Advertisement

ಈ ಗ್ರಾಮದಲ್ಲಿ ಮಂಗಗಳ ಹೆಸರಲ್ಲಿದೆ 32 ಎಕರೆ ಜಮೀನು!

06:39 PM Oct 16, 2022 | Team Udayavani |

ಮುಂಬೈ: ಜಮೀನಿಗಾಗಿ ಅಣ್ಣ ತಮ್ಮಂದಿರೇ ಜಗಳವಾಡಿಕೊಳ್ಳುವ ಈ ಕಾಲದಲ್ಲಿ ಮಹಾರಾಷ್ಟ್ರದ ಒಂದು ಹಳ್ಳಿಯಲ್ಲಿ ಮಂಗಗಳ ಹೆಸರಿಗೇ 32 ಎಕರೆ ಜಮೀನು ಬಿಟ್ಟುಕೊಡಲಾಗಿದೆ!

Advertisement

ಒಸ್ಮಾನಾಬಾದ್‌ ಜಿಲ್ಲೆಯ ಉಪ್ಲಾ ಗ್ರಾಮದಲ್ಲಿ ಈ ರೀತಿ ಮಂಗಗಳ ಹೆಸರಿಗೆ ಜಮೀನಿದೆ. ಈ ಗ್ರಾಮದಲ್ಲಿ ಮಂಗಗಳಿಗೆ ವಿಶೇಷವಾದ ಮರ್ಯಾದೆ ಇದೆಯಂತೆ. ಪೂರ್ವಜರ ಕಾಲದಿಂದಲೂ ಮಂಗಗಳು ಮನೆ ಬಾಗಿಲಿಗೆ ಬಂದರೆ ಅವುಗಳಿಗೆ ಊಟ ಕೊಡುವ ಪದ್ಧತಿಯಿದೆ. ಹಾಗೆಯೇ ಊರಲ್ಲಿ ಯಾರದ್ದೇ ಮದುವೆಯಾದರೂ ಅಲ್ಲಿ ಮೊದಲನೇ ಉಡುಗೊರೆಯನ್ನು ಮಂಗಕ್ಕೇ ಕೊಡಲಾಗುತ್ತದೆಯಂತೆ.

ಈ ಊರಿನಲ್ಲಿರುವ 32 ಎಕರೆ ಜಮೀನು ಊರಿನ ಮಂಗಗಳ ಹೆಸರಿನಲ್ಲಿ ನೋಂದಣಿಯಾಗಿದೆ. ಆದರೆ ಅದನ್ನು ಯಾವ ಕಾಲದಲ್ಲಿ ಯಾರು ನೋಂದಣಿ ಮಾಡಿಸಿದರು ಎನ್ನುವ ಬಗ್ಗೆ ನಮಗೂ ಮಾಹಿತಿಯಿಲ್ಲ ಎನ್ನುತ್ತಾರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರು.

ಊರಿನಲ್ಲಿ ಒಟ್ಟು ಸರಿ ಸುಮಾರು 100 ಮಂಗಗಳು ಇವೆ. ಸದ್ಯ ಮಂಗಗಳ ಹೆಸರಿನಲ್ಲಿರುವ ಜಾಗವನ್ನು ಸರ್ಕಾರ ಪ್ಲಾಂಟೇಷನ್‌ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next