Advertisement

ಸ್ವೀಡನ್‌: ಅವ್ಯವಹಾರ ತನಿಖೆಗೆ ಅಧಿಕಾರಿ

04:45 PM May 08, 2020 | mahesh |

ಮಣಿಪಾಲ: ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಹಣಗಳು ಪೋಲು ಆಗಬಾರದು ಎಂಬ ಕಾರಣಕ್ಕೆ ಸ್ವೀಡಿಷ್‌ ಸರಕಾರ ತನಿಖಾಧಿಕಾರಿಯನ್ನು ನೇಮಿಸಲು ಮುಂದಾಗಿದೆ. ಕೊರೊನಾ ಪರಿಹಾರಕ್ಕೆ ಮೀಸಲಾದ ಹಣ ಯಾವುದೇ ಕಾರಣಕ್ಕೆ ದುಂದು ವೆಚ್ಚವಾಗಬಾರದು ಎಂಬ ಕಾರಣಕ್ಕಾಗಿ ಈ ಕ್ರಮ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಹೆಚ್ಚಿನ ಜನರು ಸಹಾಯ ಮಾಡಲು ಮುಂದಾಗುತ್ತಾರೆ. ಬಡವರಿಗೆ ಮತ್ತು ಸಮಸ್ಯೆಯಲ್ಲಿ ಸಿಲುಕಿ ಹಾಕಿಕೊಂಡವರಿಗೆ ನೆರವಾಗಲು ಮುಂದಾಗುತ್ತಾರೆ. ಆದರೆ ಎಲ್ಲರೂ ಅಲ್ಲ. ಕೆಲವರು ಈ ಸಂದರ್ಭಗಳನ್ನು ದುರ್ಬಳಕೆ ಮಾಡಿಕೊಳ್ಳುವ ಅಪಾಯ ಇದೆ. ಸರಕಾರ ಖರ್ಚು ಮಾಡುವ ಹಣವು ಬಿಕ್ಕಟ್ಟಿನ ನಿರ್ವಹಣೆಗೆ ಹೋಗಬೇಕೇ ಹೊರತು ಭ್ರಷ್ಟರ ಜೇಬಿಗೆ ಬೀಳಬಾರದು ಎಂಬುದು ಸರಕಾರದ ಲೆಕ್ಕಾಚಾರ. ಹಾಗಾಗಿ ವಿಶೇಷ ತನಿಖಾಧಿಕಾರಿಯನ್ನು ನೇಮಿಸಲು ಮುಂದಾಗಿದೆ.

Advertisement

ಈ ತನಿಖಾಧಿಕಾರಿಗೆ ಆ್ಯಂಟಿ ಫ್ರಾಡ್‌ ಜನರಲ್‌’ ಎಂದು ಹೆಸರಿಡಲಾಗಿದೆ. ಸರಕಾರ ನೀಡುವ ನೆರವಿನ ಪ್ಯಾಕೇಜ್‌ಗಳು ಸರಿಯಾಗಿ ಬಳಕೆಯಾಗುತ್ತಿವೆಯೇ? ಎಂಬುದನ್ನು ಪರಿಶೀಲಿಸುವುದು ಮತ್ತು ಯಾವುದೇ ಅಕ್ರಮಗಳು ಅಥವಾ ಅನುಮಾನಾಸ್ಪದ ಚಟುವಟಿಕೆಗಳನ್ನು ನಿಯಂತ್ರಿಸುವುದು ಇವರ ಕೆಲಸವಾಗಿದೆ. ಈ ವರೆಗೆ ಸ್ವೀಡನ್‌ನಲ್ಲಿ ಒಟ್ಟು 24, 623 ಕೋವಿಡ್ ಪ್ರಕರಣ ಪತ್ತೆಯಾಗಿದ್ದು, ಅವರಲ್ಲಿ 4,074 ಮಂದಿ ಚೇತರಿಕೆಗೊಂಡಿದ್ದಾರೆ. ಒಟ್ಟು 3,040 ಬಂದಿ ಪ್ರಾಣ ತೆತ್ತಿದ್ದಾರೆ. ಆರಂಭದಲ್ಲಿ ವೈರಸ್‌ ತಡೆಗೆ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಇದ್ದ ಸ್ವೀಡನ್‌ ಬಳಿಕ ಎಚ್ಚೆತ್ತುಕೊಂಡಿತ್ತು. ಲಾಕ್‌ಡೌನ್‌ ಮಾಡದಿದ್ದರೂ ಕೆಲವು ನಿರ್ಬಂಧಗಳನ್ನು ಜಾರಿಗೆ ತಂದಿತ್ತು.

ಕೆಲವೊಂದು ಮಾರ್ಗಸೂಚಿಗಳನ್ನು ಜಾರಿ ಮಾಡಿದ್ದು 50ಕ್ಕಿಂತ ಹೆಚ್ಚು ಜನರು ಒಟ್ಟು ಸೇರುವುದು, ಅನಗತ್ಯ ಪ್ರಯಾಣ ಮಾಡುವುದಕ್ಕೆ ನಿರ್ಬಂಧ ಹೇರಿದೆ. ಬಾರ್‌, ಹೊಟೇಲುಗಳು ಈ ನಿರ್ಬಂಧವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಆದೇಶಿಸಿತ್ತು. ರೈಲುಗಳ ಸಂಚಾರ ಕಡಿಮೆ, ಮನೆಯಿಂದಲೇ ಕೆಲಸ, ಸೋಂಕಿತರು ಅಥವಾ ಶಂಕಿತರನ್ನು ಭೇಟಿ ಮಾಡಬಾರದು, ಸ್ಥಳೀಯ ಸಾರಿಗೆಯ ಸಂಚಾರದಲ್ಲಿ ಸಾಮಾಜಿಕ ಅಂತರ ಪಾಲಿಸಬೇಕು ಎಂದು ಸೂಚನೆ ನೀಡಿದೆ. ಶಾಲೆ ಕಾಲೇಜುಗಳನ್ನು ಮುಚ್ಚಲಾಗಿದ್ದು ನಗರಪಾಲಿಕೆ ಮತ್ತು ಸ್ಥಳೀಯಾಡಳಿತಗಳು ಅಗತ್ಯವಿದ್ದಲ್ಲಿ ಸ್ಥಳೀಯವಾಗಿ ನಿರ್ಧಾರ ತೆಗೆದುಕೊಳ್ಳಬಹುದು ಎಂದು ವಿಶೇಷಾಧಿಕಾರ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next