Advertisement

ಹಣ ಬಿಟ್ಬಿಟ್ಟು ಟಾಯ್ಲೆಟ್‌ ಕಟ್ಟಿದ್ರು

03:10 PM Jun 11, 2017 | Team Udayavani |

ಬಿಜ್ನೋರ್‌: ಶೌಚಾಲಯ ಕಟ್ಟಿಸಿಕೊಳ್ಳಲು ಸರಕಾರ ಬಿಡುಗಡೆ ಮಾಡಿದ್ದ 17.5 ಲಕ್ಷ ರೂ. ಹಿಂದಿರುಗಿಸಿದ ಉತ್ತರ ಪ್ರದೇಶದ ಬಿಜ್ನೋರ್‌ ಜಿಲ್ಲೆಯ ಗ್ರಾಮವೊಂದರ ನಿವಾಸಿಗಳು, ಸ್ವಂತ ಹಣದಲ್ಲೇ ಶೌಚಾಲಯ ಕಟ್ಟಿಕೊಳ್ಳುವ ಮೂಲಕ ಇಡೀ ದೇಶಕ್ಕೇ ಮಾದರಿಯಾಗಿದ್ದಾರೆ. ಈ ಮೂಲಕ ರಮ್ಜಾನ್‌ ತಿಂಗಳನ್ನು ಅರ್ಥಪೂರ್ಣವಾಗಿ ಆಚರಿಸುವುದು ಇಲ್ಲಿನ ಜನರ ಆಶಯವಾಗಿದೆ.

Advertisement

ಮುಸ್ಲಿಂ ಪ್ರಾಬಲ್ಯವಿರುವ ಮುಬಾರಕ್‌ಪುರ್‌ ಕಾಲಾ ಗ್ರಾಮದಲ್ಲಿ 661 ಕುಟುಂಬಗಳಿದ್ದು, ಈ ಪೈಕಿ ಕೇವಲ 146 ಕುಟುಂಬಗಳು ಮಾತ್ರ ಶೌಚಾಲಯ ಹೊಂದಿದ್ದವು. ಉಳಿದವರೆಲ್ಲ ಶೌಚಕ್ಕೆ ಬಯಲನ್ನೇ ಆಶ್ರಯಿಸಿದ್ದರು. ಹೀಗಾಗಿ ಗ್ರಾಮವನ್ನು ಬಯಲು ಶೌಚಮುಕ್ತವಾಗಿಸಲು ಸ್ಥಳೀಯ ಪಂಚಾಯತ್‌ಗೆ ಜಿಲ್ಲಾಡಳಿತದಿಂದ 17.5 ಕೋಟಿ ರೂ. ಮಂಜೂರಾಯಿತು. ಆದರೆ “ಇದು ರಮ್ಜಾನ್‌ ತಿಂಗಳು. ಈ ಪವಿತ್ರ ಮಾಸದಲ್ಲಿ ದಾನ ಕೊಡಬೇಕೇ ಹೊರತು, ಉತ್ತಮ ಕೆಲಸಕ್ಕಾಗಿ ಹಣಕಾಸು ನೆರವು ಪಡೆಯುವುದು ತಪ್ಪಾಗುತ್ತದೆ. ಎಲ್ಲ ಮನೆಗಳಲ್ಲೂ ಶೌಚಾಲಯ ಕಟ್ಟುವುದು ಒಳ್ಳೆಯ ಕೆಲಸ. ಹಾಗೇ ಈ ಕೆಲಸವನ್ನು  ನಮ್ಮ ಹಣದಲ್ಲೇ ಮಾಡಿಕೊಳ್ಳುತ್ತೇವೆ’ ಎಂದು ಜಿಲ್ಲಾಡಳಿತಕ್ಕೆ ಪತ್ರ ಬರೆದ ಗ್ರಾಮಸ್ಥರು, ಒಟ್ಟೂ ಹಣವನ್ನು ಹಿಂದಿರುಗಿಸಿದ್ದಾರೆ. ಪರಿಶೀಲನೆ ನಡೆಸಿದ ಅಧಿಕಾರಿಗಳು ಈ ಗ್ರಾಮವನ್ನು “ಬಯಲು ಶೌಚ ಮುಕ್ತ ಗ್ರಾಮ’ ಎಂದು ಘೋಷಿಸಿದ್ದಾರೆ. ಸಾರ್ವಜನಿಕರ ನಿರ್ಧಾರವನ್ನು “ಉದಾತ್ತ ಚಿಂತನೆ’ ಎಂದು ಅಧಿಕಾರಿಗಳು ಬಣ್ಣಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next