಯ ಜೂ.27ರ ಅವಧಿಗೆ ರಾಜಧಾನಿ ಮುಂಗಾರು ಪ್ರವೇಶವಾಗಬೇಕು, ಪರಿಸ್ಥಿತಿಯೂ ಅದಕ್ಕೆ ಪೂರಕವಾಗಿರುವುದರಿಂದ ಈ ಬಾರಿಯೂ ಸರಿಯಾದ ಸಮಯಕ್ಕೆ ಮುಂಗಾರು ಆಗಮನವಾಗುವುದೆಂದು ನಿರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next