Advertisement
ಏನಿದು ಮಂಕಿಪಾಕ್ಸ್?ಇದೊಂದು ವಿರಳಾತಿ ವಿರಳ ರೋಗವಾ ಗಿದ್ದು, ಮಂಕಿಪಾಕ್ಸ್ ಎಂಬ ವೈರಸ್‌ನಿಂದ ಬರುತ್ತದೆ. ಈ ವೈರಸ್ ಕೂಡ ಸ್ಮಾಲ್ ಪಾಕ್ಸ್‌ನ ಕುಟುಂಬದ್ದೇ ಆಗಿದೆ. ಸ್ಮಾಲ್ ಪಾಕ್ಸ್‌ನಲ್ಲಿರುವ ಲಕ್ಷಣಗಳೇ ಮಂಕಿಪಾಕ್ಸ್ ನಲ್ಲೂ ಕಾಣಿಸಿಕೊಳ್ಳುತ್ತವೆ. ಆದರೆ ಇದು ಅಷ್ಟೇನೂ ಅಪಾಯಕಾರಿಯಲ್ಲದ ರೋಗ.
ಜ್ವರ, ತಲೆನೋವು, ಸ್ನಾಯುಗಳ ಸೆಳೆತ, ಬೆನ್ನು ನೋವು, ಬಳಲಿಕೆ, ಚಳಿ, ಮುಖ, ಬಾಯಿ ಸೇರಿದಂತೆ ದೇಹದ ಎಲ್ಲ ಭಾಗ ಗಳಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳುವುದು. ಇದು ಅಪಾಯಕಾರಿಯೇ?
ಇಲ್ಲ. ಈ ರೋಗವನ್ನು ಗುಣಪಡಿಸಬಹುದು. ಇದರಿಂದ ಪ್ರಾಣಕ್ಕೆ ಅಪಾಯವೇನೂ ಆಗುವು ದಿಲ್ಲ. ಲಕ್ಷಣಗಳು ಕಾಣಿಸಿಕೊಂಡು ಎರಡು ವಾರ ಗಳ ಬಳಿಕ ದೇಹದಲ್ಲಿ ಗುಳ್ಳೆ ಕಾಣಿಸಿಕೊಳ್ಳಬ ಹುದು. ಹಾಗೆಯೇ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆದು ಗುಣಮುಖರಾಗಬಹುದು.
Related Articles
ಸದ್ಯ ಈ ಮಂಕಿಪಾಕ್ಸ್‌ಗೆ ಇಂಥದ್ದೇ ಔಷಧ ನೀಡಬೇಕು ಎಂದೇನೂ ಇಲ್ಲ. ಆದರೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವ ಪ್ರಕಾರ, ರೋಗ ಲಕ್ಷಣಗಳನ್ನು ಆಧರಿಸಿ ರೋಗಿಗಳಿಗೆ ಚಿಕಿತ್ಸೆ ನೀಡಬಹುದಾಗಿದೆ. ಚರ್ಮದ ಮೇಲೆ ಉಂಟಾದ ಗುಳ್ಳೆಗಳನ್ನು ಆ್ಯಂಟಿಸೆಫ್ಟಿಕ್ ಮೂಲಕ ತೊಳೆಯಬಹುದು. ಹಾಗೆಯೇ ಮೆದುಬಟ್ಟೆ ಧರಿಸಬೇಕು, ಬಾಯಿಯಲ್ಲಿ ಅಲ್ಸರ್ ಆಗಿದ್ದರೆ, ವಾರ್ಮ್ ಸೆಲೈನ್ ಗಾಗಲ್ ಮಾಡಬೇಕು.
Advertisement
ಎಲ್ಲೆಲ್ಲಿ ಕಾಣಿಸಿಕೊಂಡಿದೆ? ಸದ್ಯ ಭಾರತದಲ್ಲಿ ಕೇವಲ 2 ಪ್ರಕರಣಗಳು ಪತ್ತೆಯಾ ಗಿವೆ. ಒಬ್ಬರು ಯುಎಇಯಿಂದ ಮತ್ತೂಬ್ಬರು ದುಬಾೖಯಿಂದ ಆಗಮಿಸಿದ್ದಾರೆ. ಜು. 12 ಮತ್ತು ಜು. 18ರಂದು ಪತ್ತೆಯಾಗಿದೆ. ಸದ್ಯ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಗತ್ತಿನಾದ್ಯಂತ ಒಟ್ಟು 11 ಸಾವಿರಕ್ಕೂ ಹೆಚ್ಚು ಪ್ರಕರಣ ಪತ್ತೆಯಾಗಿವೆ. ಸ್ಪೇನ್‌ನಲ್ಲೇ 2,500, ಅಮೆರಿಕದಲ್ಲಿ 1,469, ಇಂಗ್ಲೆಂಡ್‌ನಲ್ಲಿ 1,856 ಪ್ರಕರಣ ಪತ್ತೆಯಾಗಿವೆ. ಯೂರೋಪ್‌ನಲ್ಲೇ 7 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಕಂಡು ಬಂದಿವೆ. ಭಾರತದಲ್ಲಿ ಏಕೆ ಕಾಣಿಸಿಕೊಂಡಿಲ್ಲ?
ಭಾರತದಲ್ಲಿ ಚಿಕ್ಕ ಮಕ್ಕಳು ಇರುವಾಗಲೇ ಎಲ್ಲರಿಗೂ ಸ್ಮಾಲ್‌ಪಾಕ್ಸ್ ಅನ್ನು ತಡೆಯುವ ಲಸಿಕೆಯನ್ನು ಹಾಕಲಾಗಿದೆ. ಹೀಗಾಗಿ ಈ ಮಂಕಿಪಾಕ್ಸ್ ವಿರುದ್ಧ ಹೋರಾಡುವ ಶಕ್ತಿ ಭಾರತೀಯರಿಗೆ ಇದೆ. ಇದರಿಂದ ಹೆಚ್ಚು ಪ್ರಕರಣ ಕಾಣಿಸಿಕೊಂಡಿಲ್ಲ ಎಂದು ತಜ್ಞರು ಹೇಳುತ್ತಾರೆ. ಅಲ್ಲದೆ ಕಾಣಿಸಿಕೊಂಡರೂ ಹೆದರಬೇಕಾಗಿಲ್ಲ ಎಂದು ಹೇಳಿದ್ದಾರೆ.