ವಿಜಯಪುರ : ಆಕಸ್ಮಿಕ ವಿದ್ಯುತ್ ಆಘಾತದಿಂದ ಸಾವಿಗಿಡಾದ ಕೋತಿಯನ್ನು ಕೋವಿಡ್ ನಿರ್ಬಂಧದ ಮಧ್ಯೆಯೂ ಮೆರವಣಿಗೆ ಮಾಡಿ, ಹಿಂದೂ ಧಾರ್ಮಿಕ ವಿಧಿ ವಿಧಾನದ ಮೂಲಕ ಅಂತ್ಯಸಂಸ್ಕಾರ ಮಾಡಿದ ಘಟನೆ ನಡೆದಿದೆ.
ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ಭಾನುವಾರ ವಿದ್ಯುತ್ ತಗುಲಿ ಹನುಮಾನ್ ದೇವಸ್ಥಾನದ ಆವರಣದಲ್ಲಿ ಕೋತಿ ಸಾವನಪ್ಪಿದೆ.
ಗ್ರಾಮದ ಹನುಮಾನ್ ದೇವಸ್ಥಾನದ ಜೀರ್ಣೋದ್ದಾರ ಕಾರ್ಯ ನಡೆಯುತ್ತಿದೆ. ಕಳೆದ ಎರಡು ದಿನಗಳಿಂದ ಊರಲ್ಲೇ ಓಡಾಡಿಕೊಂಡಿದ್ದ ಕೋತಿ ಭಾನುವಾರ ದೇವಸ್ಥಾನದ ಆವರಣದಲ್ಲಿನ ವಿದ್ಯುತ್ ತಂತಿ ತಗುಲಿ ಸಾವನಪ್ಪಿದೆ.
ಸುದ್ದಿ ತಿಳಿದ ಗ್ರಾಮಸ್ಥರು ಕೋತಿಗೆ ಹೂವಿನ ಹಾರ, ಹೊಸ ಬಟ್ಟೆ ತೊಡಿಸಿ, ಶಂಕರ ಎಂಬವರ ಚಕ್ಕಡಿಯಲ್ಲಿ ಕೋತಿಯ ಶವ ಕೂರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದಾರೆ.
ಇದನ್ನೂ ಓದಿ:ಸಿಎಂ ರಾಜೀನಾಮೆ ಹೇಳಿಕೆಯ ಅರ್ಥ ಸ್ಥಾನ ತ್ಯಜಿಸುತ್ತಾರೆಂದಲ್ಲ : ಡಿಸಿಎಂ
ಸಾಂಪ್ರದಾಯಿಕ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಿ, ನಂತರ ದೇವಸ್ಥಾನದ ಆವರಣದಲ್ಲೇ ಹಿಂದೂ ದಾರ್ಮಿಕ ವಿಧಿ ವಿಧಾನದಂತೆ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.