Advertisement

ಸೂಕ್ಷ್ಮ ಮತಗಟ್ಟೆಗಳ ಮೇಲೆ ನಿಗಾ: ಆಯೋಗ

11:06 PM Apr 27, 2023 | Team Udayavani |

ಬೆಂಗಳೂರು: ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳ ಮೇಲೆ ತೀವ್ರತರವಾದ ನಿಗಾವಿಟ್ಟು ಪ್ರಜಾಸತ್ತಾತ್ಮಕ ಪ್ರಕ್ರಿಯೆಯಾದ ಮತದಾನವನ್ನು ಸುರಕ್ಷಿತವಾಗಿ ನಡೆಸಲು ಕಟಿಬದ್ಧವಾಗಿರು ವುದಾಗಿ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

Advertisement

ಬಿಜೆಪಿ ಮುಖಂಡರೊಬ್ಬರು ಸೂಕ್ಷ್ಮ ಮತಗಟ್ಟೆಗಳ ಬಗ್ಗೆ ಮಾಹಿತಿ ನೀಡಿ ಎಂದು ಎಂದು ಕಾರ್ಯಕರ್ತರಿಗೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾದ ಪತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿ ಆಯೋಗ ಈ ಸ್ಪಷ್ಟನೆ ನೀಡಿದೆ. ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳನ್ನು ಜಿಲ್ಲಾ ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸ್‌ ಅಧೀಕ್ಷರು (ಎಸ್‌ಪಿ) ಜಂಟಿಯಾಗಿ ಗುರುತಿಸಿರುತ್ತಾರೆ. ಹಾಗೆಯೇ ಇಂತಹ ಮತ್ತಗಟ್ಟೆಗಳನ್ನು ನಿರ್ವಹಿಸಲು ಆಯೋಗ ತನ್ನದೇ ಅದ ಮಾರ್ಗದರ್ಶಿ ನಿಯಮಗಳನ್ನು ಹೊಂದಿದ್ದು ಅದನ್ನು ಚಾಚು ತಪ್ಪದೆ ಪಾಲಿಸಲಾಗುತ್ತದೆ ಎಂದು ಆಯೋಗ ಹೇಳಿದೆ.

ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಯ ಮೇಲೆ ವೆಬ್‌ಕಾಸ್ಟ್‌ ಮೂಲಕ ನಿಗಾ ಇಡಲಾಗುತ್ತದೆ. ಈ ಮತಗಟ್ಟೆಗಳಿಗೆ ಕೇಂದ್ರಿಯ ಪಡೆಗಳನ್ನು ನಿಯೋಜಿಸಲಾಗುತ್ತದೆ. ವೀಡಿಯೋಗ್ರಾಫಿ ಮಾಡಲಾಗುತ್ತದೆ. ಆಯೋಗ ನೇಮಿಸಿರುವ ವೀಕ್ಷಕರು ಈ ಕೇಂದ್ರಗಳ ಮೇಲೆ ಹೆಚ್ಚಿನ ನಿಗಾ ಇಟ್ಟಿರುತ್ತಾರೆ. ಯಾವುದೇ ರಾಜಕೀಯ ಪಕ್ಷಕ್ಕೆ ಏನಾದರೂ ಸಲಹೆ ನೀಡಲಿದ್ದರೆ ಅಥವಾ ಆತಂಕವಿದ್ದರೆ ರಿಟರ್ನಿಂಗ್‌ ಅಫಿಸರ್‌ ಅಥವಾ ಜಿಲ್ಲಾ ಚುನಾವಣಾ ಅಧಿಕಾರಿಯ ಗಮನಕ್ಕೆ ತರಬಹುದು. ಸುರಕ್ಷಿತ ಮತ್ತು ಶಾಂತಿಯುತ ಮತದಾನ ನಡೆಯಲು ಅಗತ್ಯವಾದ ಎಲ್ಲ ಕ್ರಮಗ ಳನ್ನು ಆಯೋಗ ತೆಗೆದುಕೊಳ್ಳುತ್ತದೆ ಆಯೋಗ ಭರವಸೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next