Advertisement
125 ಅಡಿ ಎತ್ತರದ ಕಟ್ಟಡವನ್ನು ಕೇವಲ 10 ನಿಮಿಷಗಳಲ್ಲಿ ಸರಸರನೇ ಹತ್ತಿಳಿದಾಗ ಅಲ್ಲಿದ್ದವರು ನಿಟ್ಟುಸಿರು ಬಿಟ್ಟರು. ಇದನ್ನು ನೋಡಲು 500ಕ್ಕೂ ಅಧಿಕ ಕುತೂಹಲಿಗಳು ನೆರೆದಿದ್ದರು. ಪೊಲೀಸರು ಭದ್ರತೆ ವ್ಯವಸ್ಥೆ ಮಾಡಿ, ವಾಹನಗಳನ್ನು ಏಕಮುಖ ರಸ್ತೆಯಾಗಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕಟ್ಟಡದ ತುತ್ತತುದಿಯಲ್ಲಿ ಕನ್ನಡ ನಾಡಿನ ಬಾವುಟ ಹಾರಿಸುವ ಮೂಲಕ ಕನ್ನಡಾಭಿಮಾನವನ್ನು ಅವರು ಮೆರೆದರು.
Related Articles
Advertisement
ಸಾಹಸಿಗೆ ಗೌರವಾರ್ಪಣೆ
ಉದ್ಯಮಿ ನಿತ್ಯಾನಂದ ಪೈ ಜ್ಯೋತಿರಾಜ್ ಅವರನ್ನು ಅಭಿನಂದಿಸಿದರು. ಉದ್ಯಮಿ ಬೋಳ ಶ್ರೀನಿವಾಸ್ ಕಾಮತ್, ಸತೀಶ್ ಹೆಗ್ಡೆ ಬೈಲೂರು, ಅವಿನಾಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಮಣಿಪಾಲದಲ್ಲಿ ಸಾಹಸಗೈಯಲಿದ್ದೇನೆಸಮೃದ್ಧ ಕಟ್ಟಡ ಬಳಕೆಯಾಗದೆ ಇದ್ದಿರುವದರಿಂದ ಕೈ ಹಿಡಿತ ಸಾಧ್ಯವಾಗದೇ ಏರುವಾಗ ಕೈ ಉರಿ ಬಂತು. ಬ್ಯಾಲೆನ್ಸ್ ಮಾಡಿಕೊಂಡು ಹತ್ತಿದೆ. ಜನಬಳಕೆಯಿಲ್ಲದೆ ಕಟ್ಟಡ ಹಾಳಾಗುತ್ತಿದೆ. ಇಲ್ಲಿಂದ ಮಣಿಪಾಲಕ್ಕೆ ತೆರಳುತ್ತೇನೆ. ಅಲ್ಲಿಯೂ ಬಹುಮಹಡಿ ಕಟ್ಟಡ ಏರಲಿದ್ದೇನೆ. ಅನುಮತಿ ಪಡೆದು ಆ ಕಾರ್ಯನಿರ್ವಹಿಸುವೆ. ಮಹಾಶಿವರಾತ್ರಿ ಮುಗಿಸಿಕೊಂಡು ಅಲ್ಲಿಂದ ತನ್ನ ಪ್ರವಾಸ ಮುಂದುವರಿಸುವುದಾಗಿ ಸಾಹಸಿಗ ಹೇಳಿದರು.