Advertisement
ಬೆಳಗ್ಗೆ 6 ಗಂಟೆ ಸುಮಾರಿಗೆ 15 ಮಂದಿ ಎಸಿಬಿ ಅಧಿಕಾರಿಗಳು ಮನೆಯ ಬಾಗಿಲು ಬಡಿಯುತ್ತಿದ್ದಂತೆ ಎಚ್ಚೆತ್ತ ಸ್ವಾಮಿ ಸುಮಾರು 45 ನಿಮಿಷಗಳ ಕಾಲ ಬಾಗಿಲು ತೆರೆದಿರಲಿಲ್ಲ. ಈ ವೇಳೆ ತಮ್ಮ ಫ್ಲ್ಯಾಟ್ ಮೇಲ್ಭಾಗದಲ್ಲಿರುವ ಸಹೋದರಿಗೆ ಕರೆ ಮಾಡಿ, ಮನೆಯಲ್ಲಿರುವ ಚಿನ್ನಾಭರಣ ಮತ್ತು ನಗದು ಹಣವನ್ನು ಕೆಳಗಡೆ ಎಸೆಯುವಂತೆ ಸೂಚಿಸಿದ್ದು, ನಾನು ಕೂಡ ಬ್ಯಾಗ್ ಎಸೆಯುತ್ತೇನೆ.
Related Articles
Advertisement
15ಕ್ಕೂ ಹೆಚ್ಚು ಪ್ರಕರಣಗಳು: ಎಸಿಬಿ ಕೇಂದ್ರ ಕಚೇರಿಯ ಕೂಗಳತೆ ದೂರದಲ್ಲಿರುವ ಕೆಐಎಡಿಬಿ ಕಚೇರಿಯಲ್ಲಿ ಟಿ.ಆರ್.ಸ್ವಾಮಿ ನಡೆಸುತ್ತಿದ್ದ ಭಾರಿ ಭ್ರಷ್ಟಾಚಾರದ ಬಗ್ಗೆ ಭ್ರಷ್ಟಚಾರ ನಿಗ್ರಹ ದಳಕ್ಕೆ ಸುಮಾರು 15ಕ್ಕೂ ಹೆಚ್ಚು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಆರೋಪಿತ ಅಧಿಕಾರಿಯ ವಿರುದ್ಧ ಕಾರ್ಯಾಚರಣೆ ನಡೆಸಿ ದಾಳಿ ನಡೆಸಲಾಗಿದೆ. ಸ್ವಾಮಿ ವಿರುದ್ಧ 2014ರಲ್ಲಿ ಲೋಕಾಯುಕ್ತ ಸಂಸ್ಥೆಯಲ್ಲಿಯೂ ದೂರು ದಾಖಲಾಗಿತ್ತು ಎಂದು ತಿಳಿದು ಬಂದಿದೆ.
ಐಟಿ, ಇಡಿಗೆ ಮಾಹಿತಿ: ಸ್ವಾಮಿ ಮತ್ತು ಗೌಡಯ್ಯ ಮನೆಯಲ್ಲಿ ಪತ್ತೆಯಾದ ಕೋಟಿ ಕೋಟಿ ಹಣ ಮತ್ತು ಚಿನ್ನಾಭರಣ ಹಾಗೂ ದಾಖಲೆಗಳ ಬಗ್ಗೆ ಲೆಕ್ಕಪರಿಶೋಧಕರಿಂದ ಪರಿಶೀಲಿಸಲಾಗುವುದು. ಒಂದು ವೇಳೆ ಆದಾಯಕ್ಕೂ ಮೀರಿ ಆಸ್ತಿಗಳಿಸಿದ ಮಾಹಿತಿ ಪತ್ತೆಯಾದಲ್ಲಿ ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ನೀಡಲಾವುದು ಎಂದು ಎಸಿಬಿ ಮೂಲಗಳು ತಿಳಿಸಿವೆ.