Advertisement

ವೈದ್ಯರಿಗೆ ಹಣ ಮಾಡುವುದೇ ಮುಖ್ಯವಲ್ಲ: ರಾಜ್ಯಪಾಲ

05:30 PM Nov 23, 2017 | |

ಮೈಸೂರು: ವೈದ್ಯರು ಕೇವಲ ಹಣ ಮಾಡುವುದನ್ನೇ ಮುಖ್ಯವಾಗಿಸಿಕೊಳ್ಳದೆ, ಬಡವರ ಆರೋಗ್ಯ ಕಾಪಾಡುವ ಮೂಲಕ ದೇಶಕ್ಕಾಗಿ ಸೇವೆ ಸಲ್ಲಿಸಬೇಕಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ಅಭಿಪ್ರಾಯಪಟ್ಟರು.

Advertisement

ನಗರದ ಬನ್ನಿಮಂಟಪದ ಜೆಎಸ್‌ಎಸ್‌ ವೈದ್ಯಕೀಯ ಕಾಲೇಜಿನಲ್ಲಿ ಬುಧವಾರ ಆಯೋಜಿ ಸಿದ್ದ ಜೆಎಸ್‌ಎಸ್‌ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನಮಾಡಿ, ಘಟಿಕೋತ್ಸವ ಭಾಷಣದಲ್ಲಿ
ಮಾತನಾಡಿ, ಯಾವುದೇ ದೇಶದಲ್ಲಿ ಉತ್ತಮ ಆರೋಗ್ಯ ವ್ಯವಸ್ಥೆ ಇಲ್ಲದಿದ್ದರೆ ಬಲಿಷ್ಠ ರಾಷ್ಟ್ರ ವಾಗಲು ಸಾಧ್ಯವಿಲ್ಲ. ಹೀಗಾಗಿ ದೇಶದ ಗಡಿಯಲ್ಲಿ ಕೆಲಸ ಮಾಡುವ ಸೈನಿಕರಂತೆ ವೈದ್ಯರು ಸಮಾಜದಲ್ಲಿನ ಬಡಜನರ ಸೇವೆಗಾಗಿ ನಿಲ್ಲಬೇಕಿದೆ ಎಂದರು.

ವೈದ್ಯಕೀಯ ಕ್ಷೇತ್ರಕ್ಕೆ ಹೊಸದಾಗಿ ಬರುವವರು ಹಣದಾಸೆ ಮತ್ತು ವಿದೇಶಿ ವ್ಯಾಮೋಹ ಬದಿಗೊತ್ತಿ, ಸ್ವದೇಶದಲ್ಲೇ ಸೇವೆ ಸಲ್ಲಿಸಲು ಮುಂದಾಗಬೇಕು. ಸೇವೆ ಎನ್ನುವುದು ಎಲ್ಲಾ ಕ್ಷೇತ್ರಗಳಲ್ಲಿಲ್ಲ, ಆದರೆ ಆರೋಗ್ಯ ಕ್ಷೇತ್ರ ಸದಾಕಾಲ ಜನರ ಸೇವೆಗಾಗಿ ಸೀಮಿತವಾಗಿದೆ ಎಂದು ತಿಳಿಸಿದರು.

1,274 ಮಂದಿಗೆ ಪದವಿ: 8ನೇ ಘಟಿಕೋತ್ಸವ ದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ, ಔಷಧ ವಿಜ್ಞಾನ, ಆಡಳಿತ ನಿರ್ವಹಣಾ ಅಧ್ಯಯನ, ಜೀವವಿಜಾnನ, ಜೈವಿಕ ವೈದ್ಯಕೀಯ ನಿಕಾಯಗಳಲ್ಲಿನ ಸ್ನಾತಕ, ಸ್ನಾತಕೋತ್ತರ, ಡಾಕ್ಟರೇಟ್‌ ಹಂತಗಳಲ್ಲಿ 1274 ವಿದ್ಯಾರ್ಥಿಗಳಿಗೆ ಪದವಿ ನೀಡಲಾಯಿತು. ಇದೇ ವೇಳೆ 56 ಪದಕ ಮತ್ತು ಪ್ರಶಸ್ತಿಗಳನ್ನು 40 ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಜತೆಗೆ 22 ವಿದ್ಯಾರ್ಥಿಗಳು ಪಿಎಚ್‌.ಡಿ ಸಂಶೋಧನಾ ಪದವಿ, 5 ಮಂದಿ ಡಿಎಂ ಮತ್ತು ಎಂಸಿಎಚ್‌ ವೈದ್ಯಕೀಯ ಸೂಪರ್‌ ಸ್ಪೆಷಾಲಿಟಿ ಪದವಿ ತಮ್ಮದಾಗಿಸಿಕೊಂಡರು. 

ಸುತ್ತೂರುಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜೆಎಸ್‌ಎಸ್‌ ವಿವಿ ಕುಲಪತಿ ಡಾ. ಬಿ. ಸುರೇಶ್‌, ಜೆಎಸ್‌ಎಸ್‌ ಮಹಾವಿದ್ಯಾಪೀಠದ ಮುಖ್ಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಸಿ.ಜಿ. ಬೆಟಸೂರಮಠ, ಕುಲಸಚಿವ ಡಾ.ಬಿ.ಮಂಜುನಾಥ್‌, ಪರೀಕ್ಷಾ ನಿಯಂತ್ರಕ ಡಾ.ಆರ್‌.ವಿಜಯಸಿಂಹ, ಪ್ರಾಂಶುಪಾಲ ಡಾ.ಬಸವನಗೌಡ ಇದ್ದರು.

Advertisement

ಚಿನ್ನದ ಪದಕ ಪಡೆದವರು: ಘಟಿಕೋತ್ಸವದಲ್ಲಿ ಆರ್‌. ಪೂರ್ಣಿಮಾ, ಪವನ್‌ ಕುಲಕರ್ಣಿ, ಬಿ.ಬಿ. ಸವಿತಾರಾಣಿ, ಪೃಥ್ವಿಶ್ರೀ ರವೀಂದ್ರ, ಗೌತಮ್‌ ಕುಮಾರ್‌, ಜಿ.ಸಿ.ನಮ್ರತಾ, ಶ್ರುತಿ ಬಲ್ಲಾ, ಎಂ.ನವ್ಯ, ರಾಜೇಂದ್ರಪ್ರಸಾದ್‌ ಜಂಗ, ಅನುಭವ ವರ್ಮಾ, ಹಿಶಾನಿ ಪಟೇಲ್‌, ಸ್ಪೂರ್ತಿ ಜಿ.ಇಟಗಿ, ಅಖೀಲ ಪೊಚ್ಚಿನಪೆದ್ದಿ, ಕೆ.ಶ್ವೇತಾ, ಎಂ.ನಿಶ್ಚಿತಾ, ಇಸ್ತಾಮಲ್ಲಿಕ್‌, ಅಜಯ್‌ಕೌಶಿಕ್‌, ಕೆ.ಆರ್‌. ಪೂರ್ಣಿಮಾ ಚಂದ್ರನ್‌, ಗದುಪುದಿ ಶಾಲಿನಿ ಸಂಯುಕ್ತ, ದೀಬಾ ಜಾಹೀರ್‌, ಹೆಂಗ್‌ ಜೆನ್‌ ಯಂಗ್‌, ಶ್ರೀಜತಾಸುರ್‌, ರಾಯೇನಿ ಮೋಹನ್‌ ಕೃಷ್ಣ, ಎಸ್‌.ಎಸ್‌.ಮನುಸ್ಮಿತಾ, ಸಮೀರ್‌ ಕುಮಾರ್‌ ಪಾಂಡ, ಅಕೃತಿ ಗರ್ಗ್‌, ಶುಭರಾಜ್‌ ಶಹಾ, ಆರ್‌.ಸೂರ್ಯ, ಟಿ.ವಿನೀತಾ ಫ್ರಾನ್ಸಿಸ್‌, ನೀತು ಬೆನ್ನಿ, ನಿಖೀತಾ ಕೆ.ಹೆಬ್ಲೀ, ಜುನೀತಾ ಅನ್ನ ಬೆನ್ನಿ, ರೈರೋಸ್‌ ರಾಯ್‌, ಅಶ್ವಿ‌ನಿ ಪ್ರೇಮ ಕುಮಾರ್‌, ನಿಮ್ನಾ ಜಾರ್ಜ್‌, ಎಸ್ತರ್‌ ಪಿ.ಎಂಡ್ಜಲ, ಎಂ.ಮಮತಾ, ಜೀಬಾ ಪರ್ವೀನ್‌, ಜಿಯೋರ್ಗ ತಬಿತಾ ಅಲೆಕ್ಸ್‌ ಪದಕ ಪಡೆದುಕೊಂಡರು. 

ಗುಂಡು ಹೊಡೆಯಿರಿ ರಾಜ್ಯದ 8 ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ಸರಿಯಾದ ಕ್ರಮದಲ್ಲಿ ದಾಖಲೆ ಸಲ್ಲಿಸಿದರೆ 3 ದಿನಗಳಲ್ಲಿ ಒಪ್ಪಿಗೆ ಸೂಚಿಸಲಾಗುವುದು ಎಂದು ರಾಜ್ಯಪಾಲ ವಿ.ಆರ್‌.ವಾಲಾ ತಿಳಿಸಿದರು. ಘಟಿಕೋತ್ಸವದ ವೇಳೆ ಮಾತನಾಡಿ, ವಿವಿಗಳಿಗೆ ಕುಲಪತಿಗಳನ್ನು ನೇಮಿಸುವಲ್ಲಿ ನಮ್ಮ ಕಚೇರಿಯಿಂದ ಯಾವುದೇ ವಿಳಂಬವಾಗುತ್ತಿಲ್ಲ.
 
ಬದಲಿಗೆ ಸರ್ಕಾರ ಕ್ರಮಬದ್ಧವಾಗಿ ದಾಖಲೆ ಸಲ್ಲಿಸದ ಹಿನ್ನೆಲೆಯಲ್ಲಿ ಹಿಂದಕ್ಕೆ ಕಳುಹಿಸಲಾಗಿದೆ. ವಿವಿಗಳಲ್ಲಿನ ಖಾಲಿ
ಹುದ್ದೆ ಭರ್ತಿ ಮಾಡುವ ತೀರ್ಮಾನ ವಿವಿ ಮಟ್ಟದಲ್ಲೇ ಮಾಡಿಕೊಳ್ಳಬಹುದಾಗಿದೆ ಎಂದ ಅವರು, ವಿವಿಯಲ್ಲಿನ ಖಾಲಿ
ಹುದ್ದೆಯನ್ನು ಅಲ್ಲಿನ ಕುಲಪತಿಗಳೇ ಭರ್ತಿ ಮಾಡುವಂತೆ ದಾವಣಿಗೆರೆ ವಿವಿಗೆ ಪತ್ರ ಬರೆದ ಮೇಲೆ ಭರ್ತಿಗೆ ಮುಂದಾದ
ಕುಲಪತಿ ನಡೆಗೆ ಸರ್ಕಾರ ಹಸ್ತಕ್ಷೇಪಿಸಿದೆ. ಒಂದೊಮ್ಮೆ ವಿದ್ಯಾರ್ಥಿಗಳ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದ್ದರೆ ಸರ್ಕಾರಕ್ಕೆ ಹಾಗೂ ತಮಗೆ ಗುಂಡು ಹೊಡೆಯಿರಿ ಎಂದು ಮಾರ್ಮಿಕವಾಗಿ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next