Advertisement

ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದಲ್ಲಿ ಗೋಲ್ ಮಾಲ್:ಇಬ್ಬರ ವಿರುದ್ಧ ಕೇಸ್ ದಾಖಲು

06:55 PM Mar 18, 2022 | Team Udayavani |

ಕುಷ್ಟಗಿ: ಇಲ್ಲಿನ ಗುರು ಭವನದಲ್ಲಿರುವ ಕುಷ್ಟಗಿ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದಲ್ಲಿ ನಡೆದ ಗೋಲಮಾಲ್ ನಲ್ಲಿ 89,79,721 ರೂ.ದುರಪಯೋಗದ ಹಿನ್ನೆಲೆಯಲ್ಲಿ ಸಂಘದ ಕಾರ್ಯದರ್ಶಿ ಹಾಗೂ ಲೆಕ್ಕಿಗನ ವಿರುದ್ದ ದೂರು  ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಬಸವರಾಜ್ ಹೊರಪೇಟಿ, ಲೆಕ್ಕಿಗ ಸುಧೀಕುಮಾರ ಗೋನಾಳಮಠ ಕಳೆದ 2004ರಿಂದ ಕಾರ್ಯನಿರ್ವಹಿಸುತ್ತಿದ್ದರು. ಕಳೆದ 31-12-2019ರಂದು, 2018-19ನೇ ಸಾಲಿನಲ್ಲಿ 89,79,721 ರೂ. ವ್ಯತ್ಯಾಸವಾಗಿದೆ ಎಂದು ಲೆಕ್ಕಪರಿಶೋಧನಾ ವರದಿ ನೀಡಿದೆ.

ಈ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಕಲಂ 64, ಕ.ಸ.ಸಂ. ಕಾಯ್ದೆ 1959 ರ ವಿಚಾರಣ ವರದಿಯ ಮೇಲೆ ಕಲಂ 68 ಕ.ಸ.ಸಂ 1959 ತನಿಖಾ ಆದೇಶದ ಮೇರೆಗೆ ಹಣ ದುರಪಯೋಗವಾಗಿರುವ ಬಗ್ಗೆ ಕೊಪ್ಪಳದ ಸಹಕಾರ ಇಲಾಖೆಯ ಉಪ ನಿಭಂಧಕರು ಸದರಿಯವರ ಮೇಲೆ ಕಾನೂನು ಕ್ರಮದ ಆದೇಶ ನೀಡಿದ್ದರು.

ಸದರಿ ಆದೇಶದ ಹಿನ್ನೆಲೆಯಲ್ಲಿ 13-2-2022ರಂದು ವಿಶೇಷ ಸಭೆಯಲ್ಲಿ ಆಡಳಿತ ಮಂಡಳಿಯಲ್ಲಿ ನಿರ್ಣಯಿಸಿದಂತೆ ಮೂರು ಬಾರಿ ನೋಟೀಸ್ ನೀಡಿದ್ದರೂ, ದುರಪಯೋಗ ಮಾಡಿದ ಮೊತ್ತ ಮರು ಪಾವತಿಸಿಲ್ಲ.

ಪ್ರಾಥಮಿಕ ಪತ್ತಿನ ಶಿಕ್ಷಕರ ಸಂಘಕ್ಕೆ ಹಾಗೂ ಶೇರುದಾರರಿಗೆ ಮೋಸ, ನಕಲಿ ಖಾತೆ ಸೃಷ್ಟಿಸಿ ಸಂಘಕ್ಕೆ ಮೋಸ ಮಾಡಿದ ಆರೋಪಿಗಳಾದ ಕಾರ್ಯದರ್ಶಿ ಬಸವರಾಜ ಹೊರಪೇಟಿ, ಲೆಕ್ಕಿಗ ಸುಧೀರಕುಮಾರ ಗೋನಾಳಮಠ ವಿರುದ್ದ ದೂರು ದಾಖಲಿಸಲಾಗಿದೆ ಎಂದು ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next