ಸಿಲುಕಿದ್ದಾರೆ.
Advertisement
ಕಾರ್ಕಳ ತಾಲೂಕಿನ ನಿಟ್ಟೆ ಪರಿಸರದ ಜನರಿಗೆ ಮಂಗಳಗಳ ಉಪಟಳ ಬಾರಿ ಹೆಚ್ಚಾಗಿದೆ. ಈ ಭಾಗದ ಹಲವು ಕೃಷಿಕರು ಮಂಗಗಳ ನಿರಂತರ ಉಪಟಳಕ್ಕೆ ಬೇಸತ್ತು ಹೋಗಿದ್ದಾರೆ. ಮಂಗಗಳು ಗುಂಪಾಗಿ ತೆಂಗು ತೋಟ ಸಹಿತ ಕೃಷಿ ತೋಟಗಳಿಗೆ ದಾಳಿಯಿಡುತ್ತಿವೆ. ಉಳಿಸಿಕೊಂಡ ಅಲ್ಪ ಫಸಲನ್ನು ಕೂಡ ಉಳಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿಗೆ ಅವುಗಳ ಉಪಟಳ ತಳ್ಳಿದೆ. ಇದು ರೈತರಿಗೆ ತಲೆನೋವಾಗಿ ಪರಿಣಮಿಸಿದೆ. ಈ ಭಾಗದಲ್ಲಿ ಅಸಂಖ್ಯಾಕ ಪ್ರಮಾಣದಲ್ಲಿ ಕೃಷಿಕರ ಮನೆಗಳಿದ್ದು ಸೀಯಾಳ, ಅಡಿಕೆ ಇತರ ಅಲ್ಪಾವಧಿ ಬೆಳೆಗಳ ಫಸಲನ್ನು ತಿಂದು ಹಾಳುಗೆಡವುತ್ತಿವೆ.
ಕೃಷಿ ತೋಟಗಳಿಗೆ ನುಗ್ಗುವ ವಾನರರು ಫಸಲು ನಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ಮನೆಯ ಅಂಗಳದವರೆಗೂ ಧಾವಿಸಿ ಬಂದು ಹೊಸ್ತಿಲಲ್ಲಿ ಬೆಳೆದ ತರಕಾರಿ, ಫಲ ಪುಷ್ಪಗಳಿಗೂ ಹಾನಿ ಮಾಡುತ್ತವೆ. ಮುಂದುವರಿದೂ ಮನೆಯ ಒಳಗಡೆಗೂ ಮುನ್ನುಗ್ಗಲು ಪ್ರಯತ್ನಿಸುತ್ತವೆ. ಒಂಟಿ ಹೆಂಗಸರು ಓಡಿಸಲು ಹೋದರೆ ಹೋದರೆ ಮಂಗಗಳೇ ತಿರುಗು ಹೆದರಿಸಿ ಕಳುಹಿಸುತ್ತಿವೆ.
Related Articles
ಇತ್ತೀಚಿನ ದಿನಗಳಲ್ಲಂತೂ ಈ ಭಾಗದಲ್ಲಿ ಅತೀವ ಸಮಸ್ಯೆಗಳನ್ನು ಮಂಗಗಳು ತಂದಿಡುತ್ತಿವೆ. ಅವುಗಳಿಗೆ ಯಾರ ಬಗ್ಗೆ ಯಾವ ಭಯವೂ ಇಲ್ಲ. ಇಲಾಖೆಗಳು ಇವುಗಳ ಹಾವಳಿ ತಡೆಗೆ ಏನಾದರೂ ಪ್ರಯತ್ನಗಳನ್ನು ನಡೆಸಬೇಕು. ಗರಿಷ್ಠ ಪ್ರಮಾಣದ ಪರಿಹಾರವನ್ನಾದರೂ ಹಾನಿಗೆ ನೀಡುವಂತಾಗಬೇಕು.
– ದಿನೇಶ್, ಸ್ಥಳೀಯ ಕೃಷಿಕ
Advertisement