Advertisement
ಏನು ಕಾರಣ?ಒಂದೆಡೆಯಿಂದ ಡಿಜಿಟಲ್ ಪಾವತಿಯ ಪ್ರಮಾಣವು ನಿಧಾನಗತಿಯಲ್ಲಿ ಏರಿಕೆಯನ್ನು ಕಾಣುತ್ತಿದೆಯಾದರೂ ನಿರೀಕ್ಷಿತ ಯಶಸ್ಸು ಲಭಿಸಿಲ್ಲ. ಹಿಂದಿನಿಂದಲೂ ಜನರು ಅದರಲ್ಲೂ ಅರೆಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳ ಜನರು ಇಂದಿಗೂ ತಮ್ಮ ಎಲ್ಲ ವ್ಯವಹಾರಗಳಿಗೆ ನಗದನ್ನೇ ಆಶ್ರಯಿಸಿರುವುದರಿಂದ ಒಟ್ಟಾರೆಯಾಗಿ ನಗದಿನ ಪ್ರಮಾಣ ಹೆಚ್ಚಾಗಿದೆ. ಇನ್ನು ಕೊರೊನಾ ಮತ್ತು ಈ ಹಿನ್ನೆಲೆಯಲ್ಲಿ ಜಾರಿಗೊಳಿಸಲಾದ ಲಾಕ್‌ಡೌನ್‌ನ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಟಿಎಂಗಳಿಂದ ನಗದು ಹಿಂಪಡೆಯುವುದಕ್ಕೆ ಮುಗಿಬಿದ್ದಿದ್ದರಿಂದ ಈ ಬೆಳವಣಿಗೆ ಆಗಿದೆ. ದಿನಬಳಕೆ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗಾಗಿ ಜನರು ನಗದು ಡ್ರಾ ಮಾಡಿಟ್ಟುಕೊಂಡಿದ್ದರು. ಇನ್ನು ಯುಪಿಐ ಅಥವಾ ಪಿಒಎಸ್ ಮೂಲಕ ಶಾಪಿಂಗ್ ಮಾಡುವವರ ಸಂಖ್ಯೆಯೂ ಕಡಿಮೆಯಾಗಿದೆ. ಇದಕ್ಕೆ ಲಾಕ್‌ಡೌನ್ ಅವಧಿಯಲ್ಲಿ ಅಂಗಡಿಗಳು ಮುಚ್ಚಿದ್ದು ಕಾರಣ ಎಂದು ಹೇಳಲಾಗುತ್ತದೆ. ಸಣ್ಣ ಮೊತ್ತದ ವ್ಯವಹಾರಗಳಲ್ಲಿ ಜನರು ಡಿಜಿಟಲ್ ಪಾವತಿಗೆ ಆದ್ಯತೆ ನೀಡುತ್ತಿದ್ದರೆ ದೊಡ್ಡ ಮೊತ್ತದ ವ್ಯವಹಾರ ನಡೆಸುವ ಸಂದರ್ಭದಲ್ಲಿ ನಗದಿಗೇ ಒತ್ತು ನೀಡುತ್ತಿದ್ದಾರೆ. ತೆರಿಗೆ ಹೊರೆಯಿಂದ ತಪ್ಪಿಸಿಕೊಳ್ಳುವುದೇ ಇದರ ಹಿಂದಿನ ಕಾರಣ ಎಂಬುದು ಆರ್ಥಿಕ ತಜ್ಞರ ವಿಶ್ಲೇಷಣೆ.
2020ರ ಅಕ್ಟೋಬರ್ 23ಕ್ಕೆ ಜನರ ಬಳಿ 26.19 ಲಕ್ಷ ಕೋಟಿ ರೂ. ಕರೆನ್ಸಿ ಇತ್ತು. ಅದೇ 4 ವರ್ಷಗಳ ಹಿಂದೆ 2016ರ ನವೆಂಬರ್ 4ರಲ್ಲಿ 8.22 ಲಕ್ಷ ಕೋಟಿ ರೂ. ಮಾತ್ರ ಇತ್ತು. ಅಂದರೆ ಜನರ ಬಳಿ ಇದ್ದ ನಗದು ಪ್ರಮಾಣದಲ್ಲಿ ಶೇ.45.7ರಷ್ಟು ಏರಿಕೆಯಾಗಿದೆ. 7.8 ಲಕ್ಷ ಕೋಟಿಗೆ ಇಳಿಕೆ
ಅಪನಗದೀಕರಣದ ಪರಿಣಾಮವಾಗಿ 2017ರ ಜನವರಿಯಲ್ಲಿ ಜನರ ಬಳಿ ಇದ್ದ ನಗದು 7.8 ಲಕ್ಷ ಕೋಟಿ ರೂ.ಗಳಿಗೆ ಇಳಿಕೆಯಾಯಿತು. ಇದೀಗ ಒಟ್ಟಾರೆ ವ್ಯವಹಾರದಲ್ಲಿ ನಗದು ನಿಧಾನಕ್ಕೆ ಏರಿಕೆ ಯಾಗುತ್ತಾ ಇದೆ. ಜನರು ನಗದು ಬಳಕೆ ಯನ್ನು ಕಡಿಮೆ ಮಾಡಲು ಸರಕಾರ ಮತ್ತು ಆರ್‌ಬಿಐ ನಾನಾ ಕ್ರಮ ಗಳನ್ನು ಕೈಗೊಂಡು ಡಿಜಿಟಲ್ ವ್ಯವಹಾರಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಅದರಂತೆ ಡಿಜಿಟಲ್ ಪಾವತಿ ಹೆಚ್ಚಿಸಲು ವಿವಿಧ ವ್ಯವಹಾರಗಳಲ್ಲಿ ನಗದು ಬಳಕೆಗೆ ನಿರ್ಬಂಧ ಹೇರಲಾಗಿದೆಯಾದರೂ ಇದು ಅಂತಹ ಪರಿಣಾಮ ಬೀರಿಲ್ಲ. ಕಳೆದ ಹತ್ತು ತಿಂಗಳುಗಳಲ್ಲಿ ನಗದು ಬಳಕೆ ಪ್ರಮಾಣ ತೀವ್ರ ಏರಿಕೆಯಾಗಿದೆ. 2020ರ ಜ. 3ರಲ್ಲಿ 21.79 ಲಕ್ಷ ಕೋಟಿ ರೂ. ಇದ್ದ ನಗದು, ಅ.23ಕ್ಕೆ 26.19 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿದೆ.
Related Articles
ಆರ್‌ಬಿಐ ಪ್ರಕಾರ ಡಿಜಿಟಲ್ ಪಾವತಿಯ ಮೊತ್ತ ಹಾಗೂ ಪ್ರಮಾಣಗಳೆರಡೂ ಹೆಚ್ಚಾಗಿದೆ. ಎಟಿಎಂ ಮೂಲಕ ನಗದು ಹಿಂಪಡೆಯುವಿಕೆ ಸ್ಥಿರವಾಗಿ ಹೆಚ್ಚಾಗುತ್ತಲೇ ಇದೆ. ಜನವರಿ 2017ರಲ್ಲಿ ಡೆಬಿಟ್ ಕಾರ್ಡ್ ವ್ಯವಹಾರ ಎಟಿಎಂ ಮತ್ತು ಪಿಒಎಸ್ ಹಿಂಪಡೆಯುವಿಕೆ 2,00,648 ಕೋಟಿ ರೂ.ಗಳಾಗಿದ್ದರೆ, 2020ರ ಆಗಸ್ಟ್ ವೇಳೆಗೆ ಅದು 2,37,778 ಕೋಟಿ ರೂ. ಗಳಿಗೆ ಹೆಚ್ಚಾಗಿತ್ತು.
Advertisement