ಲೋಕ ಸಭೆ ಚುನಾವಣೆಯ ನಂತರ ಬಿಜೆಪಿ ಈ ಸಲ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ ಅಂತ ಸುಮಾರು ಜನ ಭವಿಷ್ಯ ನುಡಿದಾಗಿದೆ. ವಿಷಯ ಅದರಲ್ಲ, ಇದು ಅತಿ ಹೆಚ್ಚು ಸೀಟು ಗಳಿಕೆಯೊಂದಿಗೆ ಚುನಾವಣಾ ಪ್ರಚಾರಕ್ಕೆ ಅತಿ ಹೆಚ್ಚು ಹೂಡಿಕೆ ಮಾಡಿದ ಪಕ್ಷವಾಗಿಯೂ ಹೆಸರಾಗಿದೆ. ವಿರೋಧ ಪಕ್ಷವಾಗಿರುವ ಕಾಂಗ್ರೆಸ್‌ನ “ಕೈ’ಯಿಂದ ಅಂತ ಹೇಳಿಕೊಳ್ಳುವ ಹೂಡಿಕೆ ಆಗಿಲ್ಲ. ಚುನಾವಣಾ ಪ್ರಚಾರ ಸಂಬಂಧ ಒಟ್ಟು ಗೂಗಲ್ ಆ್ಯಡ್ಸ್‌ನಲ್ಲಿ ರಾಜಕೀಯ ಪಕ್ಷಗಳು ಹೂಡಿರುವ ಮೊತ್ತ 27 ಕೋಟಿಯಂತೆ. ಇದರಲ್ಲಿ ಶೇ. 60ರಷ್ಟು ಅಂದರೆ 17 ಕೋಟಿ ಬಿಜೆಪಿಯದ್ದು. ಕಾಂಗ್ರೆಸ್‌ನದ್ದು 2.7ಕೋಟಿ. ಬಿಜೆಪಿ ನಂತರ ಅತಿ ಹೆಚ್ಚು ಪ್ರಚಾರಕ್ಕೆ ಹಣ ಹಾಕಿರುವುದು ಡಿಎಂಕೆ ಪಕ್ಷ. ಅದು 4 ಕೋಟಿ. ಜಾಹೀರಾತು ತಜ್ಞರ ಲೆಕ್ಕದ ಪ್ರಕಾರ ಬಿಜೆಪಿ ಕಾಂಗ್ರೆಸ್‌ಗಿಂತ ಶೇ.500ರಷ್ಟು ಹೆಚ್ಚು ಹಣ ಗೂಗಲ್ ಜಾಹೀರಾತಿಗೆ ವ್ಯಯಿಸಿದೆಯಂತೆ. ಫೆಬ್ರವರಿಯಿಂದ ಮೇ ತನಕ ಫೇಸ್‌ಬುಕ್ ಪ್ರಚಾರಕ್ಕಾಗಿಯೇ ಬಿಜೆಪಿ 4 ಕೋಟಿ ಹಣ ಹಾಕಿದೆ. ಕಾಂಗ್ರೆಸ್ ಇದೇ ಅವಧಿಯಲ್ಲಿ 1.3 ಕೋಟಿ ಹೂಡಿಕೆ ಮಾಡಿದೆಯಂತೆ.