Advertisement

ದಿಲ್ಲಿಯ ಮೆಟ್ರೋ ರೈಲಿನಲ್ಲಿ ಕೋತಿಯ ಜಾಲಿ ರೈಡ್‌

04:04 AM Jun 21, 2021 | Team Udayavani |

ಹೊಸದಿಲ್ಲಿ: ಹೊಸದಿಲ್ಲಿಯ ಮೆಟ್ರೋ ರೈಲಿನಲ್ಲಿ ಶನಿವಾರ ಮಂಗ ಪ್ರವೇಶ ಮಾಡಿದೆ. ಈ ಬಗ್ಗೆ ಎರಡೂವರೆ ನಿಮಿಷಗಳ ವೀಡಿಯೋ ಒಂದನ್ನು ಮುಖೇಶ್‌ ಸಿಂಗ್‌ ಸೆನ್ಗಾರ್‌ ಎಂಬವರು ಟ್ವೀಟ್‌ ಮಾಡಿದ್ದಾರೆ.

Advertisement

ಹೊಸದಿಲ್ಲಿಯ ಯಮುನಾ ಬ್ಯಾಂಕ್‌ನಿಂದ ಐ.ಪಿ. ಸ್ಟೇಶನ್‌ ಮಾರ್ಗದಲ್ಲಿ ರೈಲು ಸಂಚರಿಸುತ್ತಿದ್ದ ವೇಳೆ ವಾನರನ ಪ್ರವೇಶವಾಗಿದೆ.

ಗಲಿಬಿಲಿಗೆ ಒಳಗಾಗಿದ್ದ ಮಂಗ ರೈಲಿನ ಒಳಗಿರುವ ಕಂಬದ ಮೇಲೆ ಏರಿ ಇಳಿದು, ಕೋಚ್‌ನಲ್ಲಿ ಒಂದಷ್ಟು ಮಾತ್ರ ಸಂಚರಿಸಿದೆ.

ಛಂಗನೆ ಸೀಟನ್ನು ಏರಿ ಪ್ರಯಾಣಿಕರೊಬ್ಬರ ಕಾಲಿನಲ್ಲಿ ಕುಳಿತು ವಿಶ್ರಾಂತಿ ಪಡೆದು ಕೊಂಡಿತು. ವೀಡಿಯೋದಲ್ಲಿ ಒಬ್ಬರು ಮಂಗನಿಗೂ ಯಾಕೆ ಒಂದು ಮಾಸ್ಕ್ ಹಾಕಬಾರದು ಎಂದು ಕಿಚಾಯಿಸುತ್ತಿರುವ ಧ್ವನಿ ದಾಖಲಾಗಿದೆ.

 

Advertisement

Advertisement

Udayavani is now on Telegram. Click here to join our channel and stay updated with the latest news.

Next